ಬೀದರ್:ಕಲ್ಯಾಣ ನಾಡಿನ ಖ್ಯಾತ ಸಂಗೀತ ಕಲಾವಿದರಾದ ಶ್ರೀಮತಿ ಅಶ್ವಿನಿ ರಾಜಕುಮಾರ್ ಹಿರೇಮಠ್ ಬಂಪಳ್ಳಿ ದಂಪತಿಗಳಿಗೆ ಇತ್ತೀಚಿಗೆ ಜರುಗಿದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಸಂಸ್ಥಾನ ಮಠದ ಪೀಠಾರೋಹಣ ಮಹೋತ್ಸವದಲ್ಲಿ ದಂಪತಿಗಳು ಸಂಗೀತದಲ್ಲಿ ನಿಸ್ವಾರ್ಥದ ಅಮೋಘ ಸೇವೆಯನ್ನು ಪರಿಗಣಿಸಿ ಬೆಳಗಾವಿ ಜಿಲ್ಲೆಯ ತಪೋ ರತ್ನ ಷ. ಬ್ರ. ಡಾ, ವೀರಪ್ರಭು ಪಂಡಿತರಾಧ್ಯ ಶಿವಾಚಾರ್ಯರು ಕಲಾ ವೈಭವ ಪ್ರಶಸ್ತಿ ನೀಡಿ ಗೌರವಿಸಿದರು. ಔರಾದ ತಾಲೂಕಿನ ಬಂಪಳ್ಳಿಗ್ರಾಮದ ಇ ದಂಪತಿಗಳು ಸಂಗಿತದಲ್ಲಿ ವಿದ್ವತ ಮುಗಿಸಿ ನಾಡಿನ ಅನೇಕ ಕಡೆ ಸಂಗೀತದ ಸವಿ ಉಣಿಸುತ್ತಿದ್ದಾರೆ. ಇವರದ್ದು ನಿಸ್ವಾರ್ಥ ಸೇವೆ, ಗಡಿಭಾಗದಲ್ಲಿ ಸಂಗೀತ ಬೆಳಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಇವರು ಮತ್ತಷ್ಟು ಸಾಧನೆ ಮಾಡಿ ಇನ್ನಷ್ಟು ಬೆಳೆಯಲಿ ಎಂದು ಪೂಜ್ಯರು ಹಾರೈಸಿದರು.ಈ ಸಂದರ್ಭದಲ್ಲಿ ನಾಡಿನ ಕರ್ನಾಟಕ ರಾಜ್ಯದ ಐಜಿಪಿ ಶ್ರೀಶಂಕರ್ ಮಹಾದೇವ ಬಿದ್ರಿ. ಮಾಜಿ ಸಚಿವರು ಹಾಗೂ ಶಾಸಕರು ಸನ್ಮಾನ್ಯ ಶ್ರೀ ರಾಜಶೇಖರ್ ಬಿ ಪಾಟೀಲ್ ಹಾಗೂ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಸನ್ಮಾನ್ಯ ಶ್ರೀ ಸೂರ್ಯಕಾಂತ್ ನಾಗಮಾರಪಳ್ಳಿ ಹಾಗೂ ಅನೇಕ ರಾಜಕೀಯ ಧುರಿಣರು ಹಾಗೂ ಹರಚರಮೂರ್ತಿಗಳು ಶುಭ ಕೋರಿ ಆಶೀರ್ವದಿಸಿದರು
ವರದಿ:ಅಮರ ಮುಕ್ತೇದಾರ