“ಹನೂರು ತಾಲೂಕಿನ ದೊಮ್ಮನ ಗದ್ದೆ ಗ್ರಾಮದಲ್ಲಿ ಶನಿವಾರ ಸಂಜೆ ಎರಡು ತಿಂಗಳ ಗರ್ಭಿಣಿ ಮಹಿಳೆ ಪವಿತ್ರ ಬಾಯಿ (21) ನೇಣಿಗೆ ಶರಣಾಗಿದ್ದಾರೆ. ಇವರು ಅದೇ ಗ್ರಾಮದ ರಮೇಶ್ ಎಂಬುವರಿಗೆ ಮದುವೆಯಾಗಿ ಒಂದುವರೆ ವರ್ಷ ಕಳೆದಿದ್ದು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಈಕೆಯ ತಾಯಿ ಜಯಮ್ಮ ಇವರ ಕಿರಿ ಮಗಳ ಸಾವಿಗೆ ರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಈ ಸಾವಿಗೆ ನಿಖರ ಮಾಹಿತಿ ತಿಳಿದಿಲ್ಲ.ರಾಮಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದವರು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.”
ವರದಿ :ಉಸ್ಮಾನ್ ಖಾನ್.



















