ಎಳೆ ವಯಸ್ಸಿನ ಮರು
ಸಾಧನೆಯ ಎಳೆ ಚಿಗುರು
ಕೆಲ ಕಾಲಕ್ಕೆ ನೆಚ್ಚಿನ ಗುರು
ಭೋದಿಸಿ ತನುಮನವನ್ನ
ಸಾಧಿಸಿ ಸಹಸ್ರ ಶೋಭೆಗಳನ್ನ
ನಿವಿಟ್ಟಾದ್ಭುತ್ತಾದರ್ಶ
ನಮಗೆಲ್ಲ ಸುದರ್ಶನ
ನಿವರಿಸಿದಾವಚನಗಳು
ವರವಾಗಿ ನೇರವಾಗಿವೆ
ಜೀವನದರಿವಿಗೆ
ಭಾವನೆಯ ಬದುಕಿಗೆ
ಭರವಸೆಯ ಹಸಿರಾಗಿ
ಸೋತು ನಿರಾದ ಮನಕ್ಕೆ
ಗಟ್ಟಿ ನಿಲ್ಲಿಸಿದ ವ್ಯಕ್ತಿತ್ವ
ಸಾಂತ್ವನ ನೀಡಿದ ಪ್ರೀತಿಯ ಮನ
ಸಾಧಕರನ್ನರಳಿಸಿದ ಮನ
ಕಾಲಾಂತರ ಬದುಕಿ
ಮನ್ವಂತರ ಕಾಲ ಬೆಳಗಿ
ನವೋದಯ ಉತ್ತೇಜಿಸಿ
ನಿರಂತರ ಸಾಧನೆ ನಿಮದಾಗಲಿ
ಶಿಸ್ತಿನ ಜೀವನ
ಗಾಂಭಿರ್ಯ್ಯದ ನಡೆ
ಹೆಚ್ಚಿತ್ತು ಪ್ರೀತಿ ಪಡೆ
ನಮ್ಮ ನೆಚ್ಚಿನ ಶಿಕ್ಷಕರು
ಶ್ರೀಯುತ ಸಾಗರ. ಎಸ್. ಪಿ. ಸರ್.
– ಆಶಾ. ಆರ್. ಲಕ್ಷಟ್ಟೆ.
ಯುವ ಕವಯತ್ರಿ ಬೀದರ.