ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಕರಿಯಾಗಿದೆ ಹೆಣ್ಣೆಂಬ ಭಾವ

ಶತಮಾನಗಳಿಂದ ಹಕ್ಕುಗಳಿಗೆ ಹೋರಾಟ ನಡೆಯುತ್ತಿದೆ ಹಕ್ಕುಗಳನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮನೋಭಾವದೊಂದಿಗೆ.ಇಂದು ಲಾಭದ ದೃಷ್ಟಿ ಕೋನದಲ್ಲಿ ಆಶಾಮಿಶೆಗಳ ಒಡಲಲಿ ಸೇರಿ ಅಧಿಕಾರದ ಮೋಹದಲಿ ಸರಕು ಸಾಧನದಂತೆ ನೋಡಲಾಗುತ್ತಿದೆ.
ಹೆಣ್ಣೆಂಬ ಭಾವ ಬಿಕರಿಯಾಗುತಿದೆ ಮಹಿಳಾ ದಿನಾಚರಣೆಯ ಹೆಸರಲಿ ಶುಭಾಶಯ ವಿನಿಮಯ ಒಂದು ದಿನದ ಮಟ್ಟಿಗೆ ವಿಜೃಂಭಣೆಯಿಂದ ನಡೆದು ಮರುದಿನ ಅದೇ ಗೀತೆ ಅದೇ ರಾಗ ಹಾಡುವಂತಾಗುತ್ತಿದೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡಿದರೆ ಸಾಲದು ಅವುಗಳನ್ನು ಕಾರ್ಯ ರೂಪದಲ್ಲಿ ತರಬೇಕಾದುದು ತುರ್ತಾಗಿ ನಡೆಯಬೇಕು.
ಮೀಸಲಾತಿಯನ್ನು ನೀಡಿದ್ದರು ಉತ್ಸವ ಮೂರ್ತಿಯಂತೆ ನಡೆಸಿಕೊಳ್ಳುತ್ತಾರೆ ವಿನಃ ಪೂರಕವಾದ ವಾತಾವರಣ ಸೃಷ್ಟಿ ಮಾಡುತ್ತಿಲ್ಲ.ಸಮಾನತೆಯು ಸಂವಿಧಾನದಲ್ಲಿ ಮುದ್ರಿತವಾದರ ಶಾಸನವಾಗಬಾರದು ಕಾರ್ಯಾಂಗದ ಜವಾಬ್ದಾರಿ ಆರಿಯಬೇಕಾಗಿದೆ.ಸ್ವಾತಂತ್ರ್ಯ ನೀಡಿದ್ದರು ಸಾಮಾಜಿಕ, ಆರ್ಥಿಕವಾಗಿ ಆಬಲೆಯೇ ಸರಿ.
ತಾಯ್ತನವು ಮಾರಾಟ ಮಾಡುವ ವಸ್ತುವಾಗಿ ಪರಿಣಮಿಸದೆ,

ತನ್ನ ತನವನ್ನೆ ಮರೆತು ಇತರರ ಸುಖಕ್ಕಾಗಿ ಹಂಬಲಿಸುವ ಜೀವ,ಸೈರಣೆ,ಧೈರ್ಯದ ಸಾಕಾರ ಮೂರ್ತಿ ಹೆಣ್ಣೆಂಬ ಭಾವ.ಪ್ರತಿಫಲ ಬಯಸದ ಜೀವ ತನ್ನ ಸುಖವ ಬದಿಗಿಟ್ಟು ಕುಟುಂಬ ಮನೆ ಮಕ್ಕಳು ನೋಡಿಕೊಳ್ಳುವ ಜೀವಕೆ ಒಂದಿಷ್ಟು ಸಾಂತ್ವನ ಪ್ರೀತಿ ಸಮಾನತೆ ನೀಡಬೇಕಾದುದು ನ್ಯಾಯವಲ್ಲವೇ?

ಸವಲತ್ತುಗಳನ್ನು ನೀಡಿದ್ದರೂ ಅವುಗಳು ಹೆಸರಿಗೆ ಮಾತ್ರ ಆಗಿವೆ ಒಳಗೊಳಗೆ ಗಂಡಿನ ಪಾರುಪತ್ಯದಿ ನಲುಗುತಿದೆ ನಗುವ ಕುಸುಮ.ಮೊದಲು ಕುಟುಂಬದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗೀ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಾಳೋ ಅದೇ ಮಹಿಳಾ ಸಬಲೀಕರಣ ಆದರೆ ತಂದೆ ಗಂಡ ಮನೆ ಮಕ್ಕಳ ಅಗತ್ಯ ಪೂರೈಸುವ ಮಹಿಳೆ ಅಬಲೆಯಲ್ಲದೇ ಮತ್ತೇನು?

ಆಧುನಿಕ ಜಗತ್ತಿನಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿ ಪುರುಷನಷ್ಟೇ ಸರಿ ಸಮನಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.ಆದರೆ ಕೌಟುಂಬಿಕವಾಗಿ ಅವಳ ಅಭಿಪ್ರಾಯಗಳಿಗೆ ಬೆಲೆ ಸಿಗದೇ ಇರುವುದು ಚಿಂತನಾರ್ಹ ವಿಷಯವಾಗಿದೆ.

ಮಹಿಳೆಯ ಭಾವನೆಗಳಿಗೆ ಬೆಲೆ ಕೊಡಿ ,ನೋವು ನಲಿವಿಗೆ ಹೆಗಲು ಕೊಡಿ ತಾಯಿ,ಸಹೋದರಿ,ಮಡದಿ, ಮಗಳಾಗಿರುವ ಆಕೆಗೆ ರಕ್ಷಣೆ ನೀಡಿ ಭಾವನೆಗಳು ಬಿಕರಿಯಾಗದಂತೆ ನೋಡಿಕೊಳ್ಳಿ ಅವಳ ಹಕ್ಕುಗಳು ಸರಿಯಾಗಿ ದೊರಕುವಂತೆ ಮಾಡಿ.
ಸಹನೆ ಶೀಲೆ
ಧೈರ್ಯ ಲೀಲೆ
ಶಕ್ತಿ ಪ್ರದಾಯಿನಿ
ಯುಕ್ತಿ ಪ್ರದರ್ಶಿನಿ.

ಮಮತಾಮಯಿ,ಕುಟುಂಬದ ನಿರ್ವಹಣೆ ಜೊತೆಗೆ ಕಾರ್ಯ ಭಾರದ ಹೊಣೆಹೊತ್ತು ದಣಿವರಿಯದ ಜೀವ ಅಹಂಭಾವ ತೊರೆದ ಭಾವ ತನ್ನ ಸುಖವ ತೊರೆದ ಜೀವಕೆ ಸಾಂತ್ವನ ನೀಡಿ ಶೋಷಣೆ ಆಗದಂತೆ ನೋಡಿಕೊಳ್ಳಿ,ಜೀವಾನುಸಂಧಾನದ ಗೆಳತಿಯಾಗಿ,ಸುಖಕ್ಕೆ ಹೆಂಡತಿಯಾಗಿ,ಮಮತೆಗೆ ತಾಯಿಯಾಗಿ,ಕರುಳ ಕುಡಿಯಾಗಿ ನಿಮ್ಮ ಕುಟುಂಬ ಬೆಳಗುವ ಹೆಣ್ಣನ್ನು ಗೌರವಿಸಿ ಪ್ರೀತಿ ತೋರಿ ಭಾವನೆಗಳನ್ನು ಬಿಕರಿಯಾಗುವುದನ್ನು ತಡೆಯಿರಿ.

ರೇಷ್ಮಾ ಕಂದಕೂರ
ಶಿಕ್ಷಕಿ,
ರಡ್ಡಿ ಅನುದಾನಿತ ಪ್ರಾಥಮಿಕ ಶಾಲೆ
ಸಿಂಧನೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ