ಬೀದರ್ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ರಣಗಂಬ ಜಾತ್ರೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಈ ರಣಗಂಬ ತನ್ನೆದೆ ಆದ ಇತಿಹಾಸ ಹೊಂದಿದೆ ಸುಮಾರು ದಶಕಗಳ ಹಿಂದೆ ದೇಶಮುಖ ಎಂಬ ಪಾಳೇಗಾರರು ವಡಗಾಂವ ಗ್ರಾಮವನ್ನ ಆಳ್ವಿಕೆ ಮಾಡುತ್ತಿದರು ಆ ಗ್ರಾಮದ ಮೇಲೆ ಶತ್ರುಗಳು ದಾಳಿ ಮಾಡಿದಾಗ ಆ ಶತ್ರುಗಳನ್ನ ಸೊಲಿಸಿದ ಸವಿ ನೆನಪಿಗಾಗಿ ಆಗಿನಿಂದ ಈ ಬೃಹತ್ ಗಾತ್ರದ ರಣಗಂಬ ಸ್ಥಾಪಿಸಿ ಪೂಜಿಸಲಾಗುತ್ತೆ ಎಂದು ಗ್ರಾಮಸ್ಥರು ತಿಳಿಸಿದರು.
ದೇಶಮುಖ ಮನೆತನದವರು ತಲೆಮಾರುಗಳಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ.ಸುಮಾರು 90 ಅಡಿ ಉದ್ದ ಹಾಗು 10 ಟನ್ ನಷ್ಟು ತೂಕವಿದ್ದು ಯಾವುದೇ ಯಂತ್ರದ ಸಹಾಯವಿಲ್ಲದೆ ಊರಿನ ಜನರೇ ಈ ರಣಗಂಬನ್ನ ಎತ್ತಿ ನಿಲ್ಲಿಸುವುದು ಈ ಜಾತ್ರೆಯ ವಿಶೇಷವಾಗಿದೆ.ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲೆ ಎತ್ತುತ್ತಾ ಕುಣಿದು ಕುಪ್ಪಳಿಸುತ್ತಾರೆ.
ಇನ್ನು ಈ ರಣಗಂಬಕ್ಕೆ ಜಾತ್ರಾ ನಿತ್ಯವಾಗಿ ವಿಶೇಷ ಪೂಜೆಗಳು ನಡೆಯುತ್ತವೆ.ಈ ರಣಗಂಬವನ್ನು ನಮ್ಮೂರಿನ ಹೆಣ್ಣು ದೇವತೆಯಂದು ಆರಾಧಿಸಿ ಸೀರೆ, ಬಳೆ,ತೊಡಿಸಿ ಪೂಜಿಸಲಾಗುತ್ತೆ.
ಈ ಸಂದರ್ಭದಲ್ಲಿ ಅಲ್ಲಿನ ಹಿರಿಯರಾದ ಬಸವರಾಜ ದೇಶಮುಖ,ಶಿವರಾಜ ಬುಣಗೆ,ಬಂಡಯ್ಯಾ ಸ್ವಾಮಿ, ಜಗಪ್ಪಾ ಪಟ್ನೆ, ಶಂಕರೆಪ್ಪಾ,ಶರಣಪ್ಪಾ ಭೂಶೇಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತಿಯಿದ್ದರು
ವರದಿ:ಅಮರ ಮುಕ್ತೆದಾರ