ವಿಜಯಪುರ: ವಿಜಯಪುರ ಜಿಲ್ಲೆ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಕುಡಿಯವ ನೀರಿಗಾಗಿ ಪರಿತಪ್ಪಿಸುವ 2ನೇ ರಾಜಸ್ಥಾನ,ಬ್ರಿಟಿಷರ ಕಾಲದಲ್ಲಿ ಬರನಿರ್ವಹಣಾ ಸಂಸ್ಥೆ ಮಾಡಿದ್ದರೂ ಪರಿಹಾರವಾಗಿಲ್ಲ.ಅಂದಿನ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರೀಜೀಯವರು ಜಲಾಶಯಕ್ಕೆ ಅಡಿಗಲ್ಲು ಇಟ್ಟಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಹೋರ್ತಿ ಗ್ರಾಮದ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮನುಷ್ಯನಿಗೆ ತ್ಯಾಗ, ಸಹಾಯ-ಸಹಕಾರ ಉಪಕಾರ ಮಾಡಿದವರನ್ನು ಸ್ಮರಿಸುವುದು ಮಾನವೀಯ ಮೌಲ್ಯ, ನೀರಾವರಿ ಯೋಜನೆಗೆ ಬಾಗಲಕೋಟ,ವಿಜಯಪುರ ಅವಳಿ ಜಿಲ್ಲೆಗಳ ರೈತಾಪಿ ವರ್ಗ ತಮ್ಮ ಭೂಮಿ,ಮನೆ ,ಮಠಗಳನ್ನು ಕಳೆದುಕೊಂಡು ಇನ್ನೊಬ್ಬರಿಗಾಗಿ ತ್ಯಾಗ ಮಾಡಿದ್ದಾರೆ.ಇಂತಹ ಪುಣ್ಯಾತ್ಮರನ್ನು ನೆನಪಿಸಬೇಕಾಗಿರವುದು ನಾಗರೀಕ ಸಮಾಜದ ಕರ್ತವ್ಯ. ನಮ್ಮನ್ನಾಳಿದ ಅನೇಕ ಸರ್ಕಾರಗಳು ಅಂದಿನ ಆರ್ಥಿಕ ವ್ಯವಸ್ಥೆಗನುಗುಣವಾಗಿ ಆಡಳಿತ ಮಾಡಿ ಸರ್ವವಿಧದಲ್ಲಿ ಯೋಜನೆಗಳನ್ನು ಮಾಡಿವೆ. ಚುನಾವಣೆಗಳು ಬರುತ್ತವೆ ಹೋಗುತ್ತವೆ 4 ವರ್ಷಭಾಗದಲ್ಲಿ ಸಂಪೂರ್ಣ
11 ತಿಂಗಳು ಜನರ ಭಾವನೆ ಆಶೋತ್ತರಗಳನ್ನು ಇಡೇರಿಸಬೇಕಾಗಿರುವುದು ಜನಪ್ರತಿನಿಧಿ ಕರ್ತವ್ಯ. ಇದು ಸರಕಾರದ ಕಾರ್ಯಕ್ರಮ ಸೂಕ್ತ ಪರಿಜ್ಞಾನವನ್ನು ಅರಿತು ಮಾತನಾಡುತ್ತೇನೆ.
ನೀರಾವರಿಯಾಗಬೇಕಾದರೆ ಆಲಿಮಟ್ಟಿ ಜಲಾಶಯ 519-524 ಎತ್ತರ ಆದಾಗ ಮಾತ್ರ ಸಮಗ್ರ ನೀರಾವರಿಯೊಂದಿಗೆ ಈ ಭಾಗದ ರೈತರ ಬದುಕು ಹಸನಾಗುತ್ತದೆ ಎಲ್ಲಾ ಯೋಜನೆಗಳು ಬದಿಗೊತ್ತಿ 80 ಟಿ.ಎಂ.ಸಿ’ ನೀರು ಹರಿಸಬೇಕು ಅಂದಾಗ 2ನೇ ಪಂಜಾಬ ಆಗಲು ಸಾಧ್ಯ. ಕಳೆದ 2013ರಲ್ಲಿ ಇಂಡಿ ತಾಲೂಕಿನಾದ್ಯಂತ ಕುಡಿಯಲು ನೀರು ಇಲ್ಲದೆ ಇರುವಾಗ ಟ್ಯಾಂಕರ ಮೂಲಕ ನೀರು
ಜಿಲ್ಲೆಯ ನಡೆದಾಡು ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು ಈ ಭಾಗದಲ್ಲಿ ರೈತರಿಗೆ ಹನಿ ನೀರು ಕೂಡಿ ಎಂದು ಜನಪ್ರತಿನಿಧಿಗಳಿಗೆ ಸದಾ ನುಡಿಯುತ್ತಿದ್ದರು ಪೂಜ್ಯರ ಅಣತಿಯಂತೆ ನಡೆದುಕೊಳ್ಳಲಾಗಿದ್ದು ಇನ್ನು ಸಂಪೂರ್ಣ ನೀರಾವರಿಯಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾಗ ನಮಗೂ ಕೂಡಾ ಸಂತೋಷವಾಗುತ್ತದೆ ಎಂದರು.
ಇಂದು ಕೆಲವು ಕೆರೆಗಳು ತುಂಬಿರುವದರಿಂದ ಅಲ್ಪಸ್ವಲ್ಪ ನೀರಿನ ಸಮಸ್ಯ ನಿವಾರಣೆಯಾಗಿದೆ. ಜಲಧಾರೆ, ಮಲ್ಟಿವಿಲೇಜ್ ಯೋಜನೆಗಳು ತುರ್ತು ಕಡಿಮೆಯಾಗುತ್ತದೆ ಎಂದು ಮಾತನಾಡಿದರು.
ವರದಿ:ಅರವಿಂದ್ ಕಾಂಬಳೆ