ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರಿನ ಕಾರುಣ್ಯಾಶ್ರಮ ಒಳಬಳ್ಳಾರಿ ರಸ್ತೆಗೆ ಸ್ಥಳಾಂತರವಾಗಿರುವುದು ಬಹಳ ಸಂತೋಷವನ್ನುಂಟುಮಾಡಿದೆ:ಮಲ್ಲಿಕಾರ್ಜುನ ಸ್ವಾಮಿ ಕರಡಕಲ್

ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿದ್ದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಒಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿರುವ ಕಟ್ಟಡಕ್ಕೆ ಎಲ್ಲಾ ಸಮಾಜದ ದೇವತೆಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಸರಳವಾಗಿ ಆ ಕಟ್ಟಡಕ್ಕೆ ಪ್ರವೇಶಿಸಿತು. ಈ ಕಾರ್ಯಕ್ರಮದಲ್ಲಿ ಮಹಾಪ್ರಸಾದ ಸೇವೆಯನ್ನು ಕೆಪೆಕ್ ಅಧ್ಯಕ್ಷರಾದ ಕೆ.ವಿರುಪಾಕ್ಷಪ್ಪನವರ ಕುಟುಂಬದಿಂದ ಹಾಗೂ ಗಂಗಮ್ಮ ಅಯ್ಯನಗೌಡ ಪೊಲೀಸ್ ಪಾಟೀಲ್ ಜಂಗಮರಹಳ್ಳಿ ಇವರುಗಳ ವತಿಯಿಂದ ಜರುಗಿತು ಈ ಕಾರ್ಯಕ್ರಮದಲ್ಲಿ ಮಕ್ಕಿ ತಾಲೂಕಿನ ಜಂಗಮರಹಳ್ಳಿಯ ಸುಜಾತ ವೀರಭದ್ರಗೌಡ ಪೊಲೀಸ್ ಪಾಟೀಲ್ ಅವರ ಮಗನಾದ ಶಿವಾನಂದ ಪೊಲೀಸ್ ಪಾಟೀಲ್ ಅವರ ಮತ್ತು ಕಾರಟಗಿ ಪಟ್ಟಣದ ವಾರ್ಡ್ ನಂಬರ್ 7ರ ಪಟ್ಟಣ ಪಂಚಾಯಿತಿ ಸದಸ್ಯರಾದ ಸೌಮ್ಯ ಕಂಡಗಲ್ ಅವರುಗಳ ಹುಟ್ಟುಹಬ್ಬವು ಇದೇ ಸಂದರ್ಭದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಲಿಂಗಸೂಗೂರು ಪಟ್ಟಣದ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಮಾತನಾಡಿ ಸಿಂಧನೂರಿನ ಕಾರುಣ್ಯಾಶ್ರಮ ಒಳಬಳ್ಳಾರಿ ರಸ್ತೆಗೆ ಸ್ಥಳಾಂತರಗೊಂಡಿದ್ದು ಬಹಳ ಸಂತೋಷವನ್ನುಂಟುಮಾಡಿದೆ ಯಾಕೆಂದರೆ ಕುಷ್ಟಗಿ ರಸ್ತೆಯಲ್ಲಿ ಬಹಳ ಚಿಕ್ಕ ಜಾಗದಲ್ಲಿ ನಡೆಯುತ್ತಿದ್ದ ಈ ಆಶ್ರಮ ತಿಂಗಳಿಗೆ 15000 ರೂ. ಗಳ ಬಾಡಿಗೆ ಕಟ್ಟುವುದರ ಮೂಲಕ ನಡೆಸಲಾಗುತ್ತಿತ್ತು ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲದೆ ನಿರಂತರ ಜೋಳಿಗೆಯಿಂದ ನಮ್ಮ ದೇಶದ ಜನರ ಪ್ರೀತಿಯನ್ನು ಗಳಿಸಿರುವ ಈ ಆಶ್ರಮ ನಮ್ಮ ನಾಡಿನ ಹೆಮ್ಮೆಯ ಕರುಣಾಮಯಿ ಕುಟುಂಬವಾಗಿದೆ ಬರೀ ಹೆಣ್ಣು ಮಕ್ಕಳಿಗಷ್ಟೇ ಈ ಕಟ್ಟಡದಲ್ಲಿ ಅವಕಾಶ ದೊರೆಯುತ್ತಿದ್ದು ಪುರುಷರಿಗೆ ವಾಸ ಮಾಡಲು ಅವಕಾಶ ಇಲ್ಲದಂತಾಗಿದೆ ಆದುದರಿಂದ ಕರುಣಾಮಯಿ ದಾನಿಗಳಾದ ನಾಡಿನ ಎಲ್ಲಾ ಜನರು ಸಹಾಯ ಸಹಕಾರ ಮಾಡಿ ಅನಾಥರ ಬಾಳಿಗೆ ಬೆಳಕಾಗಿರಿ ಎಂದು ವಿನಂತಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು ಪಾ.ಹಿರೇಮಠ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರುಮಠ ಶ್ರೀ ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷರಾದ ಮಲ್ಲಿನಾಥ ಶಾಸ್ತ್ರಿ ತಿಡಿಗೋಳ ಕಾರಟಗಿ ಪಟ್ಟಣದ ಶಾರದಾ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಸ್ಥಾಪಕರಾದ ಶಾರದಾ ಮಲ್ಲಿಕಾರ್ಜುನ ಶಿವನಗೌಡ ಕರಡಕಲ್ ಮಂಜುನಾಥ ಪಾಟೀಲ್ ರೋಡಲಬಂಡ ಬಸನಗೌಡ ಪೊಲೀಸ್ ಪಾಟೀಲ್ ಜಂಗಮರಹಳ್ಳಿ ಶ್ರೀಮತಿ ನೀಲಮ್ಮ ವೀರಭದ್ರಪ್ಪ ಪಾದರದಿನ್ನಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ವ್ಯವಸ್ಥಾಪಕರಾದ ಇಂದುಮತಿ ಏಕನಾಥ. ಚಾಲಕರಾದ ಮರಿಯಪ್ಪ. ಸುಜಾತ ಹಿರೇಮಠ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ