ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ವಿಶ್ವಕರ್ಮ ಸಮಾಜಕ್ಕೆ ಮೀಸಲಾತಿ ಅತ್ಯವಶ್ಯಕವಾಗಿದೆ: ಕೆ.ಪಿ.ನಂಜುಂಡಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯ ಮೌನೇಶ್ವರ ದೇವಸ್ಥಾನದಲ್ಲಿ ಇಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಪರಿಶಿಷ್ಟ ಪಂಗಡ ಮೀಸಲಾತಿಗಾಗಿ ತಿಂಥಣಿಯಿಂದ ಯಾದಗಿರಿಯ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಸನ್ಮಾನ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಮಾತನಾಡಿ ಶಿಕ್ಷಣದಿಂದ ಮಾತ್ರ ಮೀಸಲಾತಿ ಪಡೆಯಲು ಸಾಧ್ಯ ಸಮಾಜದ ಎಲ್ಲ ನನ್ನ ವಿಶ್ವಕರ್ಮ ಬಂಧುಗಳು ಮಕ್ಕಳನ್ನ ಶಿಕ್ಷಣವಂತರಾಗಿ ಮಾಡಬೇಕು ಅವರಿಗೆ ಶಿಕ್ಷಣ ದೊರೆತಾಗ ಮೀಸಲಾತಿ ಬಗ್ಗೆ ಅರಿವಾಗುತ್ತದೆ ಅದಕ್ಕೆ ನಮ್ಮ ಮಕ್ಕಳು ಹೆಚ್ಚಿನ ಶಿಕ್ಷಣವಂತರಾಗಬೇಕಾದರೆ ನಾವುಗಳು ಈಗಿನಿಂದಲೇ ಪರಿಶಿಷ್ಟ ಪಂಗಡ ಮೀಸಲಾತಿಗಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಇಂದಿನ ದಿನಗಳಲ್ಲಿ ಪಂಚವೃತ್ತಿಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ಪಂಚ ವೃತ್ತಿಗಳು ನಶಿಸುತ್ತಿರುವುದು ತಮಗೆಲ್ಲ ತಿಳಿದ ವಿಷಯ ಅಧುನಿಕ ಭರಾಟೆಯಲ್ಲಿ ಯಂತ್ರೋಪಕರಣಗಳು ಬಂದು ಪಂಚವೃತ್ತಿಗಳು ನಶಿಸಿಹೋಗುತ್ತಿವೆ ಅದಕ್ಕೆ ನಮ್ಮ ಬಳಿ ಆರ್ಥಿಕವಾಗಿ ಮುಂದೆ ಬರಲು ಸಾದ್ಯವಾತ್ತಿಲ್ಲ ಇದಕ್ಕೆ ಒಂದೇ ಕಾರಣ ನಾವು ಶಿಕ್ಷಣವಂತರಿಲ್ಲ ರಾಜಕೀಯ ಸಾಮಾಜಿಕ ಆರ್ಥಿಕವಾಗಿ ಹಿಂದುಳಿದಿದ್ದೇವೆ ಎನ್ನುವುದು,ಅದಕ್ಕೆ ಹೇಳುವುದು ನಮಗೆ ಮೀಸಲಾತಿ ಅತ್ಯವಶ್ಯಕವಾಗಿದೆ ನಮ್ಮ ಸಮಾಜ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆಬರಬೇಕಾದರೆ ನಮಗೆ ಪರಿಶಿಷ್ಟ ಪಂಗಡ ಮೀಸಲಾತಿ ಪಡೆಯುವುದು ಒಂದೇ ಮಾರ್ಗ ಈ ಮೀಸಲಾತಿ ವಿಷಯವನ್ನು ತಿಳಿಸಲು ನಾನು ರಾಜ್ಯದ 745ಹೋಬಳಿಗಳಲ್ಲಿ ಜನಜಾಗೃತಿ ಸಭೆ ಮಾಡಿ ಇದರ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ನಾನೇ ಖುದ್ದಾಗಿ ನಿಮ್ಮ ಹೋಬಳಿಗೆ ಬಂದು ವಿಷಯಗಳನ್ನು ತಿಳಿಸುತ್ತೇನೆ ಮೀಸಲಾತಿ ಹೋರಾಟದ ಇನ್ನೊಂದು ಭಾಗವೇ ಈ ಪಾದಯಾತ್ರೆ ಈ ರಾಜ್ಯದಲ್ಲಿ ಪ್ರಥಮವಾಗಿ ರಾಯಚೂರಿನವರು ಹಮ್ಮಿಕೊಂಡು ಎಶಸ್ವಿಗೊಳಿಸಿದ್ದಾರೆ ಈಗ ತಿಂಥಣಿಯಿಂದ ಯಾದಗಿರಿಯವರೆಗೆ ನಡೆಯುತ್ತಿದೆ ಇದಕ್ಕೆ ಪ್ರತಿಯೊಬ್ಬರೂ ಹೆಚ್ಚೆಗಳನ್ನು ಹಾಕಬೇಕು ಈ ಹೆಜ್ಜೆಗಳು ಇತಿಹಾಸ ಪುಟ ಸೇರಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಪರಮ ಪೂಜ್ಯಯ ಹಾಗೂ ರಾಜ್ಯ ಕಾರ್ಯದರ್ಶಿ ಮಹೇಶ ತಡಿಬಿಡಿ,ಬ್ರಹ್ಮಗಣೇಶ ರಾಯಚೂರು,ಲೋಹಿತ್ ವೈ ಕಲ್ಲೂರು,ಜಿಲ್ಲಾದ್ಯಕ್ಷರಾದ ಆನಂದ ಲಕ್ಷೀಪುರ,ಸಿಂಧನೂರು ತಾಲೂಕ ಅದ್ಯಕ್ಷ ವೀರಭದ್ರಪ್ಪ ಹಂಚಿನಾಳ,ರಾಯಚೂರು ಜಿಲ್ಲಾ ಮಹಿಳಾ ಅದ್ಯಕ್ಷೆ ಮಂಜಳಾ ಬಡಿಗೇರ,ವಿಜಯ ಮಸ್ಕಿ ಸಿರಗುಪ್ಪ ತಾಲೂಕ ಅದ್ಯಕ್ಷ ಮೌನೇಶ ಆಚಾರಿ,ರಾಮು ಗಾಣದಾಳ,ಧರ್ಮಣ್ಣ ಗುಂಜಳ್ಳಿ,ಮನೋಹರ ಬಡಿಗೇರ,ಮಸ್ಕಿ ತಾಲೂಕ ಅದ್ಯಕ್ಷ ಕಾಳಪ್ಪ ಕಣ್ಣೂರು,ಉಮೇಶ ಬಡಿಗೇರ ಲಿಂಗಸೂಗೂರು ಹಿರಿಯರು,ಚನ್ನಪ್ಪ ಕೆ.ಹೊಸಹಳ್ಳಿ,ಬಸವರಾಜ ತಕ್ಕಲಕೋಟೆ ಇನ್ನೂ ಹಲವಾರು ಜಿಲ್ಲೆಗಳ ವಿಶ್ವಕರ್ಮ ಮುಖಂಡರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ