ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬದಲಾದ ಪರಿಸ್ಥಿತಿಯಲ್ಲಿ ರೈತನ ಬದುಕು

ನೆಲ-ಜಲ ಅನಲಾನಿಲ
ಆಗಸಗಳ ಚೈತನ್ಯವ ಹಿಡಿದು
ಸೃಷ್ಟಿ ಚಕ್ರ ಸಾವಯವ ರಹಸ್ಯದ ಮಂತ್ರಸಿದ್ಧಿ ಪಡೆದು l

ಸಮಷ್ಟಿ ಸುಖಕೆ ತಾ ಹಂಬಲಿಸುತ ಸಹ ಜೀವಿಯ ಸಖನಾಗಿ
ಅನ್ನಯಜ್ಞ ಸಂಕಲ್ಪಿಸಿರುವವನೆ
ನೇಗಿಲಯೋಗಿ l

ವಿಷವುಣಿಸದೆ ವಿಷವಿತ್ತದೆ ವಸುಧೆಯ ನಿರ್ವಿಷಮಯಗೊಳಿಸಿ ವೃಷ ಪಶುಗಳ ಶಿಶು ಸರ್ವಜನರ ಆರೋಗ್ಯಕೆ ಸುಧೆ ಹರಿಸಿ l

ವಶವಾಗದ ಒಳಸಂಚಿನ ಹೊಸಹೊಸ ತೆನ್ನುವ ವಂಚನೆಗೆ ತೃಷೆಯಿಲ್ಲದ ಸಿರಿ ಕೃಷಿ ಋಷಿ ತಾನಿವ
ನೇಗಿಲಯೋಗಿ ll

ಎಂಬ ಶ್ರೇಷ್ಠ ಸಾಲುಗಳೇ ಹೇಳುವಂತೆ,

ರೈತ ದೇಶದ ಬೆನ್ನೆಲುಬು, ಕೃಷಿಯೇ ರಾಷ್ಟ್ರದ ಆರ್ಥಿಕತೆಯ ಮೂಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

‘ ಅನ್ನದಾತೋ ಸುಖಿಭವ ‘ ಎಂಬಂತೆ ಅನ್ನ ನೀಡುವ ರೈತನ ಸುಖವೂ ಅತೀ ಮುಖ್ಯವಾದ ಅಂಶವಾಗಿದೆ.
ಏಕೆಂದರೆ, ಹಗಲಿರುಳು ಮಳೆ, ಗಾಳಿ, ಬಿಸಿಲು ಎನ್ನದೇ ನಿರಂತರವಾಗಿ ಉಳುವ ಯೋಗಿಯ ಯೋಗಕ್ಷೇಮ ಹಾಗೂ ಆತನ ನೆಮ್ಮದಿಯೂ ಕೂಡ ದೇಶದ ಅಭಿವೃದ್ಧಿಗೆ ಬಹುಮುಖ್ಯ.

ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿ ಹೇಗಿದೆ ಎಂಬುದನ್ನು ನಾವೊಮ್ಮೆ ಮನನಮಾಡಿಕೊಳ್ಳಬೇಕಾಗಿದೆ.
ಅಂದಿನಿಂದ -ಇಂದಿನವರೆಗೂ ರೈತನಿಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇವೆ.ಕೃಷಿಯು ಪ್ರಕೃತಿಯನ್ನೇ ಅವಲಂಬಿಸಿದೆ.
ಹಾಗಾಗಿ ಒಮ್ಮಿಂದೊಮ್ಮೆ ಅತಿಯಾದ ಮಳೆಯಾಗಿ ಬೆಳೆದ ಬೆಳೆಯೆಲ್ಲಾ ನಾಶ ವಾಗುವ ಪರಿಸ್ಥಿತಿ.ಇನ್ನೊಮ್ಮೆ
ಅಲ್ಪ ಸ್ವಲ್ಪ ಬೀಳುವ ನಾಲ್ಕು ಹನಿ ಮಳೆಗೆ ಸಂತೋಷಗೊಂಡು ಮತ್ತೆ ಬರಬಹುದೆಂದು ಆಶಿಸಿ ಬೀಜ ಬಿತ್ತಿ ಕುಳಿತಾಗ ಆಗಲೇ ಬರಗಾಲ ಅವರಿಸಿಕೊಳ್ಳುವ ದಾರುಣ ಪರಿಸ್ಥಿತಿ ಅನೇಕ ವರ್ಷಗಳು ಸಂಭವಿಸಿದೆ.

ತಾನು ಬೆಳೆದ ಬೆಳೆಯೆಲ್ಲ ಬಾಡಿ ನಿಂತಾಗ ದುಃಖಿತನಾದ ರೈತ ಮುಗಿಲಿಗೆ ಮುಖವೊಡ್ಡಿ ಮಳೆರಾಯನಿಗೆ ಮೊರೆಯಿಡುತ್ತಾನೆ.

ಬಾಡಿದ ನೆಲದಲಿ ಸುರಿಸು ಮಳೆ
ಬೆಳೆದು ನಿಲ್ಲಲು ಹಸಿರ ಬೆಳೆ
ಸುರಿಸು ಮೊಗದಲಿ ಹರುಷದ ಹೊಳೆ “.

ಎಂದು ತನ್ನ ಮನದಾಳದ ವೇದನೆಯನ್ನು ವ್ಯಕ್ತ ಪಡಿಸುತ್ತಾನೆ.
ಮತ್ತೆ ಮತ್ತೆ ಆವರಿಸುವ ಬರಗಾಲದ ಬವಣೆ ರೈತನನ್ನು ಮತ್ತಷ್ಟು ಮತ್ತಷ್ಟು ಕುಗ್ಗಿಸಿ ಬಡತನದ ಬಾಗಿಲಿಗೆ ತಂದು ನಿಲ್ಲಿಸುತ್ತದೆ. ಹೀಗಾದಾಗ ಕಂಗಾಲಾದ ರೈತ ಕುಟುಂಬಗಳು ಮನೆ, ಹೊಲ, ದನಕರುಗಳನ್ನೆಲ್ಲಾ ಬಿಟ್ಟು ವಲಸೆ ಹೋಗಬೇಕಾದ ದಾರುಣ ಪರಿಸ್ಥಿತಿ ಬರುತ್ತದೆ.

” ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ ” ಎಂಬಂತೆ ಅನ್ನದಾತನಾದ ರೈತನ ದುಡಿಮೆಯೇ ಇಲ್ಲದಿದ್ದರೆ ಜಗತ್ತೇ ಹಸಿವಿನಿಂದ ಕಂಗಾಲಾಗುತ್ತದೆ.

ಇಂದಿನ ಆಧುನಿಕ ಯುಗದಲ್ಲಿ ಆಧುನಿಕ ಯಂತ್ರೋಪಕರಣಗಳು ಎಷ್ಟು ಬಂದಿದ್ದರು ರೈತನ ಕಷ್ಟಗಳು ತಪ್ಪಿಲ್ಲ.
ಉಳುಮೆ ಮಾಡಲು ತಗಲುವ ಖರ್ಚು, ಗೊಬ್ಬರ, ಔಷಧಗಳ ಖರ್ಚು ಇನ್ನಿತ್ಯಾದಿ ಖರ್ಚುಗಳನ್ನೆಲ್ಲ ತೆಗೆದುಹಾಕಿದರೆ,
ರೈತನ ಪಾಲಿಗೆ ಉಳಿತಾಯವಾದ ಹಣವೆಷ್ಟು ಎಂಬುದನ್ನು ತೂಗಿ ನೋಡಿದರೆ ಬಹುಪಾಲು ರೈತನಿಗೆ ನಿರಾಸೆಯೇ ಆಗುತ್ತದೆ.

ಭಾರತದ ರೈತರು,
” ಸಾಲದಲ್ಲಿ ಹುಟ್ಟಿ
ಸಾಲದಲ್ಲಿ ಬೆಳೆದು
ತಮ್ಮ ಮಕ್ಕಳಿಗೂ
ಸಾಲವನ್ನೇ ಆಸ್ತಿಯನ್ನಾಗಿ
ನೀಡುವರು.”

ಎಂಬ ಮಾತಿನಂತೆ ರೈತರ ಪರಿಸ್ಥಿತಿ ಇಂದಿಗೂ ಸಾಲಗಳಲ್ಲೇ ಜೀವನ ನಿರ್ವಹಿಸುವ ಪರಿಸ್ಥಿತಿ ಇದೆ. ಹೀಗಾದಾಗ ರೈತರು
ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕಿ ನಲುಗುವಂತೆ ಆಗುತ್ತದೆ.

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ
ದಿನದಿನವು ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ l

ಬಡವಾಗದ ನನ್ನ ಒಡಲುರಿದು
ಬೇಗೆ ನಿಮಗರಿವು ಆಗಬಹುದೇ? ನೀಲ ಗಗನದಲಿ ತೇಲಿ ಹೋಗುತಿಹ ನಿಮ್ಮನೆಳೆಯಬಹುದೇ…

ಎಂಬ ಜಿ.ಎಸ್. ಶಿವರುದ್ರಪ್ಪನವರ ಸಾಲುಗಳು ರೈತನ ಮನದಾಳದ ಮಾತುಗಳು.ಬರಗಾಲದ ಬವಣೆಯಿಂದ ಬೇಸತ್ತ ರೈತನ ಆಕ್ರಂದನದ ನುಡಿಗಳು.

ಅಕ್ಕರವು ಲೆಕ್ಕಕ್ಕೆ, ತರ್ಕ ತಾ ವಾದಕ್ಕೆ, ಮಿಕ್ಕ ಓದುಗಳೆಲ್ಲಾ ತಿರುಪೆಗೆ. “ಎಂಬ ಸರ್ವಜ್ಞ ನ ಮಾತಿನಂತೆ ಲೆಕ್ಕವಿಲ್ಲದಷ್ಟು ಓದುಗಳಿದ್ದರೂ ಅವುಗಳಲ್ಲಿ ಅತೀ ಶ್ರೇಷ್ಠ ಸ್ಥಾನ ಹೊಂದುವುದು ಕೃಷಿ ವಿದ್ಯೆಯೇ. ಉಳಿದ ವಿದ್ಯೆಗಳಿಂದ ಹಣ ಗಳಿಸಬಹುದು ಆದರೆ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ.ನೇಗಿಲನ್ನು ಹಿಡಿದು ಉಳುವ ಯೋಗಿಯ ವಿಧ್ಯೆಯೇ ಶ್ರೇಷ್ಠವಾದದ್ದು.

ರೈತನು ನೇಗಿಲವೆಂಬ ಲೇಖನಿಯಿಂದ, ಉಳುಮೆ ಎಂಬ ಗೆರೆಗಳನ್ನು ಎಳೆದು, ಧಾನ್ಯಗಳೆಂಬಾ ಅಕ್ಷರಗಳನ್ನು ಬಿತ್ತಿ ಬೆಳೆಯುವ ವಿದ್ಯೆಯೇ ಆಹಾರ “. ಇದು ಇದ್ದರೇನೇ ನಮ್ಮ ಜೀವನ. ಇಂತಹ ಅನುಭವದಿಂದ ಬರುವ ಮೇಟಿ ವಿದ್ಯೆ, ಕಲಿಕೆಯಿಂದ ಬರುವ ಕೋಟಿ ವಿದ್ಯೆಗಳಿಗಿಂತ ಮೇಲು. ಅದರಂತೆಯೇ ‘ ಕೋಟಿ ವಿದ್ಯೆಗಿಂತ, ಮೇಟಿ ವಿದ್ಯೆ ಮೇಲು ‘ ಎಂಬ ಮಾತು ಸಾರ್ವಕಾಲಿಕ ಸತ್ಯವಾದರೂ,
ಪ್ರಕೃತಿಯ ವಿಕೋಪ, ಏರುಪೇರಿನಿಂದ ಉಂಟಾದ ಅತಿವೃಷ್ಟಿ-ಅನಾವೃಷ್ಟಿ, ಅನಿಶ್ಚಿತ ಮಳೆಗಾಲ, ಬರಗಾಲ, ಬದಲಾದ ಜೀವನಶೈಲಿ ಇನ್ನೂ ಹತ್ತು ಹಲವು ಕಾರಣಗಳಿಂದಾಗಿ ರೈತನ ಬದುಕು ಮತ್ತಷ್ಟು ಮತ್ತಷ್ಟು ಸಂಕಷ್ಟಗಳ ಸಂಕೋಲೆಯಲ್ಲಿ ಸಿಲುಕುವಂತೆ ಮಾಡುತ್ತದೆ. ಇಂದಿಗೂ ನಮ್ಮ ರೈತರ ಬದುಕುಗಳು ಚಿಂತಾಜನಕವಾಗಿದೆ.
ಇಂತಹ ಎಷ್ಟೇ ಸಂಕಷ್ಟ – ನೋವುಗಳಿದ್ದರೂ ಅವುಗಳನ್ನೆಲ್ಲಾ ಬದಿಗೊತ್ತಿ ನಿರಂತರವಾಗಿ ದುಡಿಯುತ್ತಿದ್ದಾನೆ.

ಕವಿತೆ

ಧರೆಗವತರಿಸಿದ ಮಾನವತಾ ದೇವರೇ
ಲೋಕಕ್ಕೆಲ್ಲಾ ಅನ್ನವನಿಕ್ಕುವ ರೈತನೇ
ಬಣ್ಣಿಸಲಾರೆವು ನಿನ್ನಯ ಶ್ರಮದ ಮಹಿಮೆಯ ಓ ಅನ್ನದಾತನೇ l

ಗಂಗೆ ತುಂಗೆಯ ನೀರನು ಬಳಸಿ
ಆರೋಗ್ಯಕಾಗುವ ಧಾನ್ಯವ ಬೆಳೆಸಿ
ಭೂತಾಯಿ ಸೇವೆಯಲಿ ಆನಂದವ ತಿಳಿಸಿ
ನಿನ್ನ ಇಡೀ ಜೀವನ ಭೂತಾಯಿಗೆ ಅರ್ಪಿಸಿ l

ಬರಡು ನೆಲದಲ್ಲಿ ಬೀಜವ ಬಿತ್ತಿ
ಬೆಳೆಯುವೆ ರೇಷ್ಮೆಯಂತ ಹತ್ತಿ
ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದೇ
ಕಣ್ಣಿರಲಿ ಕೈ ತೊಳೆಯುವೆ ಮನದ ದುಃಖವ ಒತ್ತಿ l

ದುಡಿದು ಶ್ರಮಿಸಿ ಬೆಳೆಯುವೆ
ವಿಧ ವಿಧಧ ತೋಟ
ನೀ ಬೆಳೆದು ತಿನಿಸುವೆ
ನಮಗೆಲ್ಲಾ ರಸದೂಟ
ನಿನಗೆ ಯಾರೂ ಇಲ್ಲ
ಸರಿಸಾಟಿ ಹೇ ಅನ್ನದಾತ ll

ಎಂದು ಹೇಳುತ್ತಾ……

        

-ಆರ್.ಬಿ.ಪ್ರಿಯಾಂಕ
ರಾಯಚೂರು 584-101

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ