ಯಾದಗಿರಿ, ಮಾ. 11- ಜಿಲ್ಲೆಯ ಪತ್ರಕರ್ತರ ಜ್ವಲಂತ ಸಮಸ್ಯೆಗಳು ಹಾಗೂ ಇನ್ನಿತರ ಕೆಲ ಪತ್ರಕರ್ತರ ಸಂಘಟನೆಗಳಿಂದ ವಸೂಲಿ, ಬ್ಲಾಕ್ ಮೇಲ್ ದಂಧೆ, ಮರಳು ಲಾರಿಗಳಿಂದ ವಸೂಲಿ ಹಪ್ತಾ ವಸೂಲಿ ಮಾಡುತ್ತಿರುವ ವಿಷಯಗಳನ್ನು ಮುಂದಿಟ್ಟುಕೊಂಡು ಬುಧವಾರ ಡಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು ನೈಜ ಪತ್ರಕರ್ತರು ಭಾಗಿಯಾಗುವಂತೆ ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಮನವಿ ಮಾಡಿದ್ದಾರೆ.
ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಪತ್ರಿಕಾ ರಂಗಕ್ಕೆ ಅಪಮಾನವಾಗುವಂತೆ ನಡೆದುಕೊಳ್ಳುತ್ತಿರುವ ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಸರ್ವರು ಬೆಂಬಲಿಸಿ ಪಾಲ್ಗೊಳ್ಳಬೇಕೆಂದು ವೈಜನಾಥ ಹಿರೇಮಠ ಮನವಿ ಮಾಡಿದ್ದಾರೆ.ಆಸಕ್ತರು 9880562999 ಗೆ ಸಂಪರ್ಕಿಸಲು ಕೋರಿದೆ.
