ಯಾದಗಿರಿ: ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರಕಾಶರೆಡ್ಡಿ(19), ಸಲಿಂ ಸಿಂಗನಹಳ್ಳಿ (25), ಪ್ರಶಾಂತ್ (29) ಬಂಧಿತ ಕಳ್ಳರು ಇವರಿಂದ 7,5 ಲಕ್ಷ ಮೌಲ್ಯದ ಒಟ್ಟು 14 ಮೋಟಾರ್ ಬೈಕ್ ಗಳನ್ನು ವಶಕ್ಕೆ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದರು.
ಈ ಮೂವರು ಬೈಕ್ ಕಳ್ಳರು ಶಹಾಪುರ ನಗರ ಸೇರಿದಂತೆ ವಾಡಿ, ಪರತ್ತಾಬಾದ್, ಚಾಮನಾಳ, ಗಂಗಾವತಿ, ನಾಯ್ಕಲ್, ಗ್ರಾಮಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು.
ಗುರುವಾರ ಬೆಳಗಿನ ಜಾವದಲ್ಲಿ 3 ಗಂಟೆಗೆ ಯಾದಗಿರಿ ಕಡೆಯಿಂದ ಮೂವರು ಮೂರು ಬೈಕ್ ಗಳನ್ನು ತರುವುದನ್ನು ಸುದ್ದಿ ತಿಳಿದ ಶಹಾಪುರ ನಗರದ ಪೋಲಿಸ್ ಅಧಿಕಾರಿ ಪಿ.ಐ.ಚನ್ನಯ್ಮ ಹಿರೇಮಠ ನೇತೃತ್ವದ ತಂಡ ಅಗ್ನಿ ಶಾಮಕ ದಳ ಹತ್ತಿರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿಗಳಾದ ಸಿ.ಬಿ.ವೇದಮೂರ್ತಿ ಹಾಗೂ
ಡಿವಾಯ್ಎಸ್ಪಿ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ ಪಿ.ಐ.ಚೆನ್ನಯ್ಯ ಹೀರೆಮಠ, ಪಿ.ಎಸ್.ಐ ರಾಹುಲ್ ಪಾವಡೆ, ವಿಜಯಕುಮಾರ, ಶ್ರೀದೇವಿ, ಎ.ಎಸ್.ಐ ಹೊನ್ನಪ್ಪ ಹಾಗೂ ಸಿಬ್ಬಂದಿಯವರಾದ ಸಂಗನಗೌಡ, ಶಿವಲಿಂಗಪ್ಪ, ಸತೀಶಕುಮಾರ್, ಲಕ್ಕಪ್ಪ, ಭಾಗಣ್ಣ , ರಾಮಚಂದ್ರ, ಸಿದ್ದರಾಮಯ್ಯ, ಧರ್ಮರಾಜ , ಎಲ್ಲಾ ಶಹಾಪುರ ಪೋಲಿಸ್ ಕಾರ್ಯಕ್ಕೆ ಡಾ|| ಸಿಬಿ ವೇದಮೂರ್ತಿಯವರು ಅವರು ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು.
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ