ಹನೂರು :ಅವರನ್ನು ಕಳೆದುಕೊಂಡಿದ್ದು ನಮ್ಮ ಭಾಗಕ್ಕೆ ಮಾತ್ರವಲ್ಲದೆ ರಾಜ್ಯಕ್ಕೆ ನಷ್ಟವಾಗಿದೆ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು ಶಿಕ್ಷಣ ಕ್ರಾಂತಿಯನ್ನೆ ಮಾಡಿದವರಲ್ಲಿ ಇವರು ಒಬ್ಬರಾಗಿದ್ದರು ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಾಜಿ ಸಂಸದರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಆತ್ಮೀಯರಿಗೆ ನಾನು ಸಚಿವರೆ ಎಂದು ಸಂಭೋದನೆ
ಮಾಡುತ್ತಿದ್ದೆ ರಾಜ್ಯ ರಾಜಕಾರಣಕ್ಕೆ ಅವರು ಮರಳಿದರು , ವಿದ್ಯಾರ್ಥಿ ದೆಸೆಯಲ್ಲಿಯೂ ಸಹ ಸಕ್ರಿಯವಾಗಿ ಪಾಲ್ಗೊಂಡರು ನಾನು ಅವರು ಒಂದೇ ಸಲ ಚುನಾಯಿತರಾದವರು ,ಸದನದಲ್ಲಿ ಯಾವ ರೀತಿಯಲ್ಲಿ ವರ್ತಿಸಬೇಕು,ಯಾವ ಕಾರ್ಯಕ್ರಮವನ್ನು ನಿಭಾಯಿಸಲು ಸೂಕ್ತ ಸಮಯವನ್ನು ಸಹ ತಿಳಿಸುತ್ತಿದ್ದರು ಪಕ್ಷದ ರೂವಾರಿಯಾಗಿದ್ದರು ಅವರು ಶ್ರಮವನ್ನು ಹತ್ತಿರದಿಂದ ನೋಡಿದ್ದಿನಿ ಹನ್ನೆರಡು ವರ್ಷಗಳ ಹಿಂದೆ ತಮ್ಮ ಶ್ರೀಮತಿಯವರ ಕಾಯಿಲೆ ಇತ್ತು ಇದನ್ನು ಕೇವಲ ನಾಲ್ಕು ಜನರ ಜೊತೆಯಲ್ಲಿ ಮಾತ್ರ ನೊವು ಹಂಚಿಕೊಳ್ಳುತ್ತಿದ್ದರು ಅವರಲ್ಲಿ ನಾನು ಒಬ್ಬ ಅವರು ಸೋತ ನಂತರವು ಕೆಲಸ ಮಾಡಿದ ಏಕೈಕ ವ್ಯಕ್ತಿ ಯಾರಾದರು ಇದ್ದರೆ ಅವರೆ ಕೆ ಪಿ ಸಿ ಸಿ ಕಾರ್ಯಧ್ಯಕ್ಷರಾದ ಇವರ ಕಾರ್ಯ ಒಂಬತ್ತು ಜಿಲ್ಲೆಗೆ ಸೀಮಿತವಾಗದೆ.ರಾಜ್ಯಕ್ಕೆ ಮಾದರಿ ವ್ಯಕ್ತಿ ಹೋರಾಟಗಾರರಾಗಿದ್ದರು,ಕಳೆದುಕೊಂಡ ನಮಗೆ ಇಡೀ ದೇಶದ ಆಸ್ತಿಯಾಗಿದ್ದರು,ನಾನು ಅವರ ಕೊನೆಯ ಕ್ಷಣ ನೋಡಿದಾಗ ಬಂದಂತಹ ಜನ ನೋಡಿದಾಗ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಪಾರ್ಥಿವ ಶರೀರದ ದರ್ಶನ ಮಾಡಿದ್ದರು ಇದೇ ಸಮಯದಲ್ಲಿ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ,ಪ್ರಿಯಾಂಕಾ ಗಾಂಧಿ,ರಾಹುಲ್ ಗಾಂಧಿ ಕರೆ ಮಾಡಿ ಸಾಂತ್ವನ ನೀಡಿದರು ರಾಜ್ಯದ ಎಲ್ಲಾ ಪ್ರಮುಖ ನಾಯಕರು ಭಾಗವಹಿಸಿದರು ಅವರಿಗೆ ಪಕ್ಷವು ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು,ಮುಂದಿನ ದಿನಗಳಲ್ಲಿ ಅವರ ಋಣ ತೀರಿಸಲು ನಾವು ಅವರ ಮಗನನ್ನು ಗೆಲ್ಲಿಸಿಕೊಂಡು ಬರಬೇಕು ಅಲ್ಲದೆ ಶಿಸ್ತು ಸಂಯಮಕ್ಕೆ ಮತ್ತೊಂದು ಹೆಸರೆ ದೃವನಾರಯಣ್ ,ಕೆಲಸವನ್ನು ಮಾಡಲು ವರಿಷ್ಟರಿಗೆ ಮಾತು ಕೊಡುತ್ತಿದ್ದರು.ಎಲ್ಲಾ ಅಭಿಮಾನಿಗಳು ಚಾಮರಾಜನಗರ ಜಿಲ್ಲೆಯ ಜೊತೆಯಲ್ಲಿ ನಂಜನಗೂಡು ಕ್ಷೇತ್ರವನ್ನು ಸಹ ವಿಶೇಷವಾಗಿ ಗಮನ ಹರಿಸೋಣ ಎಂದರು ಅಲ್ಲದೆ ಶ್ರದ್ಧಾಂಜಲಿ ಸಭೆಗಳಿಗೆ ಎಲ್ಲರೂ ಸಹ ಹಾಜರಿರಬೇಕು ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದರು .
ಇದೇ ಸಮಯದಲ್ಲಿ ಮುಖಂಡರು ಹಾಗೂ ನಾಯಕರುಗಳು ಗುದ್ದಾಟ ಮಾಡಿದರೆ ನಮಗೆ ನ್ಯಾಯಲಯವೆ ಅವರ ಮನೆಯಾಗಿತ್ತು.ನರೇಂದ್ರಣ್ಣನವರ ತಾಯಿ ತೀರಿದಾಗ ಬಂದಿದ್ದರು ಆ ಸಮಯದಲ್ಲಿ ನನ್ನ ಜೊತೆಯಲ್ಲಿ ಮಾಜಿ ಶಾಸಕಿ ಪರಿಮಳಮ್ಮರವರ ಮನೆಗೆ ಸಣ್ಣ ಕೆಲಸಕ್ಕಾಗಿ ಹೊಗೊಣೊ ಎಂದರು ಆಗಲೇ ನನಗೆ ಗೊತ್ತಾಗಿದ್ದು ಅವರೆ ನಿಜವಾದ ನಾಯಕರೆಂದು ಅವರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಲು ನಾಲ್ಕು ಸ್ಥಾನ ಗೆಲ್ಲಿಸೊಣ ಎಂದು ಪೆದ್ದನಪಾಳ್ಯ ಮಣಿ ತಿಳಿಸಿದರು ಇದೇ ಸಮಯದಲ್ಲಿ ಮಾತನಾಡಿದ ಹಿರಿಯ
ವಕೀಲರಾದ ನಾಗರಾಜು ರಾಜೂಗೌಡರು ಬಿಟ್ಟರೆ ದೃವನಾರಯಣ್ ರವರು ಒಬ್ಬರೆ ಪ್ರತಿಯೊಬ್ಬ ಕಾರ್ಯಕರ್ತರ ಹೆಸರು ಹೇಳುತ್ತಿದ್ದವರು ಅವರ ಋಣ ತಿರಿಸಬೇಕಾದರೆ ಪಕ್ಷ ಅವರ ಮಗನಿಗೆ ಸೂಕ್ತ ಸ್ಥಾನವನ್ನು ನೀಡಿದರೆ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುವಂತಾಗುತ್ತದೆ ಅಲ್ಲದೆ ಅವರೊಬ್ಬ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಜಾತ್ಯಾತೀತ ನಾಯಕರಾಗಿ ಮಹಾನ್ ಮೇಧಾವಿಯಾಗಿದ್ದವರು ಅವರ ಸಾವು ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖಂಡ ನವನೀತ್ ಗೌಡ,
ಶಿವಕುಮಾರ್ ,ಬ್ಲಾಕ್ ಅದ್ಯಕ್ಷರುಗಳಾದ ,ಮುಕುಂದವರ್ಮ, ಈಶ್ವರ್ , ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಬಸವರಾಜು ,ಲೊಕ್ಕನಳ್ಳಿ ಜಗದೀಶ್ , ಕೊಪ್ಪಳಿ ಮಹದೆವನಾಯಕ ,ಚೇತನ್ ದೊರೈರಾಜು ,ಮುರುಡೇಶ್ವರ ಸ್ವಾಮಿ ಗಿರೀಶ್ ಕುಮಾರ್ ,ಮಂಗಲ ಪುಟ್ಟರಾಜು,ನಾಗರಾಜು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್