ತುಮಕೂರು/ಪಾವಗಡ:ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಪೂಜಾರಪ್ಪನವರ ನೇತೃತ್ವದಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಅಂಬೇಡ್ಕರ್ ವೃತದಿಂದ ಪ್ರಮುಖ ರಸ್ತೆ ಮುಖಾಂತರ ಹೊರಟು ಪ್ರತಿಭಟನಾಕಾರರು ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂದಿನ ಆವರಣದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಇವರನ್ನು ಉದ್ದೇಶಿಸಿ ಪೂಜಾರಪ್ಪನವರು ಮಾತನಾಡುತ್ತಾ, ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರ ಜಮೀನು ವಶಕ್ಕೆ ಪಡೆಯುವ ಪ್ರಯತ್ನ ನಿಲ್ಲಿಸಬೇಕು ಹಾಗೂ ಹೂವಿನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಅಳತೆ ಪ್ರಮಾಣ ಮಾರು ರೂಪದಲ್ಲಿದ್ದು ಇದನ್ನು ಐದು ಅಡಿಗೆ ನಿಗದಿಗೊಳಿಸಿ ರೈತರಿಗೆ ಆಗುವ ವಂಚನೆಯನ್ನು ತಪ್ಪಿಸಬೇಕು ಮತ್ತು ತಾಲೂಕಿನ ಸಮಸ್ತ ರೈತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕೆಂದು ತಿಳಿಸಿದರು.
ರಾಜ್ಯ ಪ್ರಧಾನ ಮಹಿಳಾ ವಿಭಾಗ ಕಾರ್ಯದರ್ಶಿ ಶ್ರೀಮತಿ ಎನ್ ಮಂಜುಳಾ , ತುಮಕೂರು ಜಿಲ್ಲೆ ಕಾರ್ಯದರ್ಶಿ ಜೆ ಶಂಕರಪ್ಪ , ದೊಡ್ಡಮಾಳಮ್ಮ, ಮಹಿಳಾ ಅಧ್ಯಕ್ಷರು ನಾಗರತ್ನಮ್ಮ, ಕೊರಟಗೆರೆ ಕಾರ್ಯದರ್ಶಿ ಶಬ್ಬೀರ್, ರೈತ ಮುಖಂಡ ನರಸಿಂಹ, ಉಪಾಧ್ಯಕ್ಷರು ಬಿ ಎಸ್ ಪಿ ಮಂಜುನಾಥ್, ನಾರಾಯಣಪ್ಪ ,ಕಾರ್ಯದರ್ಶಿ ನರಸಣ್ಣ , ಯುವ ಘಟಕದ ಅಧ್ಯಕ್ಷ ಕೋಳಿ ಬಾಲಾಜಿ, ಯುವ ಘಟಕದ ಅಧ್ಯಕ್ಷ ಶಿವು, ತಾಲೂಕು ಸಹ ಕಾರ್ಯದರ್ಶಿ ಚಿತ್ತಯ್ಯ, ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ಸಂಘಟಿತ ಕಾರ್ಮಿಕರ ಘಟಕ ಸುಶೀಲಮ್ಮ ಇನ್ನು ಅನೇಕ ರೈತರು ಭಾಗವಹಿಸಿದ್ದರು.