ಹನೂರು:ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಆರಾಧ್ಯ ದೇವಿ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವವು ಮಾ.13ರಿಂದ 16 ರವರೆಗೆ ನಡೆಯಿತು ಮಾರಮ್ಮನ ಭಕ್ತಾದಿಗಳು ಬಾಯಿ ಬೀಗ ಹಾಕಿಸಿಕೊಳ್ಳುವ ಮೂಲಕ ದೇವಿಯ ಹರಕೆ ತೀರಿಸಿದರು.
ಗ್ರಾಮ ದೇವತೆಯ ಹಬ್ಬವು ಕಳೆದೆರಡು ವರ್ಷಗಳಿಂದ ಕೊರೋನಾ ಸೋಂಕಿನಿಂದ ಹಬ್ಬವನ್ನು ಆಚರಿಸಲಿಲ್ಲ ಆದರೆ ಇತ್ತಿಚಿಗೆ ಸೋಂಕು ಕಡಿಮೆಯಾದ ಕಾರಣ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು ಸರಿ ಸುಮಾರು ಇಪ್ಪತ್ತೆರಡು ಅಡಿ ಉದ್ದದ ಸರಳುಗಳ ಬಾಯಿ ಬೀಗವನ್ನು ಎಂಬತ್ತೊಂಬತ್ತು ಜನ ಹಾಕಿಸಿಕೊಂಡರೆ ಸುಮಾರು ಮೂರು ಸಾವಿರ ಸಾವಿರಕ್ಕೂ ಹೆಚ್ಚು ಜನ ಸಣ್ಣ ಬಾಯಿ ಬೀಗವನ್ನು ಹಾಕಿಸಿಕೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು ಎನ್ನಲಾಗಿದೆ
ಗ್ರಾಮದಲ್ಲಿ ವಿವಿಧ ಗ್ರಾಮಗಳಿಂದ ನೂರಾರು ಜನ ವ್ಯಾಪರಸ್ತರು ಆಗಮಿಸಿದ್ದು ಕಾಣುತ್ತಿದ್ದು ಒಟ್ಟಾರೆಯಾಗಿ ಹೇಳುವುದಾದರೆ ಶ್ರೀ ಮಾರಮ್ಮನ ಜಾತ್ರೆಯು ಸರಳವಾಗಿಯಾದರೂ ಅದ್ದೂರಿಯಾಗಿ ನಡೆಯಿತು.
ವರದಿ:ಉಸ್ಮಾನ್ ಖಾನ್