ಕೊಪ್ಪಳ:ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಹಳ್ಳಿಕೇರಿಮಠ ದಂಪತಿಗಳನ್ನು ಶ್ರೀಅಕ್ಕಮಹಾದೇವಿ ಮಹಿಳಾ ಮಂಡಳಿ (ರಿ.) ಕೊಪ್ಪಳ ವತಿಯಿಂದ ಕೊಪ್ಪಳದ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ,ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ಧ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಚುಟುಕು ಸಾಹಿತ್ಯ ಕ್ಷೇತ್ರದ ಮೂಲಕ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಮಾಡಿದ ಭಾಗ್ಯ ಶ್ರೀ ಹಾಗೂ ಜನಪದ ಕಲೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ಲೋಬಲ್ ಐಕಾನಿಕ್ ಪ್ರಶಸ್ತಿ ಪಡೆದ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ದಂಪತಿಗಳ ಸಮಾಜಮುಖಿ ಸೇವೆಯನ್ನು ಪರಿಗಣಿಸಿ ಗೌರವ ಸತ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕರಾದ ಮಾನ್ಯ ಶ್ರೀ ರಾಘವೇಂದ್ರ ಹಿಟ್ನಾಳ,ಕೃಷಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮಂಗಳಾ ಕಿರಣ ನೀಲಗುಂದ,ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷರಾದ ಶ್ರೀಮತಿ ಕೋಮಲಾ ಕೆ ಕುದರಿಮೋತಿ, ಅ.ಮ.ಮಂ.ಗೌರವ ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ನೀಡಶೇಶಿ,ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಕೆ ಶೆಟ್ಟರ್,ಸೇರಿದಂತೆ ಮಂಡಳಿಯ ಸರ್ವಸದಸ್ಯರು ಪಾಲ್ಗೊಂಡಿದ್ದರು.
-ಕರುನಾಡ ಕಂದ