ಯಾದಗಿರಿ: ಸುರಪುರ ತಾಲೂಕಿನ ಕೃ.ಭಾ.ಜ.ನಿ. ಹಸನಾಪುರ ಕಛೇರಿ ಸ್ಥಳಾಂತರ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ವಿರೋಧ.
ಗೌರವಾನ್ವಿತ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಅವರಿಗೆ ತಿಳಿಸುವುದೆನಂದರೆ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಡಿ (ಕೃಷ್ಣ ಕಾಡ) ಆಡಳಿತ ನಿಯಂತ್ರಣದಲ್ಲಿ ಇರುವ ಕಾರ್ಯನಿರ್ವಾಹಕ ಅಭಿಯಂತರರು ಹೊಲಗಾಲುವೆ ವಿಭಾಗ ನಂ-2 ಕೃಭಾಜನಿನಿ ಹಸನಾಪುರ ಕಛೇರಿಯನ್ನು ಹಸನಾಪುರ ಕೇಂದ್ರ ಸ್ಥಳದಿಂದ ಬಾಗಲಕೋಟೆ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡಿರುವುದು ತಿಳಿದು ಬಂದಿದೆ ಸದರಿ ವಿಭಾಗ ಕಛೇರಿ ಅಧೀನದಲ್ಲಿ ಬರುವ ಉಪ-ವಿಭಾಗ ಕಛೇರಿ ಅಧೀನದಲ್ಲಿ ಬರುವ ಯಾದಗಿರಿ ಜಿಲ್ಲೆಯ ನಮ್ಮ ಮತ ಕ್ಷೇತ್ರವಾದ ಶಹಾಪುರ ಸುತ್ತ ಮುತ್ತಲಿನ ಸುರಪುರ, ಗುರಮಿಠಕಲ್,ಯಾದಗಿರಿ ತಾಲೂಕ ಕ್ಷೇತ್ರಗಳಲ್ಲಿ ಅಚ್ಚುಕಟ್ಟು ರಸ್ತೆ,ಬೋರವೆಲ್,ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಹೊಲಗಾಲುವೆ.ಬಸಿಗಾಲುವೆ ಹಾಗೂ ಚೆಕ್ ಡ್ಯಾಮ್ ಕಾಮಗಾರಿಗಳು ನಿರ್ವಹಿಸುತ್ತಿದ್ದಾರೆ.ಡಿ-9ಎ ಎನ್.ಆರ್.ಬಿ.ಸಿ ಎಕ್ಸಟೆನ್ಸನ್ ನಲ್ಲಿ ಹೊಲಗಾಲುವೆ ಕಾಮಗಾರಿಗಳು ಕೈಗೊಳ್ಳುವುದು ಬಾಕಿ ಇರುತ್ತದೆ. ಹಾಗೂ ರಾಂಪುರ ಏತ ನೀರಾವರಿ ಅಡಿಯಲ್ಲಿ ಮುಖ್ಯ ವಿತರಣಾ ಕಾಲುವೆ ಮತ್ತು ನೇರ ತುದಿಗಳು ಸಂಪೂರ್ಣ ಪೂರ್ಣಗೊಂಡಿರುತ್ತದೆ ಸುಮಾರು 5000 ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆ ಮುಖಾಂತರ ನೀರು ಪೂರೈಸಬೇಕಾಗುತ್ತದೆ ಮತ್ತು ಇದರಿಂದ ಈ ಭಾಗದ ಎಲ್ಲಾ ರೈತರಿಗೆ ಅನುಕೂಲವಾಗುವುದು ಹಾಗೂ ಆರ್ಥಿಕ ಸದೃಢ ಗೊಳ್ಳುವುದು ಅವಶ್ಯಕವಾಗಿರುತ್ತದೆ.
ಕರ್ನಾಟಕ ರಾಜ್ಯದ ಕಲಬುರ್ಗಿ ಕಂದಾಯ ವಿಭಾಗದ ಪ್ರದೇಶವು ಅತ್ಯಂತ ಹಿಂದುಳಿದ ಪ್ರಯುಕ್ತ ಈ ಭಾಗವನ್ನು ರಾಜ್ಯದ ಇತರೆ ಪ್ರದೇಶಗಳಿಗೆ ಸಮಾಂತರವಾಗಿ ಅಭಿವೃದ್ಧಿಗೊಳಿಸಲು ಈ ಭಾಗಕ್ಕೆ ವಿಶೇಷವಾಗಿ ಸಂವಿಧಾನದ 371 ಜೆಡಿಎಸ್ ವಿಧಿಯನ್ನು ಅನ್ವಯಿಸಲಾಗಿದೆ.
ರಾಜ್ಯದ ಇತರೆ ಭಾಗಗಳಂತೆ ಈ ಪ್ರದೇಶದಲ್ಲಿ ಅಭಿವೃದ್ಧಿಗೆ ಚಾಲನೆ ನೀಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಕೆಲ ಪ್ರದೇಶಕ್ಕೆ ಈ ಮುಂಚೆಯ ತುಂಗಭದ್ರಾ ಈ ಯೋಜನೆಯಲ್ಲಿ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕರಾದ ಶಿವಪುತ್ರಪ್ಪ ಜವಳಿ ಅವರು ಹೇಳಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ