ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕರ್ನಾಟಕ ರತ್ನ ಡಾ.ಶ್ರೀ. ಶಿವಕುಮಾರ ಸ್ವಾಮೀಜಿ ರವರ ಪ್ರತಿಮೆ ಅನಾವರಣ ಕಾರ್ಯಕ್ರಮ

ಹನೂರು : ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಹೃದಯ ಶ್ರೀಮಂತಿಕೆ ಇದ್ದವರು. ನಡೆದಾಡುವ ದೇವರನ್ನು ನಾವೆಲ್ಲರೂ ನೋಡಿದ್ದೇವೆ ಇಂತಹ ಕಾಲಘಟ್ಟದಲ್ಲಿ ಬದುಕಿರುವ ನಾವೆಲ್ಲರೂ ಪುಣ್ಯವಂತರು ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.

ತಾಲೂಕಿನ ರಾಮಪುರ ಗ್ರಾಮದಲ್ಲಿ ಪರಮಪೂಜ್ಯ ಕರ್ನಾಟಕ ರತ್ನ ಶ್ರೀ ಡಾಕ್ಟರ್ ಶಿವಕುಮಾರ ಸ್ವಾಮಿಗಳವರ ಶಿಲಾ ಪ್ರತಿಮೆ ಮಂಟಪ ಅನಾವರಣ ಮತ್ತು ಧಾರ್ಮಿಕ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡಿ ಮುನ್ನಡೆಸುವ ದೈವ ಪುರುಷರು ಸುತ್ತೂರಿನ ಮಹಾ ಸ್ವಾಮೀಜಿಗಳು ಹಾಗೂ ಸಿದ್ದಗಂಗಾ ಮಠ ಸ್ವಾಮಿಗಳು ಎರಡು ಕಣ್ಣುಗಳು ಅವರ ಕಾಲದಲ್ಲಿ ಬದುಕಿರುವ ನಾವೇ ಧನ್ಯರು.

ಮುಂದಿನ ಪೀಳಿಗೆಯ ಮಕ್ಕಳಿಗೆ ಅವರ ತತ್ವ ಆದರ್ಶಗಳನ್ನು ಮೈಗೂಡಿಸಬೇಕು, ವಿದ್ಯಾರ್ಥಿಗಳು ಎಲ್ಲಿ ವಾಸವಿರುತ್ತಾರೋ ಅದು ಮಠವಾಗಿರುತ್ತದೆ. ನೂರಾರು ಉಪಜಾತಿಗಳು ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಒಂದೇ ಮಠದಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

ಶತಮಾನಗಳ ಹಿಂದೆ ಭಗವಾನ್ ಬುದ್ದ, ಅಕ್ಕಮಹಾದೇವಿ,ಮಲೆ ಮಹದೇಶ್ವರ ರಂತಹ ಶತಮಾನದಲ್ಲಿ ಶ್ರೇಷ್ಠ ಸಂತರು ನೀಡಿರುವ ಧಾರ್ಮಿಕಶಕ್ತಿಯುಳ್ಳ ದೇಶ ನಮ್ಮದು.

ಸಿದ್ದಗಂಗಾ ಶ್ರೀ ಮಠವು ನಮ್ಮ ಆದರ್ಶ ವಿದ್ಯಾರ್ಥಿಗಳಿಗೆ ಸಂಸ್ಕಾರ, ಕಾಯಕವನ್ನು ಮಾಡುತ್ತ ದೈವ ಮಾನವರಾದ ಸಿದ್ದಗಂಗಾ ಶಿವಕುಮಾರ ಶ್ರೀಗಳ ಬದುಕಿನ ತತ್ವ ಆದರ್ಶಗಳು ಸಮಾಜಕ್ಕೆ ಒಳ್ಳೆಯ ಅಸ್ತಿಯಾಗಿ ಮಾದರಿಯಾಗಿದೆ ಎಂದು ತಿಳಿಸಿದರು.

ಶಾಸಕ ಆರ್. ನರೇಂದ್ರ ಅವರು ಮಾತನಾಡಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳು ಅವರನ್ನು ನಡೆದಾಡುವ ದೇವರು ಎಂದೇ ಜನಪ್ರಿಯವಾಗಿದ್ದರೆ,ಜಾತಿ ತಾರತಮ್ಯ ವಿಲ್ಲದೆ ಲಕ್ಷಾಂತರ ಮಕ್ಕಳ ಶಿಕ್ಷಣ ನೀಡಿ ಮನುಷ್ಯರ ಮಕ್ಕಳಿಗೆ ದಾರಿದೀಪವಾಗಿದೆ.

ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಐಎಎಸ್ ಐಪಿಎಸ್ ಡಾಕ್ಟರ್ ಇಂಜಿನಿಯರ್ ಹುದ್ದೆಗಳನ್ನು ಹೊಂದಿದ್ದಾರೆ,ಶ್ರೀಗಳ ತತ್ವ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿದೆ. ಶಿವಕುಮಾರ ಸ್ವಾಮೀಜಿಗಳ ಸೇವೆಯನ್ನು ಮಕ್ಕಳಿಗೆ ತಿಳಿಸುವಂತಗಾಬೇಕು ಎಂದು ತಿಳಿಸಿದರು.

ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರು ಮಾತನಾಡಿ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ ಕಾಲಘಟ್ಟದಲ್ಲಿ ಇದ್ದಂತಹ ನಾವೇ ಪುಣ್ಯವಂತರು ಪರಮಾಪೂಜ್ಯರು ಪವಾಡ ಪುರುಷರು. ಸಿದ್ದಗಂಗಾ ಮಠದಲ್ಲಿ ಶ್ರೀಗಳನ್ನು ನಂಬಿ ಬಂದಂತಹ ವಿದ್ಯಾರ್ಥಿಗಳು ಭಕ್ತರನ್ನು ದಾಸೋಹ ಭವನದಲ್ಲಿ ಯಾರನ್ನು ಕಳುಹಿಸಿದ ಉದಾಹರಣೆ ಇಂದಿಗೂ ಇಲ್ಲ.

ಶ್ರೀ ಮಠಕ್ಕೆ ರಾಜ್ಯದ ಎಲ್ಲಾ ಕಡೆಗಳಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಸೃಷ್ಟಿಸಿಕೊಳ್ಳಲು ಆಗಮಿಸುತ್ತಾರೆ. ದಿನನಿತ್ಯ ಅನ್ನದಾಸೋಹ ಶಿಕ್ಷಣ ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ತಮ್ಮ ಭವಿಷ್ಯದ ಬದುಕಿಗೆ ಬೆಳಕಾಗಿದೆ.

ಶ್ರೀಗಳು ನಾಗಪ್ಪ ಅವರ ಬಗ್ಗೆ ಬಹಳ ಅಭಿಮಾನ ಗೌರವ ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿದ್ದರು. ಅವರ ಮಾರ್ಗದರ್ಶನ ಇಂದಿಗೂ ನಮಗೆ ಆದರ್ಶ ವಾಗಿದೆ ಮುಂದಿನ ದಿನಗಳಲ್ಲಿ ಶ್ರೀಗಳ ಆಶೀರ್ವಾದ ಎಲ್ಲರಿಗೂ ಸಿಗಲಿ ಅದರಂತೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅಜ್ಜೀಪುರ ಮಠಾಧ್ಯಕ್ಷರಾದ ನಂದಿಶ ಶಿವಾಚಾರ್ಯ ಸ್ವಾಮೀಜಿ, ಬಸವಣ್ಣ ಸ್ವಾಮೀಜಿ, ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳ ನಾಗಪ್ಪ, ಡಾ.ಪ್ರೀತನ್ ನಾಗಪ್ಪ, ಸಮಾಜ ಸೇವಕ ನಿಶಾಂತ್, ದತ್ತೆಶ್ ಕುಮಾರ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್, ಬಸವರಾಜಪ್ಪ, ಗ್ರಾಮ ಪಂ. ಅಧ್ಯಕ್ಷೆ ದ್ರಾಕ್ಷಿಯಣಿ ದೇವಿ, ಮಾಜಿ ಜಿಲ್ಲಾ ಪಂ. ಸದಸ್ಯ ಬಸವರಾಜು, ಗುತ್ತಿಗೆದಾರ ನಟರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ