ಯಾದಗಿರಿ:ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಫಲಾನುಭವಿಯ ಸಮ್ಮೇಳನವನ್ನು ಶ್ರೀಪ್ರಭು ಬಿ.ಚವ್ಹಾಣ್ ಸನ್ಮಾನ್ಯ ಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಶ್ರೀ ಭಗವಂತ ಖೂಬಾ ಸನ್ಮಾನ್ಯ ನವಿಕರಿಸಬಹುದಾದ ಇಂಧನ,ರಸಗೊಬ್ಬರ ರಾಜ್ಯ ಸಚಿವರು ಭಾರತ ಸರಕಾರರವರು,ಶ್ರೀ ರಾಜುಗೌಡ ಸನ್ಮಾನ್ಯ ಅಧ್ಯಕ್ಷರು,ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ,ಬೆಂಗಳೂರು,ಶ್ರೀ ರಾಜ ಅಮರೇಶ್ವರ ನಾಯಕ ಸನ್ಮಾನ್ಯ ಲೋಕಸಭಾ ಸದಸ್ಯರು ರಾಯಚೂರು,ಶ್ರೀ ವೆಂಕರೆಡ್ಡಿಗೌಡ ಮುದ್ನಾಳ ಸನ್ಮಾನ್ಯ ಶಾಸಕರು ಯಾದಗಿರಿ,ಶ್ರೀ ಬಾಬುರಾವ್ ಚಿಂಚನಸೂರು ಸನ್ಮಾನ್ಯ ಅಧ್ಯಕ್ಷರು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಇತರೆ ಗಣ್ಯರು ಪಾಲ್ಗೊಂಡಿದ್ದು, ಮಾನ್ಯ ಜಿಲ್ಲಾ ಅಧಿಕಾರಿಗಳು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂಯಾದಗಿರಿ, ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಯಾದಗಿರಿ ರವರು ಉಪಸ್ಥಿತರಿದ್ದು.
ಇತರೆ ಚುನಾಯಿತ ಪ್ರತಿನಿಧಿಯವರು, ಫಲಾನುಭವಿಗಳು, ಇತರೆ ಅಧಿಕಾರಿಗಳು ಸಿಬ್ಬಂದಿಯವರು ಭಾಗವಹಿಸಿದ್ದರು,
ಸ್ವಚ್ಛ ಭಾರತ ಮಿಷನ್ ಹಾಗೂ ಜಲಜೀವನ್ ಮಿಷನ್ ಯೋಜನೆಯ ಮಾಹಿತಿ ಕೇಂದ್ರ ಹಾಕಲಾಗಿದ್ದು ಸದರಿ ಕೇಂದ್ರಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಾನ್ಯ ಅಪರ ಜಿಲ್ಲಾಧಿಕಾರಿಗಳು, ಮಾನ್ಯ ಯೋಜನಾ ನಿರ್ದೇಶಕರು, ಜಿ.ಪಂ.ಯಾದಗಿರಿ, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಭೇಟಿ ನೀಡಿದರು.ಈ ಸಂದರ್ಭದಲ್ಲಿ ಶಹಾಪೂರ,ಯಾದಗಿರಿ,ಸುರಪುರ ಸ್ವಚ್ಛ ಭಾರತ ಮಿಷನ್ ಸ್ವಚ್ಛ ಸಮಾಲೋಚಕರು,ಇತರೆ ಸಿಬ್ಬಂದಿ, ಫಲಾನುಭವಿಯವರು ಹಾಜರಿದ್ದರು.
-ತಾರೇಶ ಯಾದವ್ ಗೋಗಿ