ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ಇಂದು ಯೂತ್ ಕಾಂಗ್ರೆಸ್ಸಿನಿಂದ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು ಓರಿಸ್ಸಾದಿಂದ ಸತ್ಯ ಭಾರತ್ ರಾಜ್ ದಾಸ್ ಯೂತ್ ರಾಷ್ಟ್ರೀಯ ಕಾರ್ಯದರ್ಶಿ ಆಗಮಿಸಿದ್ದರು ಇವರು ಕಾಂಗ್ರೆಸ್ ಪಕ್ಷದಿಂದ ಹೊರಡಿಸಲಾದ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ಉಚಿತ ವಿದ್ಯುತ್ ಮತ್ತು ಸ್ತ್ರೀಯರಿಗೆ ಮನೆ ನಿರ್ವಹಣೆಗೆ 2000 ಇರುವ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲು ಮನೆ ಮನೆಗೆ 60 ದಿನಗಳ ಕಾಲ ಹೊನ್ನಾಳಿ ತಾಲೂಕಿನ ಅತ್ಯಂತ ಮನೆ ಮನೆಗೆ ಭೇಟಿ ನೀಡಿ ಈ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ರಂಜಿತ್ ಆಫ್ರಿಕಟ್ಟೆ ಇವರು ಮಾತನಾಡಿ ನಮ್ಮ ಕಾಂಗ್ರೆಸ್ ಇಂದ ಉಚಿತವಾಗಿ ನೀಡುತ್ತಿದ್ದ ಅಕ್ಕಿಯನ್ನು ಈ ಬಿಜೆಪಿಯವರು 10 ಕೆಜಿಯಿಂದ ನಾಲ್ಕು ಕೆಜಿ ಗಳಿಸಿದ್ದಾರೆ ಇದು 40% ಕಮಿಷನ್ ಪಕ್ಷ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಯುವಕರಾದ ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಆಡಳಿತದ ಬಗ್ಗೆ ಮತ್ತು ನಮ್ಮ ಕೊಡುಗೆಯ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಬೇಕು ಇದರಿಂದ ನಮ್ಮ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಹೇಳಿದರು
ಮಾನ್ಯ ಮುಖ್ಯಮಂತ್ರಿ ಅವರು ಮತ್ತು ನಮ್ಮ ಹೊನ್ನಾಳಿಯ ಶಾಸಕರು ಇದು ಗ್ಯಾರೆಂಟಿ ಕಾರ್ಡ್ ಅಲ್ಲ ಬೋಸ್ ಕಾರ್ಡ್
ಎಂದು ಹೇಳಿದರೆ ಮುಂದಿನ ದಿನಗಳಲ್ಲಿ ನಾವುಗಳು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಹೈದ್ ದಿನ ಖಾನ್,ದರ್ಶನ್ ಬಲ್ಲೇಶ್ವರ ಪ್ರಶಾಂತ್ ಇನ್ನು ಹಲವಾರು ಯೂಥ್ ಕಾಂಗ್ರೆಸ್ಸಿನ ಕಾರ್ಯಕರ್ತರು ಭಾಗವಹಿಸಿದ್ದರು.
