ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹತ್ತನೇ ತರಗತಿ ವಿಧ್ಯಾರ್ಥಿಗಳಿಗೆ ಕಂಪಾಸ ಬಾಕ್ಸ್ ವಿತರಣಾ ಕಾರ್ಯಕ್ರಮ ಜರುಗಿತು ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ರಾಜ್ಯ ಅಧ್ಯಕ್ಷರಾದ ಅರುಣ್ ಕುಮಾರ್ ಎಂ ,ಖೆತಿವಾಲ ಮತ್ತು ಅಮೃತ ಶಾಲ ಸಿ.ಇ.ಓ ಲಕ್ಷ್ಮಣ.ಕೆ.
ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಶ್ರೀ ಶರಣಕುಮಾರ ಅಲ್ಲಮಪ್ರಭು ಪಾಟೀಲ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಪರೀಕ್ಷೆ ಬರಿಯುವ ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೆ ಆತ್ಮ ವಿಶ್ವಾಸದಿಂದ ಎದುರಿಸುವ ಗುಣ ಬಳಸಿಕೊಳ್ಳಬೇಕು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಸರಿಯಾದ ಮಾರ್ಗದರ್ಶನ ಪಡೆದು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡಿಯಲು ತಿಳಿಸಿದರು, ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಮೇಶಕಮಾರ ದೇವಣಿ, ಹಾಗು ಮುಖ್ಯ ಅತಿಥಿಗಳಾದ ಶ್ರೀ ಮಹೇಶಕುಮಾರ ಹೂಗಾರ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢಶಾಲೆ ಶಿಕ್ಷಕರ ಸಂಘ ಕಲಬುರಗಿ,ಮುಖ್ಯ ಭಾಷಣಕಾರರು ಶ್ರೀ ಪ್ರಕಾಶ ನಾಯಕೂಡಿ ಸಹಾಯಕ ನಿರ್ದೇಶಕರು ಚಿತ್ತಾಪುರ,ವಿನೋದಕುಮಾರ ತಿವಾರಿ,ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ನ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಅಭಿಷೇಕ ದೊಡ್ಡಮನಿ, ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ನ ಜಿಲ್ಲಾ ಕಾರ್ಯದರ್ಶಿ ಮೈಲಾರಿ ದೊಡ್ಡಮನಿ, ಕರ್ನಾಟಕ ಸಮಾಜ ಸೇವಾ ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ದೊಡ್ಡಮನಿ, ವೀರೇಶ ಸಹ ಶಿಕ್ಷಕರು ಹಾಗು ಶಾಲೆಯ ಮುದ್ದು ಮಕ್ಕಳು ಹಾಜರಿದ್ದರು.
