ಚಾಮರಾಜನಗರ/ಹನೂರು:ರೈತರು ದಿನ ನಿತ್ಯವೂ ಸರ್ಕಾರಿ ಕಛೇರಿಗೆ ಅಲೆದಾಡುವ ಪರಿಸ್ಥಿತಿಯಿದ್ದು ಅಧಿಕಾರಿಗಳು ಕೂಡಲೆ ಬಗೆಹರಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆ ತಾಲ್ಲೂಕು ಅಧ್ಯಕ್ಷ ಗೌಡೆಗೌಡ ತಿಳಿಸಿದರು .
ರಾಮಪುರದ ನಾಡ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು
ಸಾರಿಗೆ ಇಲಾಖೆಯಿಂದ ಹೆಚ್ಚುವರಿಯಾಗಿ ಎರಡು ಬಸ್ಸುಗಳನ್ನು ಅಜ್ಜಿಪುರ ,ಕಾಂಚಳ್ಳಿ ,ಬಸಪ್ಪನದೊಡ್ಡಿ ,ಗುಂಡಾಪುರ , ಸೇರಿದಂತೆ ವಿವಿಧ ಕಡೆಯಿಂದ ನೂರತ್ತೊಂಬತ್ತಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡತೊಡಗಿದ್ದು ಮತ್ತೊಂದು ಕಡೆ ಇನ್ನೂರೈವತ್ತಕ್ಕೂ ಹೆಚ್ವು ಮಕ್ಕಳು ವಿದ್ಯಾಭ್ಯಾಸ ಮಾಡತೊಡಗಿದ್ದು ಎಲ್ಲರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೆಕೆಂದು ಬೇಡಿಕೆಯಿಟ್ಟರು ಅಲ್ಲದೆ
ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ತೆ ಇಲ್ಲದ ಕಾರಣ ದೂರು ನೀಡಲಾಯಿತು,ಅಜ್ಜಿಪುರ ,ಕುರುಬರುದೊಡ್ಡಿ ,ಬಸಪ್ಪನದೊಡ್ಡಿ , ಆಸ್ಪತ್ರೆಗೆ ವೈದ್ಯರು ಬರ್ತಿಲ್ಲಎಂದಾಗ ,ತಕ್ಷಣ ಸ್ಪಂದಿಸಿದ ಡಾಕ್ಟರ್ ಪ್ರಕಾಶ್ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು ,ಹಾಗೂ ಕಂದಾಯ ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ವಿ ಎ ಗಳು ಸರಿಯಾದ ರೀತಿಯಲ್ಲಿ ಖಾತೆಯನ್ನು ಮಾಡಿಕೊಡುತ್ತಿಲ್ಲ ,ಪೆನ್ಸನ್ ಮಾಡಿಸಲು ಅಧಿಕಾರಿಗಳಿಗೆ ಲಂಚ ನೀಡಬೇಕು ಅಲ್ಲದೆ ಇನ್ನಿತರ ಕೆಲಸಮಾಡಲು ಲಂಚ ಕೆಳತ್ತಿದ್ದಾರೆ ನಾಡಕಛೇರಿಯಲ್ಲಿ ಗಣಕ ಯಂತ್ರದಲ್ಲಿ ನಮೂದು ಮಾಡಲು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ದೂರಿದರು.
ಹಾಗೇನೆ ,
ಗ್ರಾಮ ಪಂಚಾಯತಿಗಳಲ್ಲಿ ಪಿ ಡಿ ಒ ಗಳು ಇ ಸ್ವತ್ತು ಮಾಡಲು ಐದು ಸಾವಿರ ಹಣ ಪಡೆಯುತ್ತಿದ್ದಾರೆ ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲ ಮನೆಗಳಿಗೆ ಲಂಚ ಸ್ವಿಕಾರ ಶೌಚಾಲಯ ನಿರ್ಮಾಣ ಅಕ್ರಮ ದನಗಳ ಕೊಟ್ಟಿಗೆ ,ಆಡಿನ ಕೊಟ್ಟಿಗೆ ಮಾಡಿದರು ಹಣ ಬಿಡುಗಡೆಯಿಲ್ಲ ಎಂದು ರೈತ. ಮುಖಂಡ ರಾದ ಗೌಡೆಗೌಡ ತಿಳಿಸಿದರು . ಇದೇ ಸಂದರ್ಭದಲ್ಲಿ ಮಾತನಾಡಿದ
ಉಪಾ ತಹಶಿಲ್ದಾರರ್ ರವರು ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ದರಾಗಿದ್ದೆವಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಆಗಮಿಸುವ ನೀರಿಕ್ಷೆಗಳಿದ್ದು ಎಲ್ಲಾವನ್ನು ಬಗೆಹರಿಸಲಾಗುವುದು ಎಂದರು , ಇದೇ ಸಮಯದಲ್ಲಿ ರವಿನಾಯ್ಕ ,ಅಮ್ಜಾದ್ ,ಕನಕ,ಪಳನಿಯಪ್ಪ,ಬಸವರಾಜು ,ನಾಗೇಂದ್ರ ,ಉಪಾಧ್ಯಕ್ಷ ಬಸವರಾಜು ,ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು .
ವರದಿ:ಉಸ್ಮಾನ್ ಖಾನ್