ಮನಸ್ಸು ಎಲ್ಲೋ ಹೊರಟೈತಿ
ಕನಸ್ಸು ಮಾತ್ರ ತುಂಬೈತಿ
ಯಾಕೋ ಏನೋ ಗೊತ್ತಿಲ್ಲ
ನನಗಂತೂ ತಿಳಿಯದಾಂಗಾಗೈತಿ
ಕಣ್ಣುಗಳ ದೃಷ್ಟಿ ಎಲ್ಲೋ ಹೊರಟೈತಿ
ಕಿವಿಗೆ ಸುದ್ದಿ ಏನೇನೋ ಬೀಳತೈತಿ
ಯಾಕೋ ಏನೋ ಗೊತ್ತಿಲ್ಲ
ನನಗಂತೂ ತಿಳಿಯದಾಂಗಾಗೈತಿ
ನಾಲಿಗೆ ಏನೇನೋ ನುಡಿತೈತಿ
ಚರ್ಮಕ್ಕೆನೋ ಸ್ಪರ್ಶವಾಗೈತಿ
ಯಾಕೋ ಏನೋ ಗೊತ್ತಿಲ್ಲ
ನನಗಂತೂ ತಿಳಿಯದಾಂಗಾಗೈತಿ
ಮೂಗಿಗೇನೋ ಸುಗಂಧ ಮೂಸುತೈತಿ
ಯಾವುದೋ ಮೋಹಕ್ಕ ಮನಸ್ಸು ಮರುಗೈತಿ
ಯಾಕೋ ಏನೋ ಗೊತ್ತಿಲ್ಲ
ನನಗಂತೂ ತಿಳಿಯದಾಂಗಾಗೈತಿ
ಮತ್ತೊಬ್ಬರ ಮಾತಿಗೆ ಬಲಿಯಾಗಿ ಕುಳಿತೈತಿ
ಹೆತ್ತವರ ಪ್ರೀತಿಗೆ ಮನ ಮೌನದೊಳಗ ಮುಳುಗೈತಿ
ಯಾಕೋ ಏನೋ ಗೊತ್ತಿಲ್ಲ
ನನಗಂತೂ ತಿಳಿಯದಾಂಗಾಗೈತಿ
- ಹನುಮಂತ ದಾಸರ
ಯುವ ಕವಿ ಸಾಹಿತಿ ಬರಹಗಾರರು ಧಾರವಾಡ.
ಮೊ : 9945246234.