ಭದ್ರಾವತಿ: ವಿ ಐ ಎಸ್ ಎಲ್ ಗುತ್ತಿಗೆ ಕಾರ್ಮಿಕರ ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರನ್ನು ಶಿರಾಳಕೊಪ್ಪದಲ್ಲಿ ಭೇಟಿ ಮಾಡಿ ವಿ ಐ ಎಸ್ ಎಲ್ ಕಾರ್ಖಾನೆಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಯಿತು.
ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಕಾರ್ಖಾನೆಯ ಆಡಳಿತವರ್ಗ ಈಗಾಗಲೇ ಹಲವಾರು ಇಲಾಖೆಗಳ ಉತ್ಪಾದನೆಯನ್ನು ನಿಲ್ಲಿಸಿ ಅಲ್ಲಿರುವ ವಸ್ತುಗಳನ್ನು ಬೇರೆಡೆಗೆ ಸಾಗಿಸಲು ತಯಾರಿ ನಡೆಸಿದ್ದಾರೆಂಬ ಮಾಹಿತಿಯನ್ನು ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ VISL ಕಾರ್ಖಾನೆ ಮುಚ್ಚುವ ತೀರ್ಮಾನವನ್ನು ಕೈ ಬಿಡಬೇಕು ಎಂದು ಈಗಾಗಲೇ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರವರಿಗೆ ಹಾಗೂ ಕೇಂದ್ರ ಉಕ್ಕು ಸಚಿವರಾದ ಜೋತ್ಯಿರಾದಿತ್ಯ ಸಿಂದಿಯಾ ರವರಿಗೂ ಮಾತನಾಡಲಾಗಿದೆ. VISL ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚುವುದಿಲ್ಲ ಎಂಬ ಭರವಸೆ ನೀಡಿದರು.
ಸಿ ಎಂ ಭೇಟಿ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಹೆಚ್ ಜಿ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಸೇರಿದಂತೆ ವಿನಯ್ ಕುಮಾರ್, ಐಸಾಕ್ ಲಿಂಕನ್,ಶಿವನಾಗು,ಅರುಣ್, ನಂಜೇಗೌಡ ಮುಂತಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.