ವಿಜಯಪು/ದೇವರಹಿಪ್ಪರಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಶೀರ್ ಅಹ್ಮದ್ ಬೇಪಾರಿ ಮಾತನಾಡಿ ಬರುವ 2023 ವಿಧಾನಸಭಾ ಚುನಾವಣೆಯಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಸುಮಾರು 9 ಆಕಾಂಕ್ಷಿಗಳು ಈಗಾಗಲೇ ಅರ್ಜಿಯನ್ನು ಸಲ್ಲಿಸಿದರೆ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ನಾಯಕರು ಶೀಘ್ರದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಫೈನಲ್ ಮಾಡಬೇಕು ಮತ್ತು ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ಹಂಚಬೇಕು ಮಾಡಬೇಕು ಒಂದು ವೇಳೆ ಹೊರ ಜಿಲ್ಲೆಯ ಆಕಾಂಕ್ಷಿಗಳಿಗೆ ಟಿಕೆಟ್ ಹಂಚಿದರೆ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸೋಲು ಅನುಭವಿಸುವುದು ಖಚಿತ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ..
ದೇವರಹಿಪ್ಪರಗಿ ಕ್ಷೇತ್ರ ಕಾಂಗ್ರೆಸಿನ ಭದ್ರಕೋಟೆಯಾಗಿದ್ದು ಇಡೀ ರಾಜ್ಯಕ್ಕೆ ಗೊತ್ತು. ಕಳೆದ ಬಾರಿ ಬಿಎಸ್ ಪಾಟೀಲ್ ಯಾಳಗಿ ಅವರಿಗೆ ಚುನಾವಣೆ 15 ದಿನ ಇರುವಾಗ ಟಿಕೆಟ್ ಹಂಚಿರುವುದರಿಂದ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷ ಸಂಘಟನೆ ಕಟ್ಟದೆ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಂಡಿದೆ ಈ ಚುನಾವಣೆಯಲ್ಲಿ ಆದಷ್ಟು ಬೇಗ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ಘೋಷಣೆ ಮಾಡಬೇಕು ಹಾಗೂ ಹೊರ ಜಿಲ್ಲೆ ಆಕಾಂಕ್ಷಿ ಯಾದ ಎಸ್ ಆರ್ ಪಾಟೀಲ ಅವರ ಹೆಸರು ಕೇಳಿ ಬಂದಿರುವುದರಿಂದ,
ಹೊರ ಜಿಲ್ಲೆಯ ಆಕಾಂಕ್ಷಿ ಯಾದ ಎಸ್ಆರ್ ಪಾಟೀಲ್ ಅವರಿಗೆ ಬೇಡ ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ಘೋಷಣೆ ಮಾಡಿ ಎಂದು ನೂತನ ಪಟ್ಟಣ ಪಂಚಾಯಿತಿಯ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ.ಗುರುರಾಜ್ ಗಡೆದ ಅವರು ಕೂಡ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಶೀರ್ ಅಹಮದ್ ಬೇಪಾರಿ, ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಜಾ ನದಾಫ, ಮಹಿಳಾ ಘಟಕ ಅಧ್ಯಕ್ಷರಾದ ಸರಿತಾ ನಾಯಕ್, ಕಾಂಗ್ರೆಸ್ ಮುಖಂಡರಾದ ಕಾಸುಗೌಡ ಪಾಟೀಲ್ ಕುದುರಿಸಾಲೋವಾಡಗಿ, ಡಾ. ಗುರುರಾಜ್ ಗಡೆದ್, ಪ್ರಕಾಶ್ ಮಲಹರಿ, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಖಾದರಬಾಷ ಮೇಲಿನಮನಿ