ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಿಳೆ ಜೀವನದ ದಾರಿದೀಪ:ಹಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಕೆ.ಎಸ್.ಪ್ರಭಾಮಣಿ

ತುಮಕೂರು/ಪಾವಗಡ:ಮಹಿಳೆ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದು,ಇಡೀ ಕುಟುಂಬದ ಏಳಿಗಾಗಿ ಶ್ರಮಿಸುವ ಶ್ರಮಜೀವಿ ಎಂದು ತಾಲ್ಲೂಕು ಹಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಯಾದ ಕೆ.ಎಸ್.ಪ್ರಭಾಮಣಿ ತಿಳಿಸಿದರು.

ಪಾವಗಡ ತಾಲ್ಲೂಕು ವೈ ಎನ್ ಹೊಸಕೋಟೆ ಹೋಬಳಿಯ ವದನಕಲ್ಲು ಗ್ರಾಮದ ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ’ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ’ಶ್ರಮಸಂಸ್ಕೃತಿಯ ಮಹಿಳಾ ಸಾಧಕಿಯರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿತೃಪ್ರಧಾನ ಕುಟುಂಬದಲ್ಲಿ ಮಹಿಳೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದಿಲ್ಲ. ಆದರೆ ಮಹಿಳೆ ಇಲ್ಲದೆ ಕುಟುಂಬ ಸಾಗುವುದಿಲ್ಲ. ಇಡಿ ಕುಟುಂಬದ ಪ್ರಗತಿ ಅಥವಾ ಅವನತಿ ಆಕೆಯನ್ನು ಅವಲಂಬಿಸಿದೆ. ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕಿ ಸಲಹಿ ಪ್ರಯೋಜಕರನ್ನಾಗಿ ಮಾಡುತ್ತಾಳೆ. ಅದರಲ್ಲೂ ಶ್ರಮ ಸಂಸ್ಕೃತಿಯಲ್ಲಿ ಮಹಿಳೆ ಸದಾ ಕಷ್ಟಗಳನ್ನು ಮಡಿಲಲ್ಲಿ ಕಟ್ಟಿಕೊಂಡು ಸಂಸಾರವನ್ನು ಸಾಕಿ ಸಾಧನೆ ಮಾಡಿ ಯಶಸ್ಸುಗಳಿಸುತ್ತಾಳೆ.ಆದರೆ ವಯಸ್ಸಾದ ಮೇಲೆ ಅಕ್ಷರ ಜ್ಞಾನ ಹೊಂದಿರುವ ತನ್ನ ಮಕ್ಕಳು ಮತ್ತು ಸೊಸೆಯರು ಆಕೆಯನ್ನು ಕಡೆಗಣಿಸುವ ಸ್ಥಿತಿ ಇಂದು ಎಲ್ಲಡೆ ಕಾಣುತ್ತಿದೆ. ಇದು ಉತ್ತಮ ಸಂಸ್ಕಾರವಲ್ಲ. ಮಹಿಳೆಯನ್ನು ಮತ್ತು ಮಾತೆಯರನ್ನು ಗೌರವದಿಂದ ಕಾಣಬೇಕು ಮತ್ತು ಇಳಿವಯಸ್ಸಿನಲ್ಲಿ ಉತ್ತಮ ಆರೈಕೆ ಮಾಡಬೇಕು. ಭಾರತದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು ಎಂದರು.

ಕಾರ್ಯಕ್ರಮದ ಆಯೋಜಕರಾದ ಆರ್.ಟಿ.ಓ ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅವಿದ್ಯಾವಂತ ಕುಟುಂಬಗಳ ಸಂಖ್ಯೆ ಹೆಚ್ಚು. ಅಜ್ಞಾನ ಮತ್ತು ಕೆಲವೊಂದು ಒತ್ತಡಗಳ ಪರಿಣಾಮ ಹೆಣ್ಣುಮಕ್ಕಳಿಗೆ ಬೇಗನೆ ವಿವಾಹ ಮಾಡುತ್ತಾರೆ. ಜೀವನ ದುಸ್ಥರವಾಗಿರುವ ಗ್ರಾಮೀಣ ಭಾಗದಲ್ಲಿ ಆಕಸ್ಮಿಕವಾಗಿ ಪತಿಯನ್ನು ಕಳೆದುಕೊಂಡ ಅಬಲ ಮಹಿಳೆಯರು ಬಹಳಷ್ಟು ಕಷ್ಟದ ಜೀವನ ಅನುಭವಿಸುತ್ತಾರೆ. ಆ ಕಷ್ಟಗಳ ಅರಿವು ನನಗಿದೆ. ತಮ್ಮ ಮಕ್ಕಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ದುಡಿಯುತ್ತಾರೆ. ಯಾವುದೇ ಪ್ರತಿಫಲ ಆಪೇಕ್ಷಿಸದೆ ಮಕ್ಕಳನ್ನು ಸದೃಢರನ್ನಾಗಿಸುತ್ತಾರೆ. ಇಂತಹ ಮಾತೆಯರನ್ನು ಹೊಂದಿದ ಮಕ್ಕಳು ಪುಣ್ಯವಂತರ. ಈ ತ್ಯಾಗ ಜೀವಿಗಳನ್ನು ಗೌರವಿಸುವ ಅವಕಾಶ ದೊರೆತಿರುವುದು ನಮ್ಮ ಪುಣ್ಯ ಎಂದರು.
ನಿವೃತ್ತ ಖಜಾನೆ ಅಧಿಕಾರಿ ಎಸ್.ರಮಾಮಣಿ ಕವಿವಾಣಿಗಳ ಮೂಲಕ ಸಮಾಜದಲ್ಲಿ ಮಹಿಳೆ ಮತ್ತು ಮಾತೆಯರ ಪಾತ್ರವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಸುಮಾರು 45 ಜನ ಹಿರಿಯ ಶ್ರಮಿಕ ಮಾತೆಯರನ್ನು ಸನ್ಮಾನಿಸಲಾಯಿತು.

ಮಂಗಳವಾಡದ ವೈದ್ಯಾಧಿಕಾರಿ ಡಾ.ಸುಷ್ಮಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವದನಕಲ್ಲು ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗಮಣಿಜಯರಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಾಗರತ್ನಮ್ಮತಿಪ್ಪೇಸ್ವಾಮಿ, ವಿ.ಎನ್.ಗಾಯಿತ್ರಿದೇವಿ, ಶಿಕ್ಷಕಿಯರಾದ ಲಕ್ಷ್ಮಿದೇವಮ್ಮ, ಕಲ್ಪನ, ಮುಖಂಡರಾದ ನಾಗರತ್ನಮ್ಮತಿಮ್ಮರಾಯಪ್ಪ, ಅಂಬಿಕಾರಮೇಶ್, ಉಮಾನಾಗಭೂಷಣರೆಡ್ಡಿ, ಸುಜಾತ, ಶಿಲ್ಪಾರಮೇಶ್, ಶಕುಂಲಾಬಾಯಿ, ರಂಗಮ್ಮ, ಭದ್ರಮ್ಮ, ಅಕ್ಕಮ್ಮ, ದೇವಸ್ಥಾನ ಸಮಿತಿಯ ಅಧ್ಯಕ್ಷ ವಿ.ಎ.ತಿಮ್ಮಾರೆಡ್ಡಿ, ಕಾರ್ಯದರ್ಶಿ ಮಂಜುನಾಥಶಾಸ್ತ್ರಿ, ಸಣ್ಣಾರೆಡ್ಡಿ, ವೈ.ಎನ್.ಹೊಸಕೋಟೆ ಕಸಾಪ ಅಧ್ಯಕ್ಷ ಹೊ.ಮ.ನಾಗರಾಜು, ನರಸಿಂಹನಾಯಕ, ಆರ್.ಎನ್.ಲಿಂಗಪ್ಪ, ಅಂತರಗಂಗೆ ಶಂಕರಪ್ಪ. ಆರ್.ಟಿ.ಓ ನಾಗರಾಜು, ಶಿವಪ್ಪ, ಮೈಲಪ್ಪ, ಆರ್.ಬಿ.ಗೋಪಾಲ್, ರಾಮಾಂಜಿ, ಇತರರು ಇದ್ದರು.

-ಪೃಥ್ವಿರಾಜ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ