ಯಾದಗಿರಿ: ಶಹಾಪುರ ತಾಲೂಕಿನ ಹಳಿಸಗರದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ.
ಅಂದಿನ ಶರಣರಲ್ಲೆ ನಿಜವಾದ ಶರಣ ಅಂದರೆ ಅಂಬಿಗರ ಚೌಡಯ್ಯನವರು. ವಚನ ಸಾಹಿತ್ಯದಲ್ಲಿ ತಮ್ಮದೇ ಆದ ಶೈಲಿಯಲ್ಲಿ ವಚನಗಳು ಬರೆಯುತ್ತಾ ಜನರ ಮನಸ್ಸಿನ ಮಾತುಗಳಲ್ಲಿ ಮನೆ ಮಾತು ಆದರು ನಿಜವಾದ ಶರಣ ಅಂಬಿಗರ ಚೌಡಯ್ಯ ಎಂದು ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಶಹಾಪುರ ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಮೂರ್ತಿ ಪ್ರತಿಷ್ಠಾಪನೆ ಮಾಡಿದರು.
ಗಂಗಾ ಸಮಾಜ ಶೈಕ್ಷಣಿಕ ಮತ್ತು ಆರ್ಥಿಕವಾಗಿ ರಾಜಕೀಯವಾಗಿ ಬೆಳೆಯಬೇಕಾಗಿದೆ. ಆ ನಿಟ್ಟಿನಲ್ಲಿ ಸಮಾಜ ಸಂಘಟನಾತ್ಮಕವಾಗಿ ಬೆಳೆಸಿ ಕೊಂಡು ಹೋಗಬೇಕು. ಯಾವುದೇ ಸಮಾಜ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಶರಣಬಸಪ್ಪ ಗೌಡ ದರ್ಶನಪುರ ಹೇಳಿದರು.
ಬಿಜೆಪಿಯ ಯುವ ನಾಯಕರಾದ ಅಮೀನರೆಡ್ಡಿ ಯಾಳಗಿ ಮತ್ತು ಡಾ||ಚಂದ್ರಶೇಖರ ಸುಬೇದಾರ್ ಮಾತನಾಡಿದರು. ಡಾ||ಮಲ್ಲಿಕಾರ್ಜುನ ಮುಕ್ಕಾ ನಿಜಶರಣ ಅಂಬಿಗರ ಚೌಡಯ್ಯನವರ ಜೀವನ ಕಥೆ ಕುರಿತು ವಿವರಿಸಿದರು.
ದಿವ್ಯಾ ಸಾನಿಧ್ಯ ವಹಿಸಿದ್ದ ಹಾವೇರಿ ಜಗದ್ಗುರು ಗುರುಗಳಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಾಹಾಸ್ವಾಮಿಗಳು ಆಶೀರ್ವಚನ ನೀಡಿದರು, ಸಿಂದಗಿ ಜಗದ್ಗುರು ಶಾಂತ ಗಂಗಾಧರ ಮಾಹಾಸ್ವಾಮಿಗಳು, ಮಾಹಲರೋಜಾದ ಪರಶುರಾಮ ಮುತ್ಯಾ, ಕನ್ನಕೊಳೂರ ಶಿವು ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಮಾಜಿ ಎಂ.ಎಲ್ಸ್ ತಿಪ್ಪಣ್ಣ ಕಮಕನೂರ . ಬಿಜೆಪಿಯ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಲಲಿತಾ ಅನಪೂರ , ಸಮಾಜದ ಮುಖಂಡರು. ಕಲ್ಯಾಣ ಜಿಲ್ಲಾ ಉಪಾಧ್ಯಕ್ಷರು ಹಣಮಂತ ಮಡ್ಡಿ ಹಳಿಸಗರ ಜನರು ಉಪಸ್ಥಿತರಿದ. ಸಮಾಜದ ತಾಲೂಕು ಅಧ್ಯಕ್ಷರಾದ ಅಯ್ಯಣ್ಣ ಕನ್ನಕೊಳೂರು ಅಧ್ಯಕ್ಷತೆ ವಹಿಸಿದ್ದರು.
ಮರೆಪ್ಪ ದೊಡ್ಮನಿ ಸ್ವಾಗತಿಸಿದರು.ಗೋಪಾಲ ಹಳಿಸಗರ ವಂದಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ