ಸಿಂದಗಿ: ತಾಲೂಕಿನ ಗೋಲಗೇರಿಯಿಂದ ಗುಬ್ಬೇವಾಡ ರಸ್ತೆ ಹಾಗೂ ಗೋಲಗೇರಿ ಬಸ್ ನಿಲ್ದಾಣದಿಂದ ಡಂಬಳ ಬ್ರೀಜ್ ವರೆಗೆ ರಾಜ್ಶ ಹೆದ್ದಾರಿಯ ಸಿಸಿ ರಸ್ತೆ ಕಾಮಗಾರಿಯ ಎರಡು ರಸ್ತೆಯ 432 ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಉಪ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದಕ್ಕಾಗಿ ತಾಲೂಕಿನಲ್ಲಿ ರಸ್ತೆ ದುರಸ್ಥಿ, ರಸ್ತೆ ಡಾಂಬರೀಕರಣ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ.ಈ ಭಾಗದಲ್ಲಿ ಡಂಬಳ – ಕರವಿನಾಳ, ಖಾನಾಪೂರ ತೋಟದ ರಸ್ತೆ,ಢವಳಾರ ರಸ್ತೆ, ಕೊಂಡಗೂಳಿ ರಸ್ತೆ ಸೇರಿದಂತೆ ಗೋಲಗೇರಿಯ ರಾಜ್ಶ ಹೆದ್ದಾರಿಯಲ್ಲಿ ಸಿಸಿ ರಸ್ತೆಗೆ ನಿಮಾ೯ಣಕ್ಕೆ ಚಾಲನೆ ನೀಡಲಾಗಿದೆ ಎಂದರಲ್ಲದೇ, ರೈತರ,ವ್ಶಾಪಾರಸ್ಥರ ಅನುಕೂಲಕ್ಕಾಗಿ ಕಾಮಗಾರಿ ಮಾಡಿಸಿದ್ದೇನೆ ಎಂದರು.
ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ ಮಾತನಾಡಿ, ರೈತಪರ, ಹಿಂದುಳಿದ ಬಡವರ ಪರ ಕೆಲಸ ಮಾಡಿದ ಶಾಸಕ ರಮೇಶ ಭೂಸನೂರ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಮತದಾರರಿಗೆ ಮನವಿ ಮಾಡಿದರು.
ಭಂಡಾರಿದೇವಿ ಶಕ್ತಿಪೀಠದ ಮುನೀಂದ್ರದೇವ ಶ್ರೀಗಳು ಸಾನ್ನಿಧ್ಶವಹಿಸಿದ್ದರು. ಈ ವೇಳೆ ಪ್ರಭುಗೌಡ ಪಾಟೀಲ, ಗ್ರಾಪಂ ಅಧ್ಶಕ್ಷ ಸುನೀಲಗೌಡ ಪಾಟೀಲ, ಮಾಜಿ ತಾಪಂ ಸದಸ್ಶ ಶ್ರೀಶೈಲ್ ಚಳ್ಳಗಿ, ಗೌಡಣ್ಣ ಆಲಮೇಲ, ಶಿವಣ್ಣ ನಾಗಣಸೂರ, ಸೈಪುನ ಕೋರವಾರ, ಸಂತೋಷ ಮಣಗೀರಿ, ಮಾಂತೇಶ ಸಾತಿಹಾಳ, ಮಲ್ಲನಗೌಡ ಪಾಟೀಲ, ಶಾಂತಯ್ಶ ಹಿರೇಮಠ, ಸಲಿಂ ಮುಲ್ಲಾ,ಗೌತಮ್ ಮೇಟಿ, ಯುಕೆಪಿ ಎಇಇ ರಾಜಪ್ಪ, ಪಿಡ್ಲ್ಶುಡಿ ಎಇಇ ತಾರಾನಾಥ ರಾಠೋಡ, ಕಾಮಣ್ಣ ನಾಯ್ಕೋಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ ಖಾದರಬಾಷ ಮೇಲಿನಮನಿ