ಖಾಲಿ ನೀಲಿ ಆಗಸದಂತ ವದನದ ನಡುವಲ್ಲಿ
ಬೊಟ್ಟೊಂದು ಇರಬೇಕಿತ್ತು
ಕಣ್ಣುಗಳೆರೆಡು ಆ ಆಗಸವ
ನೋಡಬೇಕಿತ್ತು
ಬೊಟ್ಟು ತೊಟ್ಟ ಅಂದವ ನೋಡಲು ಮೇಘರಾಜನ ಆಗಮನವಿರಬೇಕಿತ್ತು
ಬಂದ ಮೇಘರಾಜ ವಾಪಾಸಾಗಬಾರದಿತ್ತು
ಆಗ ಅನ್ನದಾತನ ಮೊಗದಲ್ಲಿ ನಗುವು ಮೂಡುತಿತ್ತು
ಹಸಿದವರ ಹೊಟ್ಟೆಗೆ ಅನ್ನ ದಕ್ಕುತಿತ್ತು
ಬೊಟ್ಟಿಲ್ಲದೆ ಬರಿದಾದ ಆ ಆಗಸ
ಯಾವುದರ ನಿರೀಕ್ಷೆಯಲ್ಲಿತ್ತು?
ಕೇಳಬಾರದಿತ್ತು ಆದರೆ
ಮನದೊಳಗೆ ಹೊಯ್ದಾಡುತಿದ್ದ ಭಾವನೆಯೇ
ಈ ರೂಪದಿ ಹೊರಬರಲು ಹವಣಿಸಿದಾಗ ಅದನು ಹೊರಹಾಕಲೇಬೇಕಿತ್ತು
ಆ ಬೊಟ್ಟು ಕಾಣದಿರುವಾಗ ಹೀಗೊಂದು ಕವನ ಹೊರಬಿತ್ತು.
-ಬಸವರಾಜ ಬಳಿಗಾರ
One Response
Super chanal