ಯಾದಗಿರಿ:ಜಿಲ್ಲೆಯ ಶಹಾಪುರ ತಾಲೂಕಿನಿಂದ ಸುಮಾರು 34 ಕಿ.ಮೀ.ದೂರದಲ್ಲಿರುವ ಆಲ್ದಾಳ ಗ್ರಾಮದಲ್ಲಿರುವ ಕಲ್ಯಾಣಿ ಬಾವಿಯು ಸುರಪುರ ರಾಜ ವೆಂಕಟಪ್ಪ ನಾಯಕನ ಕಾಲದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೈನ್ಯವನ್ನು ಇರಿಸಲು ನಿರ್ಮಿಸಲಾದ ವನದುರ್ಗ ಕೋಟೆ .ಈ ಕೋಟೆಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಅತಿ ಹೆಚ್ಚು ಜಲಸಂಪನ್ಮೂಲ ಹೊಂದಿರುವ ಪ್ರದೇಶ ಇಲ್ಲಿ ಹೆಚ್ಚು ನೀರಿನ ಸಂಪತ್ತು ಇರುವುದರಿಂದ ಹಾಗೂ ಹಳ್ಳಿ ಮರಗಳು ಹೆಚ್ಚಾಗಿರುವುದು. ಹಾಲಿನಂತಿರುವ ಹಳ್ಳ+ ಹಳ್ಳಿ ಮರ= ಆಲದ ಹಳ್ಳ ಎಂದು ಹೆಸರು ಬಂದಿದೆ. ಈಗ ಆಲ್ದಾಳ ಎಂದು ಪ್ರಸ್ತುತವಾಗಿ ಕರೆಯುತ್ತಾರೆ. ವನದುರ್ಗ ಕೋಟೆಯನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲಿ ನೀರು ತರಲು ಈ ಗ್ರಾಮಕ್ಕೆ ಸೈನಿಕರು ಬರುತ್ತಿದ್ದರು. ನೀರಿನ ಸಂಪತ್ತು ಹೆಚ್ಚಾಗಿ ಇರುವುದರಿಂದ ಕುದುರೆ,ಆನೆ, ಒಂಟಿ ಮಾವುತರು ಇಲ್ಲಿಯೇ ವಾಸವಾಗಿದ್ದರು. ಸಂಪೂರ್ಣ ಸುತ್ತಲೂ ನೀರಿನಿಂದ ಆವೃತವಾದಂತಹ ಆಲ್ದಾಳ ಹಳ್ಳಕ್ಕೆ ಒಂದು ಸಮಯದಲ್ಲಿ ನೀರು ಬತ್ತಿ ಹೋಗುತ್ತದೆ ಸುತ್ತಲೂ ಬರಗಾಲ ಕ್ಷಾಮ ಆವರಿಸಿ ಕುಡಿಯಕ್ಕೆ ನೀರು ಸಿಗದಂತಾಗುತ್ತದೆ. ಈ ಗ್ರಾಮದ ಆಂಜನೇಯ ಏಕಶಿಲಾ ಮೂರ್ತಿಯ ಹಿಂಬದಿಯಲ್ಲಿ ಬೇಡ ಜನಾಂಗರು ವಾಸವಾಗಿದ್ದರು. ಈ ಜನಾಂಗವು ಆಂಜನೇಯ ಪರಮ ಭಕ್ತರಾಗಿದ್ದರು. ನೀರು ಇಲ್ಲದ ಸಮಯದಲ್ಲಿ ಆಂಜನೇಯ ಮೂರ್ತಿಯ ಹಿಂಬದಿಯಲ್ಲಿ ದೇವರ ಹೆಸರಲ್ಲಿ ಬಾವಿಯನ್ನು ತೋಡುತ್ತಾರೆ. ನೀರಿನ ಸಂಪತ್ತು ನೀರಿನ ಜಲಿ ದೊರೆಯುತ್ತದೆ. ಆಲ್ದಾಳ ಗ್ರಾಮದ ಹಳ್ಳಕ್ಕೆ ಮರು ಜೀವ ಕಳೆ ತುಂಬಿ ಬಂತು ಈ ಬಾವಿ ಪ್ರಸ್ತುತ ದೇವರ ಬಾವಿ ಎಂದು ಮಾರ್ಪಟ್ಟಿತ್ತು. ಇಡೀ ಊರಿನ ಜನರು ಈ ನೀರನ್ನು ಅಮೃತಕ್ಕೆ ಹೋಲಿಸುತ್ತಾರೆ. ನೀರು ಅಷ್ಟೂ ತಿಳಿಯಾಗಿ ಇದ ಕಾರಣ ಈ ಪುರಾತನ ಬಾವಿ ದೇವರ ಕಲ್ಯಾಣಿ ಬಾವಿ ಎಂದು ಕರೆದರು. ಊರಿನ ಗ್ರಾಮಸ್ಥರು ದಾಹವನ್ನು ತೀರಿಸುವ ಜೊತೆಗೆ ಗ್ರಾಮಸ್ಥರ ದೇಹದಲ್ಲಿ ಇರುವ ಪೀಡಾ ಪಿಸಾಸಿ ಕಾಟ ಇದ್ದರೆ. ಈ ಬಾವಿಗೆ ಕರೆತಂದು ಅವರ ಬಿಂಬವನ್ನು ತೋರಿಸಿದರೆ ಸಾಕು ಆ ಪೀಡೆ ಪಿಶಾಚಿಗಳು ಓಡಿ ಹೋಗುತ್ತಿದ್ದವು. ಇಂತಹ ಅದ್ಭುತ ಶಕ್ತಿ ಬಾವಿ ಹೊಂದಿತು. ನೀರಿನ ಮರುಜೀವ ಕೊಟ್ಟಿರುವ ಕಾರಣಕ್ಕಾಗಿ ಆಂಜನೇಯ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು. ಪ್ರತಿ ವರ್ಷವೂ ನಡೆಯುವ ಮೊಹರಂ ಹಾಗೂ ಇತರೆ ಊರಿನ ಜಾತ್ರೆ ಹಾಗೂ ವಿಶೇಷ ಸಂದರ್ಭಗಳಲ್ಲಿ ನಡೆಯುವ ದೇವರ ಗಂಗ ಸ್ನಾನಕ್ಕೆ ಎಂದೇ ಹೆಸರು ವಾಸಿಯಾಗಿದೆ. ಬಾವಿ ಈ ಪ್ರದೇಶಕ್ಕೆ ನೀರಾವರಿ ಬಂದ ನಂತರ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಬೋರ್ವೆಲ್ ಹಾಗೂ ಇನ್ನಿತರೆ ಜಲ ಮೂಲಗಳನ್ನು ಕಂಡುಕೊಂಡ ನಂತರ ಈಗ ಬಾವಿಯನ್ನು ಜನರು ಮರೆತು ಬಿಟ್ಟಿದ್ದಾರೆ. ಆದರೆ ರಾಜ್ಯ ಸರ್ಕಾರ ಬಾವಿಗಳಿಗೆ ಬಂದ ಅನುದಾನವನ್ನು ಗ್ರಾಮಸ್ಥರಿಗೆ ಅನುಕೂಲ ಆಗುವಂತೆ ಮಾಡಬೇಕು. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಾವಿಗಳು ಬತ್ತಿ ಹೋಗುತ್ತಿವೆ.
ಇನ್ನಾದರೂ ಜಿಲ್ಲಾ ಪಂಚಾಯಿತಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಆಲ್ದಾಳ ಗ್ರಾಮದ ಕಲ್ಯಾಣ ಬಾವಿ ನೀರು ದಿನನಿತ್ಯ ಬಳಕೆಯಾಗುವಂತೆ. ಪಂಚಾಯಿತಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಆಲ್ದಾಳ ಗ್ರಾಮಸ್ಥರ ಮನವಿ.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ