ಮಸ್ಕಿ ತಾಲೂಕಿನ ಹೊಗರನಾಳ ಗ್ರಾಮದಲ್ಲಿ ಇಂದು ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮಾಂಬೆ ಮತ್ತು ಶ್ರೀ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಶ್ರೀ ಮ.ನಿ.ಪ್ರ.ಜಗದ್ಗುರು ಲಿಂಗೈಕ್ಯ ಶಾಂತವೀರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ ಇವರ ದಿವ್ಯ ಪ್ರಕಾಶನದಲ್ಲಿ,ಮ.ನಿ.ಪ್ರ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ ಇವರ ಅಪ್ಪಣೆ ಮೇರೆಗೆ “ಶರಣಜೀವನ ದರ್ಶನ ಪ್ರವಚನ” ಶ್ರೀ ಮ.ನಿ.ಪ್ರ.ಜಗದ್ಗುರು ಲಿಂಗೈಕ್ಯ ಶಿವ ಶಾಂತವೀರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ಕೊಪ್ಪಳ ಇವರ ಪುಣ್ಯ ಸ್ಮರಣೋತ್ಸವ ಮತ್ತು ಉತ್ಸವ, ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮಾಂಬೆ ಮತ್ತು ಶ್ರೀ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಕಾರ್ಯಕ್ರಮ ರವಿವಾರ ನೆರವೇರಿತು.ಬೆಳಗ್ಗೆ ಶ್ರೀ ಮಲ್ಲಿಕಾರ್ಜುನ ದೇವರಿಗೆ ಅಭಿಷೇಕ,ಕುಂಭೋತ್ಸವ ಭೂರಿ ಗಣಾರಾಧನೆ ಮಾಡಲಾಯಿತು. ನಂತರ ಕಲ್ಮಂಗಿ ಹಾಗೂ ಗುಡಿಹಾಳ ಸದ್ಭಕ್ತರಿಂದ ಬಂದಿರುವ ಉತ್ಸವ ಮೂರ್ತಿ ಹಾಗೂ ಕಳಸಕ್ಕೆ ಭವ್ಯ ಸ್ವಾಗತ ಕೋರಲಾಯಿತು.ಶ್ರೀಮತಿ ಚಂದ್ರಕಲಾ ಬಿ,ಡಂಬಳ ಸಾ.ಕೊಪ್ಪಳ ಇವರ ಸೇವಾದ್ಯಕ್ಷತೆಯಲ್ಲಿ ಸಮಸ್ತ ಮಾತೆಯರಿಂದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮಾಂಬೆ ರಥೋತ್ಸವ ಅದ್ದೂರಿಯಾಗಿ ನೆರವೇರಿತು.ನಂತರ ಶ್ರೀ ಮ.ನಿ.ಪ್ರ.ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಆರ್ಶೀವಚನ ನೆರವೇರಿತು ಹನ್ನೊಂದು ದಿನಗಳ ಕಾಲ ವಿವಿಧ ಕಲಾವಿದರು ಹಾಗೂ ಸ್ಥಳೀಯ ಕಲಾವಿದರಿಂದ ಪ್ರವಚನ ಕಾರ್ಯಕ್ರಮ ನಿರಂತರವಾಗಿ ನಡೆಯಿತು ಹಾಗೂ ವಿವಿಧ ಭಕ್ತರಿಂದ ಮಹಾಪ್ರಸಾದ ನಿರಂತರವಾಗಿ ನೆರವೇರಿತು.
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ.ಮ.ನಿ.ಪ್ರ.ಗವಿಸಿದ್ದೇಶ್ವರ ಮಹಾಸ್ವಾಮಿಗಳ ಗವಿಮಠ ಕೊಪ್ಪಳ ಅವರು ವಹಿಸಿದ್ದರು. ಶ್ರೀ ಪ.ಪೂ.ಚನ್ನಬಸಯ್ಯ ಸ್ವಾಮಿಗಳು ಸಾ.ಹೊಗರನಾಳ ಹಾಗೂ ಶ್ರೀ ಪ.ಪೂ.ಅಮರಯ್ಯ ಸ್ವಾಮಿಗಳು ಸಾ.ಹೊಗರನಾಳ ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ತುರವಿಹಾಳ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ ಇನ್ನೂ ಹಲವಾರು ಗಣ್ಯವ್ಯಕ್ತಿಗಳು ಮತ್ತು ಬಾಪೂಜಿ ಯುವಕ ಸಂಘ ಹೊಗರನಾಳ ಹಾಗೂ ಹೊಗರನಾಳ ಗ್ರಾಮ ಮತ್ತು ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು.