ಹನೂರು:ಪಟ್ಟಣ ಪಂಚಾಯತಿಯ ನಿರ್ಲಕ್ಷದಿಂದ ಎಂಟನೇ ಹಾಗೂ ಒಂಬತ್ತನೇ ವಾರ್ಡ್ ನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ,ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ವಿಪರೀತವಾಗಿದೆ. ಜನರಿಗೆ ಕುಡಿಯಲು ಹಾಗು ತೊಳೆಯಲು ನೀರಿಲ್ಲ, ಜನಪ್ರತಿನಿಧಿಗಳು ಸಮಸ್ಯೆಗಳನ್ನು ಆಲಿಸುತ್ತಿಲ್ಲ ಹಾಗೂ ಪಂಚಾಯತಿಯ ಅಧಿಕಾರಿಗಳ ನಿರ್ಲಕ್ಷದಿಂದ ಈ ಸಮಸ್ಯೆ ತಲೆದೂರಿದೆ ಎಂದು ತಿಳಿದು ಬಂದಿದೆ.
ಕಾವೇರಿ ನೀರು ಹಾಗೂ ಬೋರ್ ನೀರಿನ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಇಲ್ಲ, ಇತ್ತೀಚಿಗೆ ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ಉಂಟಾಗಿದ್ದು ಯಾವೊಬ್ಬ ಅಧಿಕಾರಿಯು ಇದರ ಬಗ್ಗೆ ಸ್ಪಂದಿಸುತ್ತಿರುವುದು ಶೋಚನೀಯವಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ನೀರಿನ ಅವಶ್ಯಕತೆ ತುಂಬಾ ಇದೆ, ಎಂಬುವುದು ನಮ್ಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಯದಿರುವುದು ನಮ್ಮ ದುಸ್ಥಿತಿಯಾಗಿದೆ.
ಹನೂರು ಪಟ್ಟಣದ 8ನೇ ಹಾಗೂ ಒಂಬತ್ತನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಕೇಳಿದರೆ ಮೋಟರ್ ರಿಪೇರಿ ಎಂಬ ಸಬುಬನ್ನು ಹೇಳುತ್ತಿದ್ದು ಒಂದು ಮೋಟರ್ ರಿಪೇರಿ ಮಾಡಲು ಒಂದು ವಾರದ ಸಮಯ ಬೇಕಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷದಿಂದ ಜನರು ನೀರಿಲ್ಲದೆ ಪರದಾಡುವ ಉಂಟಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನ ಈ ರೀತಿ ಮಾಡಿದರೆ ಇನ್ನು ಬೇಸಿಗೆ ಬಂದಾಗ ನೀರಿನ ಸಮಸ್ಯೆ ಯಾವ ರೀತಿ ಉದ್ಭವವಾಗುತ್ತದೆ ಎಂಬುದನ್ನು ನೋಡಬೇಕು.ಮಹಿಳೆಯರು ಪಂಚಾಯತಿ ಅಧಿಕಾರಿಗಳಿಗೆ ಇಡೀ ಶಾಪವನ್ನು ಹಾಕುತ್ತಿದ್ದು, ಇನ್ನು ಮುಂದಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದರ ಬಗ್ಗೆ ಜಾಗೃತವಹಿಸಿ ಮುಂದಿನ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ವರದಿ:ಉಸ್ಮಾನ್ ಖಾನ್