ರಾಯಚೂರು:ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಇಂದು ಮಸ್ಕಿ ತಾಲೂಕಿನ ಸುಕ್ಷೇತ್ರ ಬಳಗಾನೂರ ಶ್ರೀ ಮ.ನಿ.ಪ್ರ. ಸಿದ್ಧಬಸವ ಮಹಾಸ್ವಾಮಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಸುಕ್ಷೆತ್ರ ಬಳಗಾನೂರ ಶ್ರೀ ಮ.ನಿ.ಪ್ರ. ಸಿದ್ದಬಸವ ಮಹಾಸ್ವಾಮಿಗಳು ಪ್ರಕೃತಿಯ ಮಡಿಲಲ್ಲಿ ಜನಿಸಿರುವ ಪ್ರತಿಯೊಬ್ಬರೂ ವೃಕ್ಷಮಾತೆ ಆರಾಧನೆಯಲ್ಲಿ ತೊಡಗಬೇಕು ಇಂತಹ ವೃಕ್ಷಮಾತೆಯ ಆರಾಧನೆಯಲ್ಲಿ ಪ್ರತಿನಿತ್ಯ ತೊಡಗಿರುವ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ಶ್ಲಾಘನೀಯ. ಒಂದು ಕಡಿದು ಹಾಕಿದ ಆಲದ ಮರವನ್ನು ತಂದು ಮರುಜನ್ಮ ನೀಡಿ ಅದಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಇನ್ನಿತರ ಪೂಜ್ಯರ ಆರ್ಶೀವಾದದಿಂದ ಅಮರ ಶ್ರೀ ಎಂದು ನಾಮಕರಣ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ವಿವಿಧ ರಾಜ್ಯಗಳಿಂದ ಪರಿಸರ ಪ್ರೇಮಿಗಳು ಆಗಮಿಸಿ ವೀಕ್ಷಣೆ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ.ಇಂತಹ ಪ್ರಕೃತಿಯ ಆರಾಧನೆಯಲ್ಲಿ ತೊಡಗಿರುವ ವನಸಿರಿ ತಂಡಕ್ಕೆ ಶುಭವಾಗಲಿ ಎಂದು ಆರೈಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಅಮರೇಗೌಡ ಮಲ್ಲಾಪೂರ,ಚಿಕಲಪರ್ವಿ ಗಿರಿರಾಜ ಪೂಜಾರಿ,ರಂಜಾನ್ ಸಾಬ್,ಗಿರಿಸ್ವಾಮಿ ಹಡಗಿನಾಳ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ ಇನ್ನಿತರರು ಉಪಸ್ಥಿತರಿದ್ದರು.