ಶಿವಮೊಗ್ಗ:ಹೀಗೊಬ್ಬ ವಕೀಲರು ಇದೀಗ ಚುನಾವಣಾ ಹೊಸ್ತಿಲಲ್ಲಿ ಮುಂದೆ ಬಂದಿದ್ದು, ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ “ಚಂದ್ರಕಾಂತ್ ಪಾಟೀಲ್” ಹೆಸರೂ ಕೇಳಿ ಬರುತ್ತಿದೆ. ವೃತ್ತಿಯಲ್ಲಿ ವಕೀಲರಾಗಿದ್ದರೂ ಕೃಷಿ ಮೂಲಕ ಭೂತಾಯಿಯ ಸೇವೆ ಮಾಡುತ್ತಿದ್ದಾರೆ.ಅಲ್ಲದೇ ಅಲ್ಲಲ್ಲಿ ಕ್ಷೇತ್ರದಲ್ಲಿ ಸದ್ದಿಲ್ಲದೇ ಸಮಾಜಸೇವೆ ಜನಪರ ಧ್ವನಿಯೂ ಆಗಿದ್ದಾರೆ.
ಲಿಂಗಾಯತ ಸಮುದಾಯದ ಚಂದ್ರಕಾಂತ್ ಪಾಟೀಲ್ ಎಲ್ಲರೊಳಗೊಂದಾಗುವ ಎಲ್ಲಾ ಸಮುದಾಯಗಳೊಂದಿಗೆ ಬೆಸೆಯುವ ಜನಸ್ನೇಹಿ ಗುಣವನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ರಾಜಕೀಯವಾಗಿ ಧುಮುಕಬೇಕು.ಕೈಪಕ್ಷದ ಬಲ ಪಡಿಸಬೇಕು.ಶಿಕಾರಿಪುರ ಕ್ಷೇತ್ರಕ್ಕೆ ಜನಧ್ವನಿಯಾಗಬೇಕು, ಹೊಸಬದಲಾವಣೆಗಳನ್ನು ತರಬೇಕೆಂದು ಚಂದ್ರಕಾಂತ್ ಪಾಟೀಲ್ ಉತ್ಸುಕರಾಗಿದ್ದಾರೆ.ಯುವ ಸಮುದಾಯವನ್ನು ಪ್ರತಿನಿಧಿಸುವ ಚಂದ್ರಕಾಂತ್ ಪಾಟೀಲ್‌ಗೆ ಹಿರಿಯಕಿರಿಯರ ಮೇಲೂ ಗೌರವ ಪ್ರೀತಿ ಇದೆ ಎಲ್ಲರನ್ನೂ ಸಮಾನ ಮನಸ್ಕರಾಗಿ ಕಾಣುತ್ತಾರೆಂದರೆ ಬಹುಶಃ ಅತಿಶಯೋಕ್ತಿಯಾಗಲಾರದು.
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯ ಟಾಪ್ 3 ರಲ್ಲಿ ಚಂದ್ರಕಾಂತ್ ಪಾಟೀಲ್ ಹೆಸರು
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಟಾಪ್ 3 ರಲ್ಲಿ ಚಂದ್ರಕಾಂತ್ ಪಾಟೀಲ್ ಇವರ ಹೆಸರೂ ಕೇಳಿ ಬರುತ್ತಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುತ್ತಾರೆನ್ನುವ ಮಾತನ್ನು ತೆಗೆದುಹಾಕುವ ಯಾವುದಕ್ಕೂ ಹಿಂದೇಟು ಹಾಕದೇ ಧೈರ್ಯವಾಗಿ ಚುನಾವಣೆಯನ್ನು ಎದುರಿಸುತ್ತೇನೆ ಎನ್ನುವ ದಿಟ್ಟತನ ಚಂದ್ರಕಾಂತ್‌ಪಾಟೀಲ್‌ರವದ್ದಾಗಿದೆ.
ಹಿನ್ನೆಲೆ:
ಚಂದ್ರಕಾಂತ್ ಪಾಟೀಲರ ಹಿನ್ನಲೆಯನ್ನು ನೋಡುವುದಾದರೆ, ಇವರ ಕುಟುಂಬವೂ ಕಾಂಗ್ರೆಸ್ ಹಿನ್ನಲೆಯುಳ್ಳ ಪಕ್ಷ.ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ಚಂದ್ರಕಾಂತ್ ಪಾಟೀಲ್, ಅವರ ತಂದೆ-ತಾಯಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯಲ್ಲಿ ಸೇರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ ನಂತರ ರಕ್ತದಲ್ಲೇ ಹೋರಾಟ ಹಾಗು ನ್ಯಾಯದ ಮನೋಭಾವದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಚಿಕ್ಕಂದಿನಿಂದ ಸಮಾಜ ಸೇವೆ ಮಾಡುತ್ತಿದ್ದಾರೆ .
ತಂದೆ ಮತ್ತು ತಾಯಿ ಇಬ್ಬರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ಶಿಕಾರಿಪುರ ಪುರಸಭೆಯ ಮಾಜಿ ಅಧ್ಯಕ್ಷರಾಗಿ ಮತ್ತು 1997 ರಿಂದ 2004 ರ ವರೆಗೆ “ಶಿವ ಸಹಕಾರಿ ಬ್ಯಾಂಕ್ ನ ಸಂಸ್ಥಾಪಕ ನಿರ್ದೇಶಕರಾಗಿ, ಬಸವಾಶ್ರಮದ’ ನಿರ್ದೇಶಕರಾಗಿ, ಸತ್ಯಕ್ಕ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಾತೆಯ ಮಡಿಲು ಕೇಂದ್ರದ ಅಧ್ಯಕ್ಷರಾಗಿ, ಕದಳಿ, ವೇದಿಯ” ಅಧ್ಯಕ್ಷರಾಗಿ, “ತಾಲೂಕು: ಶರಣ ಸಾಹಿತ್ಯ ಪರಿಷತ್ವ’ ಉಪಾಧ್ಯಕ್ಷರಾಗಿ, ತಾಲೂಕು “ಕನ್ನಡ ಸಾಹಿತ್ಯ ಪರಿಷತ್ನ’ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ .
ತಂದೆಯವರು ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು ಶ್ರೀ ಕಾನೂರು ವೀರಶೈವ ಸಮಾಜ, ಶಿಕಾರಿಪುರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ರಾಜಕೀಯ:
1997 ರಿಂದ ನಡೆದ ಎಲ್ಲಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಿಕಾರಿಪುರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಬಿ. ಏನ್. ಮಹಾಲಿಂಗಪ್ಪ, ಕೆ. ಶೇಖರಪ್ಪ, ಎಸ್. ಬಂಗಾರಪ್ಪ, ಎಚ್.ಎಸ್. ಶಾಂತವೀರಪ್ಪ ಗೌಡ, ಮತ್ತು ಗೋಣಿ ಮಾಲತೇಶ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ.ಅದೇ ರೀತಿ ಶಿವಮೊಗ್ಗ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್.ಬಂಗಾರಪ್ಪ, ಆಯನೂರು ಮಂಜುನಾಥ್ (ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾಗ ಮಂಜುನಾಥ ಭಂಡಾರಿ ಮತ್ತು ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ.
ಇನ್ನು ಚಂದ್ರಕಾಂತ್ ಪಾಟೀಲರ ತಾಯಿ 1996 ರಿಂದ 2001 ರ ಅವಧಿಯಲ್ಲಿ ಶಿಕಾರಿಪುರ ಪುರಸಭೆಯ ಸದಸ್ಯರಾಗಿ ಮತ್ತು 1996 ರಿಂದ 1998 ರವರೆಗೆ ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 1996 ಮತ್ತು 1997 ರ ಅವಧಿಯಲ್ಲಿ ಶಿಕಾರಿಪುರದ “ಶಿವ ಸಹಕಾರಿ ಬ್ಯಾಂಕ್’ ಸಂಸ್ಥಾಪಕ ನಿರ್ದೇಶಕರಾಗಿ ಶಿಕಾರಿಪುರ ತಾಲೂಕಿನ ಹಳ್ಳಿ ಹಳ್ಳಿ ಗಳಿಗೆ ಓಡಾಡಿ ಬ್ಯಾಂಕನ್ನು ಸ್ಥಾಪಿಸುವಲ್ಲಿ ಮತ್ತು ಮತ್ತು ಬ್ಯಾಂಕ್ ಏಳಿಗೆಗೆ ಶ್ರಮವಹಿಸಿದ್ದಾರೆ.
1999 ರಿಂದ 2009 ದ ಅವಧಿಗೆ ಶಿಕಾರಿಪುರ ಶರಣ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಶಿಕಾರಿಪುರದ ಶಿವ ಶರಣೆ ಸತ್ಯಕ್ಕ ಮಹಿಳಾ ಗೃಹ ಕೈಗಾರಿಕಾ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಶಿಕಾರಿಪುರ ತಾಲೂಕು ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ಹಾಗು 2002 ರಿಂದ 2007 ರ ಅವಧಿಯಲ್ಲಿ ಶಿಕಾರಿಪುರ ಬಸವಾಶ್ರಮದ (ಅನಾಥಾಶ್ರಮ) ದ ಸಂಸ್ಥಾಪಕ ನಿರ್ದೇಶಕರಾಗಿ ಹಾಗು ಶಿಕಾರಿಪುರ ತಾಲೂಕು ಮಾತೆಯ ಮಡಿಲು ಕೇಂದ್ರದ ಸಂಸ್ಥಾಪಕ ನಿರ್ದೇಶಕರಾಗಿ, ಶಿಕಾರಿಪುರ ತಾಲೂಕು ಕದಳಿ ಮಹಿಳಾ ವೇದಿಕೆಯ ನಿರ್ದೇಶಕರಾಗಿ, ಶಿಕಾರಿಪುರ ತಾಲೂಕಿನ ಮುಂಚೂಣಿ ಮಹಿಳಾ ನಾಯಕಿಯಾಗಿ ಸಭೆ ಮತ್ತು ಸಮಾರಂಭಗಳಿಗೆ ಆಹ್ವಾನಿತರಾಗಿ ತಾಲೂಕಿನ ಜನರಿಗೆ ಚಿರ ಪರಿಚಿತರಾಗಿ ಮಹಿಳೆ ಮತ್ತು ಮಕ್ಕಳು, ಹಾಗು ದುಃಖಿತ ಮತ್ತು ಶೋಷಿತ ಮತ್ತು ಹಿಂದುಳಿದ ವರ್ಗಗಳ ಪರವಾಗಿ, ಸದಾ ಹೋರಾಟ ಮಾಡುತ್ತಾ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಮನದಲ್ಲಿ ಬೆರೆತಿದ್ದಾರೆ. ಸಹೋದರ ಶ್ರೀಕಾಂತ ಪಾಟೀಲರು ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತು ಕಾನೂನು ವಿಷಯದಲ್ಲಿ ಪದವೀಧರರಾಗಿದ್ದು, ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸದಾ ಹೋರಾಟ ಮಾಡುತ್ತಾ, ಸಾಮಾಜಿಕ ಕಾರ್ಯಗಳನ್ನು ಮಾಡುವ ಕುಟುಂಬ
ಚಂದ್ರಕಾಂತ್ ಪಾಟೀಲರ ತಂದೆ ನಿಜಲಿಂಗಪ್ಪ ಗೌಡ ಕ. ಜಿ. ಇವರು ಶಿಕಾರಿಪುರ ಪಟ್ಟಣದ ‘ಶಿವ ಸಹಕಾರಿ ಬ್ಯಾಂಕ್ (ನಿ) ನ ನಿರ್ದೇಶಕರಾಗಿ, ಮತ್ತು ಅಧ್ಯಕ್ಷರಾಗಿ ಹಾಗು ಶಿಕಾರಿಪುರ ಪಟ್ಟಣದ ಪ್ರತಿಷ್ಠಿತ ‘ಶ್ರೀ ಕಾನೂರು, ವೀರಶೈವ ಸಮಾಜದ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಶಿಕಾರಿಪುರ ತಾಲೂಕಿನ ಮುಂಚೂಣಿ ನಾಯಕರಾಗಿ ಸಭೆ ಮತ್ತು ಸಮಾರಂಭಗಳಿಗೆ ಆಹ್ವಾನಿತರಾಗಿ ತಾಲೂಕಿನ ಜನರಿಗೆ ಚಿರ ಪರಿಚಿತರಾಗಿ ಮಹಿಳೆ ಮತ್ತು ಮಕ್ಕಳು, ಹಾಗು ದುಃಖಿತ ಮತ್ತು ಶೋಷಿತ ಮತ್ತು ಹಿಂದುಳಿದ ವರ್ಗಗಳ ಪರವಾಗಿ, ಸದಾ ಹೋರಾಟ ಮಾಡುತ್ತಾ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಮನದಲ್ಲಿ ಬೆರೆತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.