ಇಂಡಿ:ಜೈಹನುಮಾನ ದೇವಾಲಯದ ಜೀರ್ಣೋದ್ಧಾರ ಹಾಗೂ ಶ್ರೀ ಕೇದಾರಲಿಂಗ ದೇವರ ಪಲ್ಲಕ್ಕಿ ಉತ್ಸವದ ಯುಗಾದಿ ಹಬ್ಬದ ನಿಮಿತ್ಯಕವಾಗಿ ಶ್ರೀಶರಣ ಬಸವೇಶ್ವರ ಮಹಿಮೆ ಎಂದ ಭಕ್ತಿಪ್ರಧಾನ ಪೌರಾಣಿಕ ನಾಟಕದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ಪೌರಾಣಿಕ ನಾಟಕದ ಪ್ರದರ್ಶನಗಳು ಇಂದಿನ ಆಧುನಿಕ ಯುಗದಲ್ಲಿ ಕಡಿಮೆಯಾಗುತ್ತಿದ್ದು,ಇಂತಹ ಸಂದರ್ಭದಲ್ಲಿ ಮಾರ್ಸ್ನಹಳ್ಳಿ ಗ್ರಾಮದ ಪ್ರಜ್ಞಾವಂತ ನಾಗರಿಕರು ಭಕ್ತಿ ಪ್ರಧಾನ ನಾಟಕವನ್ನು ಊರಿನ ಯುವಕರು ಕಲಿತು ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ವಾಸ್ಥ್ಯ ಸಾಜದ ನಿರ್ಮಾಣಕ್ಕೆ ಪಾತ್ರರಾಗಿದ್ದು ಶ್ಲಾಘನೀಯ.ಗಾಂಧೀಜಿಯವರು ಕೂಡಾ ಸತ್ಯಹರಿಶ್ಚಂದ್ರ ನಾಟಕದ ಮುಖಾಂತರ ಆತ್ಮಸಾಕ್ಷಾತಾರ ಮಾಡಿಕೊಂಡದ್ದು ಇತಿಹಾಸ ಎಂಬುವುದು ಪ್ರತಿಯೊಬ್ಬರೂ ಅರಿತು ನಡೆಯಬೇಕು ಎಂದು ಮಾತನಾಡಿದರು ವೇದಿಕೆಯಲ್ಲಿ ಬಿಜೆಪಿಯ ಮುಖಂಡರಾದ ಕಾಸುಗೌಡ ಬಿರಾದಾರ ಮಾತನಾಡಿ ಗ್ರಾಮದ ಯುವಕರು ಹಾಗೂ ನೌಕರರು ಕೂಡಿಕೋಂಡು ಜೈಹನುಮಾನ ದೇವರ ಜಿರ್ಣೋದರ ಕೈಗೊಂಡಿದ್ದು ಸಂತೋಷ ನಾನು ಕೂಡಾ ನಮ್ಮ ನಾಯಕರಿಂದ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದರು,ಮುಖ್ಯ ಅತಿಥಿಗಳಾಗಿ ಮಾಜಿ ಪುರಸಭಾ ಸದಸ್ಯ ಸಿದ್ದು ಡಂಗಾ, ಜೆಡಿಎಸ್ ಮುಖಂಡರಾದ ಶ್ರೀ ಶೈಲಗೌಡ ಪಾಟೀಲ,ಅಮರೇಶ ಸಾಲಕ್ಕಿ ಬಾಪುಗೌಡ ಪಾಟೀಲ ಬಾಳಪ್ಪ ಜಮಾದರ,ಬದಗೀಸಾಬ ಮುಜಾವರ, ಪಂಚಪ್ಪಸಾಹುಕಾರ ಹಂಜಗಿ,ಕಲ್ಲನಗೌಡ ಪಾಟೀಲ ಡಾ ಸುರೇಶ ವಿಜುಪೂರ,ಸಿದ್ದಣಗೌಡ ಬಿರಾದಾರ,ಭಾಷಾಸಾಬ ಅಂಜುಟಗಿ,ಮೌಲಾಲಿ ಮುಜಾವರ,ಗುಂಡು ಯಾಳವಾರ,ಸುರೇಶ ಮಸಳಿ, ಉಮೇಶ ದೂಡಮನಿ,ಪೀರು ಜಮಾದಾರ, ಯಲ್ಲಾಲಿಂಗ ಪೂಜಾರಿ, ಬಾಳಪ್ಪ ಜಮಾದಾರ, ಸಿದ್ದಪ್ಪ ಮಾದರ, ಅಶೋಕ್ ಜಮಾದಾರ,ಚಾಂದ ಪಾಸೋಡಿ,ನಿಜಾಮ ಮುಜಾವರ,ಬುಡ್ಡೇಸಾಬ ಪಾಸೋಡಿ,ರಾವತಪ್ಪಸಾಹುಕಾರ ವಾಲಿಕಾರ, ಸಿದ್ರಾಮ ಜಮಾದಾರ,ಪೀರು ಮಿರಗಿ ಗುರುಗಳು ಸ್ವಾಗತಿಸಿದರು,ಈರಣ್ಣ ಜಮಾದಾರ ನಿರೂಪಿಸಿ ವಂದಿಸಿದರು.
ವರದಿ ಅರವಿಂದ್ ಕಾಂಬಳೆ