ಉತ್ತರ ಕನ್ನಡ ಜಿಲ್ಲೆ:ಮುಂಡಗೋಡದ ಗಾಂಧಿನಗರ ನಿವಾಸಿಯಾದ ಪರಸಪ್ಪ ಹನುಮಂತಪ್ಪ ಅಗಸರ ಅವರು ರಾಜ್ಯ ಸರ್ಕಾರದಿಂದ ನೀಡುವ ರಾಜೀವ ಗಾಂಧಿ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು,ಸರ್ಕಾರ ಪರಸಪ್ಪ ಅವರಿಗೆ ಮನೆ ಕಟ್ಟಿಕೊಳ್ಳುವಂತೆ ಆದೇಶ ಪತ್ರವನ್ನು ಕೂಡಾ ನೀಡಿತ್ತು,ಪರಸಪ್ಪ ಅವರು ಸರ್ಕಾರ ನೀಡಿದ ಆದೇಶ ಪತ್ರದನ್ವಯ ಕಳೆದ 3 ವರ್ಷಗಳಿಂದ ಮನೆ ಕಟ್ಟಲು ಪ್ರಾರಂಭ ಮಾಡಿ ಈಗ ಸ್ಲಾಬ್ ವರೆಗೆ ಮನೆ ನಿರ್ಮಾಣ ಮುಂದುವರೆದಿದೆ, ಆದರೆ ಸರ್ಕಾರದಿಂದ ನೀಡುವ ಸಹಾಯಧನ ಹಣ 3 ವರ್ಷಗಳು ಕಳೆದರೂ ಫಲಾನುಭವಿ ಖಾತೆಗೆ ಜಮೆ ಆಗಲೇ ಇಲ್ಲ,ಇದರ ಕುರಿತು ಪರಸಪ್ಪನವರು ಕಚೇರಿಗೆ ಅಲೆದಾಡಿ ಸುಸ್ತಾದರೆ ವಿನಹ ಅವರ ಕೆಲಸ ಆಗಲಿಲ್ಲ ಮತ್ತು ಸರ್ಕಾರದಿಂದ ಅವರಿಗೆ ಬರಬೇಕಾದ ಹಣವೂ ಬರಲಿಲ್ಲ,ಈ ಬಗ್ಗೆ
ಕರುನಾಡ ಕಂದ ಪತ್ರಿಕೆಯ ವರದಿಗಾರರನ್ನು ಸಂಪರ್ಕಿಸಿದ ಪರಸಪ್ಪ ಅವರ ನೆರವಿಗೆ ಬಂದ ಕರುನಾಡ ಕಂದ ಪತ್ರಿಕೆಯ ವರದಿಗಾರರಾದ ಶಿವರಾಜ್ ಕುಮಾರ್ ಈ ಬಗ್ಗೆ ಪಟ್ಟಣ ಪಂಚಾಯ್ತಿ ಮುಂಡಗೋಡ ಅಧಿಕಾರಿಗಳ ಜೊತೆ ನಡೆಸಿದ ಸತತ
ಪ್ರಯತ್ನದ ಫ಼ಲಶೃತಿಯಾಗಿ ಈಗ ಪರಸಪ್ಪ ಅವರಿಗೆ 2 ಕಂತಿನ ಹಣ 74.999/-ರೂಪಾಯಿ ಅವರ ಖಾತೆಗೆ ಜಮೆ ಆಗಿದ್ದು,ಇನ್ನೂ ಬಾಕಿ ಉಳಿದ 75.400/-ರೂಪಾಯಿಗಳನ್ನು ಸ್ಲಾಬ್ ಹಂತದ ಕಟ್ಟಡ ನಿರ್ಮಾಣದ ನಂತರ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ರಾಜ್ಯ ಸರ್ಕಾರದಿಂದ 1,49,000/-ಮತ್ತು ಕೇಂದ್ರ ಸರ್ಕಾರದಿಂದ 1,50,000 ಹಣವನ್ನು ಸೇರಿ ಒಟ್ಟು 2,99,000 ರೂಪಾಯಿ ಹಣ ಪರಸಪ್ಪ ಅವರ ಖಾತೆಗೆ ಜಮೆ ಆಗಬೇಕಾಗಿತ್ತು,ಆದರೆ ಕೆಲ ಬೇಜವಾಬ್ದಾರಿ,ಕರ್ತವ್ಯ ನಿರ್ಲಕ್ಷದಿಂದ ಸೂಚಿತ ಸಮಯದೊಳಗೆ ಮನೆಯ ಫೋಟೋಗಳನ್ನು ರಾಜ್ಯ ಸರ್ಕಾರದ ವೆಬ್ಸೈಟ್ ಗೆ ಅಪ್ಲೋಡ್ ಮಾಡದ ಕಾರಣ ರಾಜ್ಯ ಸರ್ಕಾರದ ವತಿಯಿಂದ ಬರುವ ಹಣ ಸ್ಥಗಿತಗೊಂಡಿತು.
ಆದರೂ ಪರಸಪ್ಪ ಅವರಿಗೆ 75,000 ಹಣ ಖಾತೆಗೆ ಸೇರಿದ್ದು ಸಂತಸ ತಂದಿದೆ,ಕರುನಾಡ ಕಂದ ಪತ್ರಿಕೆ ಮಾಡಿದ ಸಹಾಯಕ್ಕೆ ಕೃತಜ್ಞನಾಗಿರುತ್ತೇನೆ ಮತ್ತು ಇದೇ ರೀತಿ ಒಳ್ಳೆಯ ಕೆಲಸಗಳು ಪತ್ರಿಕೆಯಿಂದ ಇನ್ನೂ ಹೆಚ್ಚು-ಹೆಚ್ಚು ಆಗಲಿ ನಿಮ್ಮ ಪತ್ರಿಕೆಯ ಬಳಗಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
-ಕರುನಾಡ ಕಂದ
One Response
Harry thanks to News