ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿನ ಕೂಸು ಆರ್.ಬಿ.ಐ

ಡಾ|| ಬಾಬಾ ಸಾಹೇಬ್ ಅಂಬೇಡ್ಕರರು ಆರ್ಥಿಕ ತಜ್ಞರಾಗಿ, ಸಾಮಾಜಿಕ ಪರಿವರ್ತನಕಾರರಾಗಿ, ರಾಜಕೀಯ ಮುತ್ಸದ್ದಿಯಾಗಿ, ಪತ್ರಕರ್ತರಾಗಿ, ತತ್ವಜ್ಞಾನಿಯಾಗಿ, ಸಂವಿಧಾನತಜ್ಞರಾಗಿ ಹೀಗೆ ಸಾಕಷ್ಟು ಕ್ಷೇತ್ರದಲ್ಲಿ ಪಾಂಡಿತ್ಯವನ್ನೊಂದಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಸಾಧನೆಯನ್ನರಿತು ವಿಶ್ವದ ನೂರು ಜನ ಮಹಾ ಪುರುಷರಲ್ಲಿ ಅಂಬೇಡ್ಕರ್ ಮೊದಲನೆಯವರು. ಎಂದು ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾನಿಲಯವು ಗುರುತಿಸಿರುವುದು ಭಾರತೀಯರಿಗೆ ಒಂದು ಹೆಮ್ಮೆಯ ವಿಚಾರವೇ ಸರಿ.
ಭಾರತದ ಹಣಕಾಸು ವ್ಯವಸ್ಥೆಯ ಮೆದುಳು, ಭಾರತದ ಬ್ಯಾಂಕುಗಳ ಬ್ಯಾಂಕು ಎಂದು ಕರೆಯಲ್ಪಡುವ ಆರ್.ಬಿ.ಐ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರಯತ್ನದ ಫಲ. ಭಾರತದ ಆರ್ಥಿಕ ವ್ಯವಸ್ಥೆ, ಆಢಳಿತ ನಿಯಮಗಳು ಬಲಿಷ್ಠವಾಗಬೇಕು ಮತ್ತು ಅದು ಹೀಗೆ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿರಬೇಕೆಂದು ಸತತ ನಾಲ್ಕು ದಶಕಗಳ ಕಾಲ ಅಂಬೇಡ್ಕರ್ ಶ್ರಮಿಸಿದ್ದಾರೆ. ಭಾರತದ ಆರ್ಥಿಕ ವ್ಯವಸ್ಥೆ, ಆಢಳಿತ ನಿಯಮಗಳು ಇತರೆ ರಾಷ್ಟ್ರಗಳಿಗೆ ಮಾದರಿಯಾಗಿರಬೇಕೆಂದು. ಸತತ ನಾಲ್ಕು ದಶಕಗಳ ಕಾಲ ಅಂಬೇಡ್ಕರ್ ಶ್ರಮಿಸಿದ್ದಾರೆ. ಬಾಬಾ ಸಾಹೇಬರ ಆರ್ಥಿಕ ಚಿಂತನೆ, ತತ್ವ ಮತ್ತು ಸಿದ್ಧಾಂತವನ್ನು ಈ ಮೇಲೆ ಚರ್ಚಿಸಿದಂತೆ ಸಾಕಷ್ಟು ಕೊಡುಗೆಯನ್ನು ಗಮನಿಸಿದ್ದೀರಿ. ಆದರೆ ಬಹಳ ಮುಖ್ಯವಾದ ವಿಷಯವೇನೆಂದರೆ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ”ಗೆ ಬಾಬಾ ಸಾಹೇಬರ ಕೊಡುಗೆ ಏನೆಂಬುದನ್ನು ಇಡೀ ದೇಶಾದ್ಯಂತ ಚರ್ಚಿಸಬೇಕಿದೆ. 1935 ಏಪ್ರಿಲ್ 1 ರಂದು ಸ್ಥಾಪನೆಯಾದ ಆರ್.ಬಿ.ಐ ಗೆ ಅಂಬೇಡ್ಕರ್ ನೀಡಿದ ಕೊಡುಗೆ ಮಹತ್ವದ್ದು. ಅದರ ಸ್ಥಾಪನೆ ಮತ್ತು ಅಭ್ಯೋದಯಕ್ಕೆ ಬಾಬಾ ಸಾಹೇಬರ ಅಪಾರವಾದ ಕೊಡುಗೆ ಏನೆಂಬುದು ಭಾರತದ ಕೋಟ್ಯಾಂತರ ಜನರಿಗೆ ಇನ್ನೂ ತಿಳಿದೇ ಇಲ್ಲದಿರುವುದು ಆಶ್ಚರ್ಯವೆನಿಸುತ್ತದೆ. 1924-25ರಲ್ಲಿ ‘ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್’ ಆಯೋಗವು ಭಾರತದ ಹಣ ವ್ಯವಸ್ಥೆಯ ಪರಿಶೀಲನೆಗಾಗಿ ಮತ್ತು ಅದರ ಹಣ ಚಲಾವಣೆಯ ಸುಧಾರಣೋಪಾಯಗಳನ್ನು ಸೂಚಿಸಲು ಭಾರತಕ್ಕೆ ಭೇಟಿ ನೀಡುತ್ತದೆ. ಆ ಸಂದರ್ಭದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ. ಮಾಹಿತಿ ಪಡೆಯಲು ಭಾರತದಲ್ಲಿದ್ದ ಕೆಲವು ಅರ್ಥಶಾಸ್ತ್ರಜ್ಞರನ್ನು ಭೇಟಿ ಮಾಡಿದರೂ ಅವರಿಗೆ ಸೂಕ್ತ ಮಾಹಿತಿ ಮತ್ತು ಸಲಹೆ ದೊರೆಯದ ಕಾರಣ ಅಂಬೇಡ್ಕರ್ ಅವರನ್ನು ಕಾಣಲು ತೀರ್ಮಾನಿಸುತ್ತಾರೆ. ಆ ಆಯೋಗದ ನೇತೃತ್ವವನ್ನು ವಹಿಸಿ ಅಧ್ಯಕ್ಷರಾಗಿದ್ದವರು ಹಿಲ್ಟನ್ ಯಂಗ್ ಅವರು. ಆಯೋಗದಲ್ಲಿದ್ದ ಹತ್ತು ಸದಸ್ಯರು ಮತ್ತು ಇಬ್ಬರು ಕಾರ್ಯದರ್ಶಿಗಳಾದ ಆರ್.ಎನ್.ಮುಖರ್ಜಿ, ನಾರ್ಕೋಟ್ ವಾರೆನ್, ಆರ್.ಎ.ಮಾಂಟ್, ಎಂ.ಬಿ.ದಾದಾಭಾಯ್, ಹೆನ್ರಿ ಸ್ಟ್ರ್ಯಾಕೋಷ್, ಅಲೆಕ್ಸ್ ಆರ್.ಮರ್ರೆ, ಪುರುಷೋತ್ತಮ ದಾಸ್, ಠಾಕೂರ್ದಾಸ್, ಜೆ.ಸಿ.ಕೋಯಾಜಿ, ಡಬ್ಲೂ.ಇ.ಪ್ರೆಸ್ಟನ್ ಅವರುಗಳು ಸದಸ್ಯರಾದರೆ, ಜಿ.ಹೆಚ್.ಬಾಕ್ಸಟರ್, ಮತ್ತು ಎ.ಅಯ್ಯಂಗಾರ್ ಅವರು ಕಾರ್ಯದರ್ಶಿಗಳಾಗಿರುತ್ತಾರೆ. ಈ ಆಯೋಗವು ಬಾಬಾ ಸಾಹೇಬರನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲಿ ಭಾರತದ ಹಣ ವ್ಯವಸ್ಥೆಯ ಪರಿಶೀಲನೆ ಮತ್ತು ಅದರ ಹಣ ಚಲಾವಣೆಯ ಸುಧಾರಣೋಪಾಯಗಳನ್ನು ಸೂಚಿಸಲು ಒಂಭತ್ತು ಪ್ರಶ್ನೆಗಳನ್ನು ಅವರ ಮುಂದಿಡುತ್ತಾರೆ (ರಿಪೋರ್ಟ್ ಆಫ್ ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್ ಸಂಪುಟ 3, ಅನುಬಂಧ 95ಎ, ಪುಟ 612). ಆಯೋಗವು ಕೇಳಿದ 9 ಪ್ರಶ್ನೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಆಯೋಗಕ್ಕೆ ಸಾಕ್ಷ್ಯಧಾರಗಳ ಸಮೇತ ಪುಟಗಟ್ಟಲೇ ಲಿಖಿತ ಹೇಳಿಕೆಗಳನ್ನು ನೀಡುತ್ತಾರೆ (ಪರಿಷ್ಕೃತ ಆವೃತ್ತಿ 2015, ಸಂಪುಟ5, ಪುಟ 598). ಆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಲು ರೂಪುರೇಷೆಗಳ ಜೊತೆ ಅದರ ಕಾರ್ಯಪ್ರವೃತ್ತಿ ಮತ್ತು ನೀಲನಕಾಶೆಯನ್ನು ಕಮಿಷನ್ ಮುಂದಿಡುತ್ತಾರೆ. ಬಾಬಾ ಸಾಹೇಬ್ ಅವರಿಗಿದ್ದ ಜ್ಞಾನ ಮನಗಂಡಿದ್ದ ಆಯೋಗವು ಅವರು ಮಂಡಿಸಿದ ವಿಚಾರ ಮತ್ತು ಸಲಹೆಗಳನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ. ಆರ್ ಬಿ ಐ ಯನ್ನು ಕಾರ್ಯರೂಪಕ್ಕೆ ತರಲು ಕಮಿಷನ್ ಮಹತ್ವದ ನಿರ್ಧಾರ ಕೈಗೊಳ್ಳುತ್ತದೆ. ಸಭೆಯಲ್ಲಿ ಚರ್ಚಿತವಾದ ವಿಚಾರಗಳನ್ನು ದಾಖಲಾಯಿಸಿಕೊಂಡು 1934ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿ ಆರ್ ಬಿ ಐ ಕಾಯ್ದೆಯನ್ನು ಜಾರಿಮಾಡುತ್ತದೆ. ಇಂದು ಆರ್ ಬಿ ಐ ಬಹುದೊಡ್ಡ ಸಂಸ್ಥೆಯಾಗಿ ಯಾವುದೇ ಲೋಪದೋಷಗಳಿಲ್ಲದೇ ಕಾರ್ಯ ನಿರ್ವಹಿಸುತ್ತಿದೆ ಎಂದರೆ. ಅದಕ್ಕೆ ಮೂಲ ಕಾರಣಕರ್ತರು ಡಾ|| ಬಾಬಾ ಸಾಹೇಬ್ ಅಂಬೇಡ್ಕರ್. ಮತ್ತೊಂದು ವಿಶೇಷವೇನೆಂದರೆ 1924-25ರಲ್ಲಿ ಅಂಬೇಡ್ಕರ್ ಅವರನ್ನು ಭೇಟಿ ಮಾಡಲು ಹಾಜರಾಗಿದ್ದ ಆಯೋಗದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ‘ದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಆರಿಜನ್ ಅಂಡ್ ಇಟ್ಸ್ ಸಲ್ಯೂಷನ್’ ಪುಸ್ತಕವನ್ನು ತಮ್ಮ ಬಳಿಯೇ ಇಟ್ಟುಕೊಂಡಿರುತ್ತಾರೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ 1920-30ರ ದಶಕದಲ್ಲಿಯೇ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿತ್ತು ಎಂಬುವುದಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ. ಅದಕ್ಕೆ ತಾನೇ ನೊಬೆಲ್ ಪ್ರಶಸ್ತಿ ಪುರಷೃತರಾದ ಅಮಾರ್ತ್ಯ ಸೇನ್ ಕೂಡ ಬಾಬಾ ಸಾಹೇಬರನ್ನು ಭಾರತ ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಮುಂದುವರೆದು ಅವರು ಬಾಬಾ ಸಾಹೇಬರ ರಾಷ್ಟ್ರದ ಆರ್ಥಿಕ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಒದಗಿಸಿದ ಮಹಾನ್ ವ್ಯಕ್ತಿ ಎಂದು ಪ್ರತಿಪಾದಿಸುತ್ತಾರೆ. ಮತ್ತೊಂದು ಸತ್ಯವೆಂದರೆ ಭಾರತದಲ್ಲಿ ಸೋಕಾಲ್ಡ್ ಬುದ್ದಿ ಜೀವಿಗಳು ಬಾಬಾ ಸಾಹೇಬರನ್ನು ದೂರ ತಳ್ಳಿದರೂ ಅಮಾರ್ತ್ಯ ಸೇನ್ ಮಾತ್ರ ಆರ್ಥಿಕ ವಿಷಯದಲ್ಲಿ ಬಾಬಾ ಸಾಹೇಬರ ಅನುಯಾಯಿಯಾಗಿ ಬಿಡುತ್ತಾರೆ. ನನಗೆ ನೊಬೆಲ್ ಧಕ್ಕಿರುವುದೇ ಅಂಬೇಡ್ಕರ್ ಅವರ ಚಿಂತನೆಗಳಿಂದಲೇ ಎಂಬುದನ್ನು ಸ್ವತಃ ಅವರೇ ಸಾಕಷ್ಟು ಬಾರಿ ಕಾನ್ಫರೆನ್ಸ್ಗಳಲ್ಲಿ ಹೇಳಿಕೊಂಡಿರುವುದು ದಾಖಲಾಗಿವೆ.
ಇನ್ನು ಆಶ್ಚರ್ಯಕರ ಸಂಗಾತಿಯೆಂದರೆ ರಿಜರ್ವ್ ಬ್ಯಾಂಕ್ ಮುದ್ರಿಸುತ್ತಿರುವ ನೋಟುಗಳ ಮೇಲೆ ಅದರ ಸ್ಥಾಪನೆಯ ರೂವಾರಿ ಅಂಬೇಡ್ಕರ್ ಭಾವಚಿತ್ರವಿಲ್ಲ. ಇನ್ನೂ ಮುಖ್ಯವಾದ ಆಶ್ಚರ್ಯ ಏನೆಂದರೆ ಇತ್ತೀಚೆಗೆ ಆರ್.ಬಿ.ಐ ತನ್ನ ಗ್ರಾಂಡ್ ಅಂಬಾಸಿಡರ್ ಎಂದು ರವೀಂದ್ರನಾಥ ಟಾಗೋರ್ ಅವರನ್ನು ಮಾಡಿತು,ಇದೆಲ್ಲಾ ನಡೆಯುವುದು. ಜಾತಿವಾದಿಯಂತಹ ರಾಷ್ಟ್ರಗಳಲ್ಲಿ ಮಾತ್ರ, ಅಕ್ಷರಶಃ ಸತ್ಯ ತಮಗೆ ನೆನಪಿರಲಿ ಮುಂದೆ ಒಂದು ದಿನ ಡಾ|| ಬಾಬಾ ಸಾಹೇಬರಿಗೆ ಸಲ್ಲಬೇಕಾದ ಗೌರವ ಸಲ್ಲುತ್ತದೆ.ಇತಿಹಾಸ ಬಚ್ಚಿಟ್ಟರು ಇತಿಹಾಸ ಅಗೆದು ತೆಗೆದು ಸತ್ಯ ವಿಷಯ ತಿಳಿಸುವವರು ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂತಹ ವಿಷೇಶವಾದ ದಿನದಂದು ಡಾ. ಬಿ. ಆರ್. ಅಂಬೇಡ್ಕರ್ ರವರ ತ್ಯಾಗ, ಪರಿಶ್ರಮವನ್ನು ಸ್ಮರಿಸಿಕೋಳ್ಳುವದರ ಮೂಲಕ ಆರ್.ಬಿ.ಐ ಸ್ಥಾಪನೆಯ ದಿನವನ್ನು ಭಾರತದ ಪ್ರತಿ ನಾಗರಿಕರು ಸಂಭ್ರಮದಿಂದ ಆಚರಿಸಬೇಕು.

ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ