ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಆದ್ಯಾತ್ಮಿಕ ತತ್ವದ ಜ್ಞಾನ ಭಂಡಾರ ವರ್ಧಮಾನ್ ಮಹಾವೀರ್

ಮಹಾವೀರ ಜಯಂತಿ ಜೈನ ಸಮುದಾಯದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ ಈ ಹಬ್ಬವು ಭಗವಾನ್ ಮಹಾವೀರರ ಜನ್ಮದಿನವನ್ನು ನೆನಪಿಸುತ್ತದೆ. ಜೈನ ಪುರಾಣದ ಪ್ರಕಾರ, ಭಗವಾನ್ ಮಹಾವೀರ ಜೈನ ಧರ್ಮದ 24 ನೇ ತೀರ್ಥಂಕರ. 2023 ರಲ್ಲಿ, ಮಹಾವೀರ ಜಯಂತಿಯನ್ನು ಏಪ್ರಿಲ್ 4 ರಂದು ಆಚರಿಸಲಾಗುತ್ತದೆ

ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಮುಖ್ಯವಾದುದು ಇದು ಕೊನೆಯ ತೀರ್ಥಂಕರನಾದ ಮಹಾವೀರನ ಜನ್ಮದಿನವನ್ನು ಆಚರಿಸುತ್ತದೆ. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು.ವರ್ಷ ಕ್ರಿ.ಪೂ. ೫೯೯ ಅಥವಾ ಕ್ರಿ.ಪೂ. ೬೧೫.ಮಹಾವೀರನು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು. ವಿಜ್ಜಿ ಎಂಬ ರಾಜನು ಆ ಸಮಯದಲ್ಲಿ ಆಳ್ವಿಕೆ ಮಾಡುತ್ತಿದ್ದನು.

ಆಂಗ್ಲ ಕ್ಯಾಲೆಂಡರ್ ನಲ್ಲಿ ಈ ಹಬ್ಬ ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ನ ಆರಂಭದಲ್ಲಿ ಉಂಟಾಗುತ್ತದೆ.

ಮಹಾವೀರ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತಲಾಗುತ್ತದೆ. ಈ ದಿನದಂದು ಗುಜರಾತ್ ರಾಜ್ಯದ ಗೀರ್ನಾರ್ ಮತ್ತು ಪಲಿತಾನಾ ದಲ್ಲಿರುವ ಬಸದಿಗಳಿಗೆ ದೇಶದ ಎಲ್ಲೆಡೆಗಳಿಂದ ಭಕ್ತರು ಬರುತ್ತಾರೆ.

ಜೈನ ಧರ್ಮದ ಸಂಸ್ಥಾಪಕ ಅಥವಾ 24ನೇ ತೀರ್ಥಂಕರ ಮಹಾವೀರ ಅವರ ಜನ್ಮದಿನವನ್ನು ಗುರುತಿಸಲು ಸಮುದಾಯದಿಂದ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ.ಜೈನ ಧರ್ಮವು ವಿಶ್ವ ಶಾಂತಿ ಮತ್ತು ಸಾಮರಸ್ಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ.ಮಹಾವೀರ ಜಯಂತಿಯನ್ನು ಶಾಂತಿ,ಸೌಹಾರ್ದತೆ ಮತ್ತು ಮಹಾವೀರರ ಬೋಧನೆಗಳನ್ನು ಹರಡಲು ಜೈನ ಸಮುದಾಯದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ.

ಮಹಾವೀರ ಜಯಂತಿಯನ್ನು ಮಂಗಳವಾರ ಏಪ್ರಿಲ್ 4, 2023 ರಂದು ಆಚರಿಸಲಾಗುತ್ತದೆ.

ಇತಿಹಾಸ ಮತ್ತು ಮಹತ್ವ

ಚೈತ್ರ ಮಾಸದ 13ನೇ ದಿನ ಅಥವಾ ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ 13ನೇ ಚಂದ್ರನ ದಿನದಲ್ಲಿ ಮಹಾವೀರರು ಬಿಹಾರದ ಕುಂಡಲಗ್ರಾಮದಲ್ಲಿ ಜನಿಸಿದರು. ಅವರು ರಾಜ ಸಿದ್ಧಾರ್ಥ ಮತ್ತು ರಾಣಿ ತ್ರಿಶಾಲಾ ಅವರ ಮಗನಾಗಿ ಜನಿಸಿದರು. ಆದಾಗ್ಯೂ, ಅವರ ಜನ್ಮ ದಿನಾಂಕವು ಕೆಲವೊಮ್ಮೆ ಶ್ವೇತಾಂಬರ ಜೈನರಲ್ಲಿ ಚರ್ಚಾಸ್ಪದವಾಗಿದೆ, ಅವರ ಪ್ರಕಾರ ಅವರು 599 BC ಯಲ್ಲಿ ಜನಿಸಿದರು, ಆದರೆ ದಿಗಂಬರ ಜೈನರು ಅವರು 615 BC ಯಲ್ಲಿ ಜನಿಸಿದರು ಎಂದು ನಂಬುತ್ತಾರೆ.

ಶ್ವೇತಾಂಬರ ಸಮುದಾಯದ ನಂಬಿಕೆಗಳ ಪ್ರಕಾರ, ಮಹಾವೀರನ ತಾಯಿಯು 14 ಕನಸುಗಳನ್ನು ಹೊಂದಿದ್ದಳು, ನಂತರ ಜ್ಯೋತಿಷಿಗಳು ಅದನ್ನು ವ್ಯಾಖ್ಯಾನಿಸಿದರು, ಅವರೆಲ್ಲರೂ ಮಹಾವೀರನು ಚಕ್ರವರ್ತಿ ಅಥವಾ ಋಷಿ (ತೀರ್ಥಂಕರ) ಆಗಲು ಹೋಗುತ್ತಾನೆ ಎಂದು ಹೇಳಿದರು. ಮಹಾವೀರನು 30 ನೇ ವಯಸ್ಸನ್ನು ತಲುಪಿದಾಗ, ಅವನು ಸತ್ಯದ ಹುಡುಕಾಟದಲ್ಲಿ ತನ್ನ ಸಿಂಹಾಸನ ಮತ್ತು ಕುಟುಂಬವನ್ನು ತೊರೆದನು. ಅವರು ತಪಸ್ವಿಯಾಗಿ 12 ವರ್ಷಗಳ ಕಾಲ ವನವಾಸದಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲಿ, ಅವರು ಅಹಿಂಸೆಯನ್ನು ಬೋಧಿಸಿದರು, ಎಲ್ಲರನ್ನು ಗೌರವದಿಂದ ನಡೆಸಿಕೊಂಡರು. ಇಂದ್ರಿಯಗಳನ್ನು ನಿಯಂತ್ರಿಸುವಲ್ಲಿ ಅಸಾಧಾರಣ ಕೌಶಲ್ಯವನ್ನು ತೋರಿಸಿದ ನಂತರ ಅವರು “ಮಹಾವೀರ” ಎಂಬ ಹೆಸರನ್ನು ಪಡೆದರು. ಮಹಾವೀರನು 72 ವರ್ಷದವನಾಗಿದ್ದಾಗ ಅವನು ಜ್ಞಾನೋದಯವನ್ನು (ನಿರ್ವಾಣ) ಪಡೆದನು ಎಂದು ವ್ಯಾಪಕವಾಗಿ ನಂಬಲಾಗಿದೆ.

ಜೈನ ಧರ್ಮ
“ಅಹಿಂಸಾ ಪರಮೋ ಧರ್ಮಃ” – ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗ ಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು – ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು. ತ್ಯಾಗಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದ ಕೂಡಲೇ ಇಲ್ಲಿ ಗೃಹಸ್ಥರನ್ನು ಕಡೆಗಣಿಸಲಾಗಿದೆ ಎಂದರ್ಥವಲ್ಲ. ಗೃಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಐದು ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಅಹಿಂಸೆ. ಪ್ರಾಣಿ ಬಲಿದಾನಗಳನ್ನು ಬಲವಾಗಿ ವಿರೋದಿಸುವ ಮಹಾವೀರರು ಜೈನ ಧರ್ಮದ ಉಳಿವಿಗಾಗಿ ಮತ್ತು ಜೈನ ಧರ್ಮದ ಪ್ರಸಾರಕ್ಕಾಗಿ ಶ್ರಮಿಸಿ

ಮಹಾವೀರರ ತತ್ವ ಮತ್ತು ಭೋಧನೆಗಳು

ಪ್ರಮಾಣ ಮತ್ತು ನಯ :

ಜೈನ ಧರ್ಮವು -ಪ್ರತ್ಯಕ್ಷ , ಅನುಮಾನ, ಆಗಮ ಗಳೆಂಬ ಮೂರುಪ್ರಮಾಣಗಳನ್ನು ಅಂಗೀಕರಿಸುತ್ತದೆ. ವಸ್ತುವಿನ ಯಥಾರ್ಥ ಜ್ಞಾನವನ್ನು ಒದಗಿಸುವುದೇ ಪ್ರಮಾಣ. ವಸ್ತುವಿನ ಒಂದು ಅಂಶದ ಬಗೆಗೆ ತಿಳಿಸುವುದು ನಯ. ಎಂದರೆ ಅದರ ಒಂದು ದೃಷ್ಠಿಕೋನದಿಂದ ಹೇಳುವುದು ನಯ.
ಏಕ ದೇಶ ವಿಶಿಷ್ಠಾರ್ಥೋ ನಯಸ್ಯ ವಿಷಯೋ ಮತಃ.
ಸ್ಯಾದ್ವಾದ
ಸತ್ಯದ ಜಟಿಲ ಸಂಕೀರ್ಣತೆಯ ಬಗೆಗೆ ವಿಚಾರ ಮಾಡುವುದೇ ಅನೇಕಾಂತವಾದ; ಅನೇಕಾಂತವಾದವೇ -ಸ್ಯಾದ್ವಾದ. (ಎಲ್ಲಾ ಬಗೆಯ ಸಂಭಾವ್ಯತೆ ಯನ್ನು ಒಪ್ಪುವುದು)
ಸತ್ಯವು ಹೀಗೆ ಇರಬಹುದು ಎಂಬ ಸಂಭಾವ್ಯತಾ ಸಿದ್ಧಾಂತ. ವಿಶ್ವವನ್ನು ಅನೇಕ ದೃಷ್ಠಿಯಿಂದ ನೋಡಬಹುದು. ಪ್ರತ್ಯೇಕ ನಿರ್ಣಯಕ್ಕೂ ಬರಬಹುದು; ಸತ್ಯದ ಪೂರ್ಣ ಸ್ವರೂಪವನ್ನು ನಿರ್ಣಯಿಸುವುದಿಲ್ಲ. ಏಳು ಹಂತಗಳಿಂದ ಸತ್ಯವನ್ನು ತಿಳಿಯುವ ಪ್ರಯತ್ನವನ್ನು ಮಾಡಬಹುದು.
ಸ್ಯಾದಸ್ತಿ -ಹೀಗಿರಬಹುದು.
ಸ್ಯಾನ್ನಾಸ್ತಿ – ಹೀಗಿರಲಾರದು.
ಸ್ಯಾದಸ್ತಿಚ ನಾಸ್ತಿಚ -ಬಹುಶಃ ಇದ್ದೀತು, ಇಲ್ಲದೆ ಇದ್ದೀತು.
ಸ್ಯಾದವ್ಯಕ್ತಮ್ – ಅದನ್ನು ವಿವರಿಸಲಾಗದು.
ಸ್ಯಾದ್ ಅಸ್ತಿಚ ಅವ್ಯಕ್ತಂಚ – ಬಹುಶಃ ಇದೆ -ವರ್ಣನಾತೀತವಾಗಿದೆ.
ಸ್ಯಾನ್ನಾಸ್ತಿಚ ಅವ್ಯಕ್ತಂಚ – ಬಹುಶಃ ಇಲ್ಲ, ವರ್ಣನಾತೀತವೂ ಆಗಿದೆ.
ಸ್ಯಾದಸ್ತಿಚ ನಾಸ್ತಿಚ ಅವ್ಯಕ್ತಂಚ.- ಬಹುಶಃ ಇದೆ, / ಬಹುಶಃ ಇಲ್ಲ ; ವರ್ಣನಾತೀತವೂ ಆಗಿದೆ.
ಈ ವಾದ ಜೈನ ಧರ್ಮದ ದೃಷ್ಠಿ ವೈಶಾಲ್ಯವನ್ನೂ ತೋರಿಸುತ್ತದೆ.
ರತ್ನ ತ್ರಯ
ಜೈನ ಶಬ್ದವು ಜಯ, ಜಯಿಸಿದವನು ಎನ್ನುವ ಶಬ್ದದಿಂದ ಬಂದಿದೆ.
ಅದರ ಅರ್ಥ , ಇಂದ್ರಿಯಗಳನ್ನು -ರಾಗ ದ್ವೇಷಗಳನ್ನು ಗೆದ್ದವನು; ಇದನ್ನು ಸಾಧಿಸಲು ರತ್ನ ತ್ರಯಗಳನ್ನು ಪಾಲಿಸಬೇಕು. ಇವು:
ಸಮ್ಯಕ್ ದರ್ಶನ :(ಸಮ್ಯಕ್ ಶ್ರದ್ಧೆ) ಅವರ ಶಾಸ್ತ್ರದಲ್ಲಿ ಪೂರ್ಣ ನಂಬುಗೆ.
ಸಮ್ಯಕ್ ಜ್ಞಾನ : ಜೈನ ತತ್ವಗಳಲ್ಲಿ ಸರಿಯಾದ ಜ್ಞಾನ.
ಸಮ್ಯಕ್ ಚಾರಿತ್ರ್ಯ : ಅವನ್ನು ಅನುಷ್ಠಾನ ಗೊಳಿಸುವುದೇ -ಸಮ್ಯಕ್ ಚಾರಿತ್ರ್ಯ.
ನೀತಿ ನಿಯಮಗಳು : ರತ್ನತ್ರಯ ಸಾಧಿಸಲು ಪಂಚಾಣು ಮಹಾ ವ್ರತಗಳನ್ನು ಪಾಲಿಸಬೇಕು.
ಅಹಿಂಸೆ : ಕಾಯಾ ವಾಚಾ ಮನಸಾ, ಹಿಂಸಿಸದಿರುವುದು.
ಸತ್ಯ : ಸದಾ ಸತ್ಯ ವಾಕ್ ನ್ನು ಅನುಸರಿಸುವುದು,
ಆಸ್ತೇಯ : ಕದಿಯದಿರುವುದು.
ಬ್ರಹ್ಮಚರ್ಯ : ಸಂನ್ಯಾಸಿಗಳಿಗೆ ಮಾತ್ರಾ ; ಪ್ರಾಪಂಚಿಕ ವಸ್ತುಗಳ ಬಗೆಗೆ ವೈರಾಗ್ಯ.
ಅಪರಿಗ್ರಹ : ಪ್ರಾಪಂಚಿಕ ವಸ್ತುಗಳ ಬಗೆಗೆ ವೈರಾಗ್ಯ. (ಇದು ಸಂನ್ಯಾಸಿಗಳಿಗೆ ಮಾತ್ರಾ; ಸಂಸಾರಿಗಳು ಪರಿಗ್ರಹಿಸಬಹುದು.)
೪.೫. ಗೃಹಸ್ಥರಿಗೆ -ಏಕ ಪತ್ನಿತ್ವ, ಮತ್ತು ಸಂತೋಷ.
ಕರ್ಮ ಸಿದ್ಧಾಂತ
ಕರ್ಮ ಸಿದ್ಧಾಂತ

ಕರ್ಮವು ಭೌತ ವಸ್ತು, ಅದು ಜೀವವನ್ನು ಆವರಿಸಿ, ಜೀವವನ್ನು ಜನ್ಮಾಂತರ ಚಕ್ರ ಅಥವಾ ಭವಾವಳಿಯಲ್ಲಿ ಮಾನವನನ್ನು ನೂಕುತ್ತದೆ. ಜೀವನು ಬದ್ಧ ಪುರುಷನಾಗುತ್ತಾನೆ.
ಈ ಕರ್ಮದಲ್ಲಿ ಮುಖ್ಯವಾಗಿ ಎಂಟು ಬಗೆ (ಒಟ್ಟು ೧೪೮ ಬೇಧಗಳಿವೆ.). ೧.ಜ್ಞಾನಾವರಣೀಯ : ೨.ದರ್ಶನಾವರಣೀಯ, ೩.ಮೋಹನೀಯ. ೪. ವೇದನೀಯ, ೫. ಆಯುಷ್ಯ ; ೬) ನಾಮ , ೭. ಗೋತ್ರ, ಅಂತರಾಯ.
ಕರ್ಮನಾಶವು ಸಂವರ (ತಡೆಯುವುದು), ನಿರ್ಜರ(ನಾಶಮಾಡುವುದು), ಈ ಅನೇಕ ಹಂತಗಳು ನಡೆದು, ಮೋಕ್ಷವನ್ನು ಪಡೆದು, – ಅನಂತ ಜ್ಞಾನ ; ಅನಂತ ವೀರ್ಯ, ಅನಂತ ಶ್ರದ್ಧಾ, ಅನಂತ ಶಾಂತಿಗಳೆಂಬ ಅನಂತ ಚತುಷ್ಟಯಗಳನ್ನು ಪಡೆದು. ಲೋಕ ಕಲ್ಯಾಣಕ್ಕೆ ಪ್ರಯತ್ನಿ ಸುತ್ತಿರುತ್ತಾರೆ.

ಮೋಕ್ಷವನ್ನು ಹಂತವಾಗಿ ಹಂತವಾಗಿ ಪಡೆಯುತ್ತಾರೆ. ಹದಿನಾಲ್ಕು ಹಂತಗಳಲ್ಲಿ ಕೊನೆಯದು ಆಯೋಗ. ಮೊದಲು ತೀರ್ಥಂಕರ-ಅರ್ಹತ,- ಅರ್ಹಂತ-ಇತ್ಯಾದಿ. ಇವರು ಜೀವನ್ಮುಕ್ತರು. ಅವರು ಅಂತಿಮ ಅವಸ್ಥೆಯಲ್ಲಿ ಲೋಕಾಕಾಶ, ಅಲೋಕಾಕಾಶದ ನಡುವೆ. ಸಿದ್ಧಶಿಲಾ ಎಂಬ ಸ್ಥಾನವನ್ನು ಪಡೆಯುತ್ತಾರೆ. ಆ ಮುಕ್ತರೆಲ್ಲಾ ಅನಂತ ಚತುಷ್ಟಯ ಸಂಪನ್ನರಾಗಿರುತ್ತಾರೆ. ಹೀಗೆ ವರ್ತಮಾನ ಮಹಾವೀರರ ತತ್ವಗಳನ್ನು ಮತ್ತು ಬೋಧನೆಗಳನ್ನು ಆಧುನಿಕ ಯುವಕರು ಮೈಗೂಡಿಸಿಕೊಂಡಾಗ ಮಾತ್ರ ನವ ಭಾರತದ ಕನಸು ಈಡೇರುತ್ತದೆ

-ಹನುಮೇಶ ಅಗಳಕೇರಿ
ರಾಜ್ಯಶಾಸ್ತ್ರ ಉಪನ್ಯಾಸಕರು

ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜ್ ಕೊಪ್ಪಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ