ಇಂಡಿ:ನನಗೆ 2018ರಲ್ಲಿ ತಾಲೂಕಿನ ಜನತೆ 42000ಮತಗಳನ್ನು ನೀಡಿ ಅಲ್ಪಮತದಲ್ಲಿ ಪರಾಭವಗೊಂಡ ನಾನು ತಮ್ಮ ಋಣತೀರಿಸಲು ಹಗಲು ಇರುಳು ಶ್ರಮಿಸುತ್ತಿದ್ದೇನೆ ಆದರೆ ಈ 2023 ರ ಚುನಾವಣೆಯಲ್ಲಿ ನನ್ನನ್ನು ಕೈಯ ಬಿಡಬೇಡಿ ಎಂದು ಅಲ್ಲಿದ್ದ ಜನರ ಪಾದಿಗೆ ವಂದಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲರು
ತಾಲೂಕಿನ ಬರಗುಡಿ ಗ್ರಾಮದಲ್ಲಿ ಹಮ್ಮಿಕೊಂಡ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರ ಪ್ರಚಾರ ಹಾಗೂ ಕಾರ್ಯಕರ್ತರ ಸಭೆ ಮತ್ತು ವಿವಿಧ ಪಕ್ಷಗಳ ನಾಯಕರ ಪಕ್ಷಸೇರ್ಪಡೆ ಸಮಾರಂಭ ಹಾಗೂ ಉದ್ಘಾಟಸಿ ಮಾತನಾಡಿದ ಅವರು, 2021ರಲ್ಲಿ ಭೀಮಾ ನದಿಗೆ ಪ್ರವಾಹ ಬಂದಾಗ ನಾನು ಸಂತ್ರಸ್ಥರ ಪರಿಸ್ಥಿತಿ ಕಣ್ಣಾರೆ ಕಂಡಿದ್ದೇನೆ ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಗಳ ಗಮನಕ್ಕೂ ತಂದಿದ್ದೇನೆ,ಆದರೆ ಸೂಕ್ತ ಪರಿಹಾರ ನೀಡುವಲ್ಲಿ ಸಂಬಂಧಿಸಿದ ಇಲಾಖೆ ವಿಫಲವಾಗಿದ್ದು ದುಸ್ಥರ, ಭವಿಷ್ಯದ ದಿನಗಳಲ್ಲಿ ತಮ್ಮ ಆರ್ಶಿವಾದಿಂದ ಶಾಸಕನಾದರೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ನಿರ್ಧರಿಸಿದ್ದೇನೆ ಎಂದರು.
ಅಕ್ತರ್ ಪಟೇಲ್, ಮರೆಪ್ಪ ಗಿರಣಿವಡ್ಡರ, ಅಯೂಬ್ ನಾಟೀಕರ, ನಾಗೇಶ ತಳಕೇರಿ, ವಿಜಯಕುಮಾರ್ ಭೋಸಲೆ, ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಒಡೆಯರ್, ಸಿದ್ದು ಡಂಗಾ,ಕನ್ನಪ್ಪ ಬಿರಾದಾರ, ಸದ್ದಾಂ ಅರಬ್, ಯಲ್ಲಪ್ಪ ಕುಂಬಾರ, ರುದ್ರಪ್ಪ ಗಿರಣಿವಡ್ಡರ,ದೂಂಡಿಬಾ ಗಿರಣಿವಡ್ಡರ,ಸಿದ್ದು ಶೇಂಡಗಿ,ಸೋಮು ಗಿರಣಿವಡ್ಡರ, ಸುರೇಶ್ ಯಾದವಾಡ,ಭೀಮಶ್ಯಾ ವಾಲಿಕಾರ,ಬೂತಾಳಿ ಕೆಳಗಿನಮನಿ, ದುಂಡು ಬಿರಾದಾರ, ಪಂಡಿತ್ ಕಾಡಿಮಗೇರಿ, ಶಿವಪುತ್ರ ವಾಲಿಕಾರ,ರತನಶ್ಯಾ ಲಿಂಗಸೂರ, ಅರ್ಜುನ್ ಕ್ಷೇತ್ರಿ, ತಮ್ಮಣಗೌಡ ಬಿರಾದಾರ, ತುಕಾರಾಂ ಪವಾರ , ಉಪಸ್ಥಿತರಿದ್ದರು ಶಾಂತು ಅಂಕಲಗಿ ನಿರೂಪಿಸಿದರು.
ವರದಿ. ಅರವಿಂದ್ ಕಾಂಬಳೆ