ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದಲ್ಲಿ ದವನದ ಹುಣ್ಣಿಮೆಯಂದು ಗ್ರಾಮದ ಆರಾಧ್ಯ ದೈವ ಶ್ರೀ ಉತ್ತರೇಶ್ವರ ರಥೋತ್ಸವ ಭಕ್ತರ ಸಡಗರ ಸಂಭ್ರಮದ ಮಧ್ಯೆ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ಸಂಪ್ರದಾಯದಂತೆ ಜಾತ್ರಾ ವಿಶೇಷ ಪೂಜಾ ಕಾರ್ಯಗಳು ನಡೆದವು ಉತ್ಸವ ಮೂರ್ತಿಯನ್ನು ಮತ್ತು ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು. ದ್ಯಾವಮ್ಮ ದೇವಿ ದೇವಸ್ಥಾನದಿಂದ ಸಣ್ಣ ತೆರನ್ನು ಡೊಳ್ಳು ಮತ್ತು ಮೇಳ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು ಸಣ್ಣ ತೇರನ್ನು ಎಳೆಯಲಾಯಿತು.
ಸಂಜೆ 6 ಗಂಟೆಗೆ ಶ್ರೀ ಉತ್ತರೇಶ್ವರ ಸ್ವಾಮಿಯ ರಥೋತ್ಸವದ ರಥಕ್ಕೆ ವೈವಿದ್ಯಮಯ ಹೂಗಳು ಹಾಗೂ ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು ಶ್ರೀ ಉತ್ತರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ರವರು ರಥದಲ್ಲಿ ಅಸೀನರಾಗುತ್ತಿದ್ದಂತೆ ನೆರೆದಿದ್ದ ಭಕ್ತರು ದೇವರ ಜಯ ಘೋಷ ಕೂಗಿ,ರಥ ಎಳೆದು ಹೂ ಹಣ್ಣು ಎಸದು ಭಕ್ತಿ ಭಾವ ಮೆರೆದರು.
ಹಾಗೆ ರಥೋತ್ಸವದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಟಾಸ್ಕ್ ಫೋರ್ಸ್ ಸಮಿತಿ (ರಕ್ತ ಸುರಕ್ಷತೆ) ಬಳ್ಳಾರಿ, ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಬಳ್ಳಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕರೂರು ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಉತ್ತನೂರು ಗ್ರಾಮದ ಅಗಸೆ ಮುಂಭಾಗದ ಅವರಣದಲ್ಲಿ ಊರಿನ ಯುವಕರು,ಹಿರಿಯರು, ಮುಖಂಡರು,ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಊರಿನ ಜನರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ವರದಿ:ಎಂ ಪವನ್ ಕುಮಾರ್
ಕರುನಾಡ ಕಂದ ಪತ್ರಿಕೆ ವರದಿಗಾರ ಸಿರುಗುಪ್ಪ