ವಿಜಯನಗರ ಜಿಲ್ಲೆ ಕೊಟ್ಟೂರು:ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ತಾಲೂಕಿನ ಉಜ್ಜಿನಿ ಕಾಳಪುರ,ಚಿನ್ನನಹಳ್ಳಿ,ತೂಲಹಳ್ಳಿ,ನಾಗರಕಟ್ಟಿ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು.ಮತದಾರರುನಿರ್ಭಯವಾಗಿ ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಪಿಡ್ ಆಕ್ಷನ್ ಪೋರ್ಸ್ ವತಿಯಿಂದ ಕೊಟ್ಟೂರು ಪೋಲಿಸ್ ಠಾಣೆಯ ಸಹಕಾರದೊಂದಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಕೈಗೊಂಡರು .ಉಜ್ಜಿನಿ ಗ್ರಾಮದಲ್ಲಿ ಪ್ರಾರಂಭಗೊಂಡು ಪಥ ಸಂಚಲನ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಸಂಚರಿಸಿ ಮತಧಾರರಲ್ಲಿ ಭಯದ ವಾತವರಣ ಹೋಗಲಾಡಿಸಿದರು ಪಥ ಸಂಚಲನದಲ್ಲಿ ಕೇಂದ್ರ ಭದ್ರತಾ ಪಡೆಯು ನರೇಶ್ ಗುಪ್ತ.ಮುನಿಷ್ ಗುಪ್ತ. ಈ ಸಂಧರ್ಭದಲ್ಲಿ ಕೂಡ್ಲಿಗಿ ಡಿವೈ ಎಸ್ಪಿ.ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್ ಕೊಟ್ಟೂರು ಪಿಎಸ್ಐ ಪೋಲಿಸ್ ಸಿಬ್ಬಂದಿ ಇದ್ದರು.
ವರದಿ ಚಿಗಟೇರಿ ಜಯಪ್ಪ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.