ಚನ್ನಗಿರಿ: ದೇವರಹಳ್ಳಿ ಗ್ರಾಮದ ಆರಾಧ್ಯ ದೈವ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ಚನ್ನಗಿರಿ: ದೇವಾಲಯಗಳ ಗ್ರಾಮವೆಂದು ಹೆಸರನ್ನು ಪಡೆದುಕೊಂಡಿರುವ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಆರಾಧ್ಯ ದೈವ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಏ. ೭ರಂದು ಬೆಳಿಗ್ಗೆ ೬.೩೦ ಕ್ಕೆ ಅತ್ಯಂತ ಅದ್ಧೂರಿಯಾಗಿ ಶುಕ್ರವಾರ ನಡೆಯಿತು.
ಪ್ರತಿ ರ‍್ಷ ಏಫ್ರಿಲ್ ತಿಂಗಳಲ್ಲಿ ಬರುವ ‘ದವನದ ಹುಣ್ಣಿಮೆ’ ಯಾದ ಮರು ದಿನ ದಿನ ಅಂದರೆ ಶುಕ್ರವಾರ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ ಮರ‍್ತಿಯನ್ನು ವಿವಿಧ ಕಲಾ ತಂಡಳ ಮೇಳದೊಂದಿಗೆ ಬೆಟ್ಟದ ಮೇಲೆ ರಥದಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೆರೆದಿದ್ದ ಭಕ್ತರು ಲಕ್ಷ್ಮೀ ರಮಣ ಗೋವಿಂದ, ಗೋವಿಂದಾ ಎಂಬ ಘೋಷಣೆಗಳನ್ನು ಕೂಗುತ್ತಾ ರಥವನ್ನು ೧ ಕಿಮೀ ಎತ್ತರದಲ್ಲಿರುವ ಬೆಟ್ಟದ ಮೇಲಿಂದ ಕೆಳಗಡೆಗೆ ಎಳೆದುಕೊಂಡು ಬರಲು ಪ್ರಾರಂಭಿಸಿದರು.
೧ ಕಿಮೀ ಎತ್ತರದ ಮೇಲಿಂದ ರಥವನ್ನು ಕೆಳಗಡೆಗೆ ಎಳೆದುಕೊಂಡು ಬರುವ ದೃಶ್ಯವನ್ನು ನೋಡಲು ೧೫ ಸಾವಿರಕ್ಕಿಂತ ಹೆಚ್ಚು ಭಕ್ತರು ಬೆಳ್ಳಂ ಬೆಳಿಗ್ಗೆಯೇ ಸೇರಿದ್ದರು. ರಥವನ್ನು ಕೆಳಗಡೆಗೆ ಎಳೆದುಕೊಂಡು ಗ್ರಾಮದ ರಥ ಬೀದಿಯಲ್ಲಿ ಸಾಗಿ ನಂತರ ಮತ್ತೆ ಬೆಟ್ಟದ ಮೇಲಕ್ಕೆ ರಥವನ್ನು ಎಳೆದುಕೊಂಡು ಹೋದರು. ಇದೇ ದಿನ ರಾತ್ರಿ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಕೂಡಾ ನಡೆಯಿತು.
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ ಶುಕ್ರವಾರ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.
-ಮಂಜಪ್ಪ ಟಿ.ಆರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.