ಅಂದು ಮಕ್ಕಳು ಮನೆಯಲ್ಲಿ ಮನೆಯ ಹೊರಗೆ ಒಳಗೆ ಓಡಾಡಿಕೊಳ್ಳುತ್ತಾ ಆಟವಾಡಿಕೊಳ್ಳುತ್ತಿದ್ದರು.
ಅಂದು ತಾತ ಮತ್ತು ಅಜ್ಜಿ ಊರಿನಿಂದ ಬಂದರು.
ಮೊಮ್ಮಕ್ಕಳಿಗೆ ತಿನ್ನಲು ತಿನಿಸುಗಳನ್ನು ತಂದಿದ್ದರು.ಅವುಗಳಲ್ಲಿ ಒಂದಿಷ್ಟನ್ನು ಮಕ್ಕಳಿಗೆ ನೀಡಿದರು.ಅವರು ಅದನ್ನು ತಗೆದುಕೊಂಡು ಹೋರಗೆ ಓಡಿಹೋಗಿ ತಮ್ಮ ಗೆಳೆಯರಿಗೆ ಒಂದಿಷ್ಟು ತಮಗಿಷ್ಟವಾದಷ್ಟನ್ನು ಕೊಟ್ಟು ಕೊಟ್ಟು ಹಂಚಿಕೊಂಡು ತಿಂದು ಮುಗಿಸಿದರು.
ಸಾಮಾನ್ಯವಾಗಿ ಮಕ್ಕಳಿಗೆ ಅದೊಂದು ವರ ಸಿಕ್ಕಿಬಿಟ್ಟಿರುತ್ತದೆ.ಅದೇನೆಂದರೆ ದೊಡ್ಡವರು ತಿನ್ನಲು ಏನೇ ಕೊಟ್ಟಿರಲಿ ಅವರೊಟ್ಟಿಗೆ ಮಿತ್ರರಿದ್ದರೆ ಅವರು ತಮ್ಮಲ್ಲಿ ಏನಿರುತ್ತದೊ ಅದರಲ್ಲಿಯೇ ತಮಗಿಷ್ಟವಾದಷ್ಟನ್ನು ಕೊಟ್ಟು ಹಂಚಿಕೊಂಡು ತಿನ್ನುವುದು.ಹಾಗೆಯೇ ಮತ್ತೊಮ್ಮೆ ಖಾಲಿ ಆಯಿತು ಇನ್ನೂ ಕೊಡು ಎಂದು ಮತ್ತೆ ಓಡಿ ಬಂದವು.
ಆಗ ಅಮ್ಮ ಕೊಡುವುದನ್ನು ಕೊಟ್ಟು ಇಲ್ಲಿ ಕುಳಿತುಕೊಳ್ಳಿ ಊರವರಿಗೆಲ್ಲಾ ಕೊಟ್ಟುಕೊಂಡು ಕೂಡ್ತಿರಾ!?ಇಲ್ಲಿ ಕುಳಿತು ತಿನ್ನಿರಿ, ಬೇರೆಯವರ ಮುಂದೆ ತಿನ್ನಬಾರದು ಹೊಟ್ಟೆನೋವು ಶುರುವಾಗುತ್ತದೆ ಎಂದರೆ?ಹಾಗೆ ಹೇಳಿದಮೇಲೆ ಮಕ್ಕಳು ಅದನ್ನು ಪಾಲಿಸದವು.ಮುಂದೇನು? ಹಾಗೆಯೇ ಮಾಡಿ ಮಾಡಿ ಬಚ್ಚಿಟ್ಟು ಬಚ್ಚಿಟ್ಚು ತಿನ್ನುವುದನ್ನು ಕಲಿತ ಮಕ್ಕಳು ದೊಡ್ಡವರಾದಮೇಲೆ ತಮ್ಮವರಿಂದಲೇ ಬಚ್ಚಿಡುವುದನ್ನೂ ಕಲಿತು ಬೇರೆಯಾಗಿ ಹದಗೂಟ್ಟು ಹೋದವು.ಈಗ ಹೇಳಿ ಏಳೆಯರಾಗಿದ್ದಾಗ ಅವರಲ್ಲಿ ಆ ಬೀಜ ಬಿತ್ತಿ ಮುಂದೆ ಪರಿತಪಿಸುವವರಾರು?ನಾವು ಹಾಗೆ ಬಲಿತವರಿಂದ ಯಾವ ಗುಣವನ್ನು ನೀರಿಕ್ಷಿಸಲು ಸಾಧ್ಯ?ಬನ್ನಿ ಅರೀತು ಸಾಗೋಣ ಎಂದೆನ್ನುತ್ತಾರೆ ಅನುಭಾವಿ ಶರಣ ಸಂತರು.
-ವಿ ಪಿ ರಜಪೂತ