ಮೈಸೂರು:ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿರುವ ನಟಿ ಶೃತಿ ವಿರುದ್ಧ ಕನ್ನಡ ಕ್ರಾಂತಿದಳ ಅಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಲಿ
ನಂತರ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲಿ
ಎಂದು ಕಿಡಿಕಾರಿದ್ದಾರೆ.
ಕನ್ನಡ ಚಲನ ಚಿತ್ರ ನಟಿ ಶೃತಿ ರವರು ಬಿಜೆಪಿ ಕಾರ್ಯಕ್ರಮದ ವೇಳೆ ದೇಶ ಕಂಡ ಮಹಾನ್ ನಾಯಕ ಮಾಜಿ ಪ್ರಧಾನಿ ಹೆಮ್ಮೆಯ ಕನ್ನಡಿಗ ದೇವೇಗೌಡರು ಕಟ್ಟಿರುವ ಜೆಡಿಎಸ್ ಪಕ್ಷದ ಮೇಲೆ ನಾಲಿಗೆ ಹರಿ ಬಿಟ್ಟಿದ್ದಾರೆ ಇದು ಅಕ್ಷಮ್ಯ ಎಂದು ಹೇಳಿದ್ದಾರೆ
ಒಂದು ಗ್ರಾಮ ಪಂಚಾಯಿತಿ ಸದಸ್ಯರಾಗುವ ಯೋಗ್ಯತೆಯೂ ಇಲ್ಲದ ನೀವು ದೇಶಕ್ಕೆ ಅದ್ಬುತ ಪ್ರಧಾನಿಯನ್ನು ನೀಡಿದ ದೇವೇಗೌಡರ ವಂಶದ ಬಗ್ಗೆ ಮಾತನಾಡಿರುವುದು ದುರಹಂಕಾರದ ಪರಾಮವಾಧಿ ಎಂಬಂತಿದೆ ಎಂದು ತೇಜಸ್ವಿ ಟೀಕಿಸಿದ್ದಾರೆ.
ನಿಮ್ಮ ಈ ರೀತಿಯ ಡೈಲಾಗ್ ಗಳು ಸಿನಿಮಾಗಳಿಗೆ ಸರಿ,ಯಾರೋ ಗುಜರಾತಿಗಳನ್ನು ಓಲೈಸುವ ಸಲುವಾಗಿ ನೆಲದ ಜೆಡಿಎಸ್ ಪಕ್ಷದ ಬಗ್ಗೆ ಯೋಗ್ಯತೆ ಮೀರಿ ಮಾತನಾಡಿರುವುದು ಅಕ್ಷಮ್ಯ ಅಪರಾದ.
ಕೂಡಲೇ ಶ್ರುತಿ ಅವರು ದೇವೇಗೌಡ ರವರಿಗೆ ರಾಜ್ಯದ ಜನತೆಯ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ನಿಮ್ಮ ಯಾವುದೇ ಚಲನ ಚಿತ್ರಗಳನ್ನು ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.