ಯಾದಗಿರಿ/ವಡಗೇರಾ:ಮುಂಬರುವ ವಿಧಾನಸಭಾ ಚುನಾವಣೆಯ ಮತದಾನವನ್ನು ಶಾಂತಿ ಸುವ್ಯವಸ್ಥೆಯಿಂದ ನಡೆಸಲು ಜಿಲ್ಲಾಡಳಿತ ಮತ್ತು ರಾಜ್ಯ ಚುನಾವಣಾ ಅಯೋಗದ ನಿರ್ದೇಶನದಂತೆ ಪಟ್ಟಣದಲ್ಲಿ ಭದ್ರತಾ ಪಡೆಯ ಸೈನಿಕರ ಪಥ ಸಂಚಲನವನ್ನು ಆಯೋಜನೆ ಮಾಡಲಾಗಿತ್ತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಥ ಸಂಚಲನಕ್ಕೆ ಅಪರ ಜಿಲ್ಲಾಧಿಕಾರಿಗಳು ಮತ್ತು ಸಿಪಿಐ ಅಧಿಕಾರಿಗಳು ಚಾಲನೆ ನೀಡಿದರು.
ಬಸವೇಶ್ವರ ವೃತ್ತದಿಂದ ಕನಕ ವೃತ್ತ,ಗ್ರಾಮ ಪಂಚಾಯತಿ,ಕಂಬದರಾಯ ದೇವಸ್ಥಾನ ಸೇರಿದಂತೆ ಬಸ್ ಸ್ಟ್ಯಾಂಡ್ ರಸ್ತೆಯ ಮೂಲಕ ಪಥ ಸಂಚಲನ ಪಟ್ಟಣದ ಪೊಲೀಸ್ ಠಾಣೆಗೆ ಮುಕ್ತಾಯಗೊಂಡಿತು. ಇನ್ನೂ ಎರಡು ದಿನಗಳ ಕಾಲ ಪಟ್ಟಣದ ಗ್ರಾಮೀಣ ಭಾಗದ ಸೂಕ್ಷ್ಮ ಮತ್ತು ಅಧಿಸೂಕ್ಷ್ಮ ಪ್ರದೇಶ ಮತ್ತು ವಾರ್ಡುಗಳ ಪ್ರಮುಖ ರಸ್ತೆಗಳಲ್ಲಿ ಸೈನಿಕರ ಪಥ ಸಂಚಲನ ನಡೆಯಲಿದೆ ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಮಾತನಾಡಿ,2023ರ ವಿಧಾನಸಭಾ ಚುನಾವಣೆ ಪ್ರಕ್ರಿಯೆನ್ನು
ಶಾಂತಿ ಮತ್ತು ಸೌಹಾರ್ದತೆ ಮತ್ತು ನ್ಯಾಯ ನಿರ್ಬಿಡೆಯಿಂದ ನಡೆಸುವ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.