ಎಂ. ಪಿ. ಪ್ರಕಾಶ್ ಹಾಗೂ ಜೆ. ಹೆಚ್. ಪಟೇಲರ ನಡುವೆ ಅವಿನಾಭಾವ ಸಂಬಂಧವಿತ್ತು ಪ್ರಕಾಶ್ ಅವರನ್ನ ಪಟೇಲ್ ಅವರು ಯಾವಾಗಲೂ ಸರ್ವಜ್ಞ ಎಂದೇ ಕರೆಯುತ್ತಿದ್ದರು ಅಂದಿನ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಸಮರ್ಪಕ ಉತ್ತರ ನೀಡುವ ಏಕೈಕ ಸಮರ್ಥ ವ್ಯಕ್ತಿ ಎಂದರೆ ಅದು ಎಂ.ಪಿ.ಪಿ ಆಗಿದ್ದರು. ಎಂ.ಪಿ.ಪ್ರಕಾಶ್ ಅವರು ಒಬ್ಬ ಶ್ರೇಷ್ಠ ರಾಜಕಾರಣಿ ಹಾಗೂ ಶ್ರೇಷ್ಠ ಚಿಂತಕರು.ನಮ್ಮಂತಹ ಅನೇಕ ಯುವ ಲೇಖಕರಿಗೆ ದೊಡ್ಡ ನೈತಿಕ ಶಕ್ತಿ ಆಗಿದ್ದರು ಪ್ರಕಾಶ್ ಅವರು ಸಾಮಾಜಿಕ ಚಳುವಳಿಗಳ ಮೂಲಕವೇ ರಾಜಕಾರಣ ಪ್ರವೇಶ ಮಾಡಿದ ಎಂ.ಪಿ.ಪಿ.ಅವರು ನಾಡು ಕಂಡ ಅತ್ಯುತ್ತಮ ಸಂಸದೀಯ ಪಟು ಆಗಿದ್ದರು ರಾಜಕಾರಣದಲ್ಲಿ ವೈಚಾರಿಕತೆ ಮತ್ತು ಬದ್ಧತೆಯನ್ನು ಉಳಿಸಿಕೊಂಡಿದ್ದರು ಪ್ರಕಾಶ್ ಅವರು ಸಾರ್ವಜನಿಕ ಸೇವೆಯಲ್ಲಿ ನಿಷ್ಕಳಂಕ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ ಎಂ.ಪಿ.ಪಿ ಅವರು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಯಾದ ಛಾಪುಮೂಡಿಸಿದ್ದರು.ಕೇವಲ ರಾಜಕಾರಣಯಾಗಿ ಅಲ್ಲದೇ ಕಲೆ,ಸಾಹಿತ್ಯ,ಸಂಗೀತಗಳ ಸಂಗಮ ಸ್ಥಳವಾಗಿದ್ದರು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ರಾಜಕೀಯ ನಡೆಸುತ್ತಿದ್ದರಿಂದಲೇ ಯಾವ ಪಕ್ಷದಲ್ಲೂ ವೈರಿಗಳಿರಲಿಲ್ಲ ಪ್ರಕಾಶ್ ಅವರು ಆಡಳಿತ ನಡೆಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಎಂ.ಪಿ.ಪಿ. ಅವರು ಅಜಾತಶತ್ರು ಆಗಿದ್ದರು ಇವರು ಶ್ರೇಷ್ಠ ಚಿಂತಕರು ಹಾಗೂ ಆಳವಾದ ಅಧ್ಯಯನ ಶೀಲರು, ವಾಗ್ಮಿಗಳು,ನಡೆ ನುಡಿಗಳಲ್ಲಿ ನೇರತನವನ್ನು ಹೊಂದಿದ್ದವರು ಪ್ರಕಾಶ್ ಸಾಹೇಬ್ರು.
ಪ್ರಕಾಶ್ ಅವರು ಕೇವಲ ರಾಜಕೀಯ ರಂಗಕ್ಕೆ ಸೀಮಿತವಾಗದೆ ಕನ್ನಡ ನಾಡಿನ ರಂಗಭೂಮಿ,ಸಾಹಿತ್ಯ ಲೋಕ ಹಾಗೂ ರಾಜಕೀಯ ರಂಗದ ಕೊಂಡಿಯಾಗಿದ್ದ ಎಂ. ಪಿ. ಪಿ. ಅವರು ಸರಸ್ವತಿ ಜೊತೆಗೆ ಅಧಿಕಾರ ಒಟ್ಟಿಗೆ ನಿಭಾಯಿಸಿದವರು ಇಂತಹ ನಾಯಕರು ನಮಗೆ ಅಪರೂಪ ಇವರನ್ನು ಎಷ್ಟೋ ಹಿರಿಯ ನಾಯಕರು “ರಾಜಕೀಯ ಸಂತ “ಎಂದೇ ಕರೆದಿದ್ದಾರೆ.
ಪ್ರಕಾಶ್ ಸಾಹೇಬ್ರು ಸರಸ ಮಾತುಗಾರರಾಗಿದ್ದರು, ಗಂಭೀರ ಚಿಂತಕ, ಸಾಹಿತ್ಯದ ಆರಾಧಕ, ಸಮಸ್ತ ರಂಗಭೂಮಿಯ ಪೋಷಕ.ಎಂ. ಪಿ. ಪ್ರಕಾಶ್ ಸಾಹೇಬ್ರು ತಮಾಷೆಗೂ ಯಾರನ್ನೂ ಬೈಯದ, ಯಾವುದೇ ಕಾರಣಕ್ಕೂ ಅವಾಚ್ಯ ಶಬ್ದಗಳನ್ನು ಬಳಸದ ಹಾಗೂ ಅಪಕೀರ್ತಿಗೆ ಒಳಗಾಗದ ಅಪರೂಪದ ರಾಜಕಾರಣಿ ಪ್ರಕಾಶ್ ಅವರು. ಶ್ರೇಷ್ಠ ಜ್ಞಾನಸಂಪನ್ನರಾಗಿದ್ದರಿಂದ ಬಹಳ ಗೌರವಯುತವಾಗಿ ಹೇಳುತ್ತಿದ್ದರು. ಕಲುಷಿತ ರಾಜಕಾರಣದಲ್ಲಿ ಮುತ್ಸದ್ದಿತನ ಬೆಳಸಿಕೊಂಡಿದ್ದ ಅವರಿಂದ ಕಲಿತುಕೊಳ್ಳುವುದು ಬಹಳಷ್ಟಿದೆ ಎನ್ನಲಾಗಿದೆ ಎನ್ನುತ್ತಾರೆ ಗಂಗಜ್ಜಿ ನಾಗರಾಜ್ ಅವರು.