ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಹದೇಶ್ವರ ದೇವಸ್ಥಾನಕ್ಕೆ ಹರಿದು ಬಂದ ಆದಾಯ ಬರೋಬ್ಬರಿ 200ಕೋಟಿ.
*ಕೋಟಿ ಕೋಟಿ ಆದಾಯ ಬಂದಿದ್ದರೂ ಗಬ್ಬೆದ್ದು ನಾರುತ್ತಿರುವ ದೇವಸ್ಥಾನದ ಆವರಣ
*ಶೌಚಾಲಯಗಳು ಕೊಳಕು ಸ್ನಾನದ ಕೋಣೆಗಳು
*ಲಾಡ್ಜ್‌ಗಳ ನಿರ್ಮಾಣಕ್ಕೆ ಎಕರೆಗಟ್ಟಲೆ ಜಾಗವಿದೆ ಆದರೆ ಸಾವಿರಾರು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡುವ ಜಾಗ ಮಾತ್ರ ಓಬಿರಾಯನ ಕಾಲದಿಂದಲೂ ಅಷ್ಟೇ ಇದೆ
*ಸಾಮಾನ್ಯ ದರ್ಶನಕ್ಕೆ ಹಾವಿನ ರೀತಿ ಸುತ್ತು ಬಳಸಿಕೊಂಡು ಹೋಗಬೇಕೆಂಬುದೇ ದುರಂತ
*ದೇವಸ್ಥಾನದ ಸುತ್ತಲೂ ಬರಿಗಾಲಲ್ಲಿ ನಡೆಯುವ ಭಕ್ತಾಧಿಗಳಿಗೆ ಕನಿಷ್ಠ ಮ್ಯಾಟ್ ವ್ಯವಸ್ಥೆ ಮಾಡಲು ಸಾಧ್ಯವಾಗದ ಹೊಣೆಗೇಡಿ ಆಡಳಿತ ಮಂಡಳಿ
*ಭಕ್ತಾಧಿಗಳು ತಂಗುವ ಸಾರ್ವಜನಿಕ ಹಾಲ್‌ನಲ್ಲಿ ಬರೀ ದನಗಳ ಸಗಣಿಯೇ ತುಂಬಿದೆ
*ವಾಹನ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಮಾಡಲಾಗದಿದ್ದ ಮೇಲೆ ಏತಕ್ಕಾದರೂ ಬೇಕು ನೂರೆಂಟು ಅಡಿ ಎತ್ತರದ “ಮಾದಪ್ಪನ ಪ್ರತಿಮೆ”
*ಕೋಟಿಗಟ್ಟಲೆ ಬರುವ ಆದಾಯದಲ್ಲಿ ಪವಿತ್ರ ಕ್ಷೇತ್ರವೊಂದರಲ್ಲಿ ಕನಿಷ್ಠ ಸ್ವಚ್ಛತೆ ಶಿಸ್ತುಬದ್ಧವಾದ ನಿರ್ವಹಣೆ ಶುಚಿ-ರುಚಿಯಾದ ಪ್ರಸಾದ ವಿತರಣೆ ಮಾಡಲಾಗದಿದ್ದ ಮೇಲೆ ಇನ್ನು ದೇಶ ಉದ್ಧಾರ ಮಾಡಲು ಸಾಧ್ಯವೇ…?
*ಭಕ್ತಾಧಿಗಳಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಕಾಮಗಾರಿಯೇ ಮುಗಿಯದ ಬೃಹತ್ ಪ್ರತಿಮೆಯನ್ನು ರಾಜ್ಯದ ಮುಖ್ಯಮಂತ್ರಿ ಲೋಕಾರ್ಪಣೆಗೊಳಿಸಿದ್ದು ಯಾವ ಪುರುಷಾರ್ಥಕ್ಕೆ
*ದೇವರಿಗೆ ಮುಡಿ ಕೊಡಲು ಹೋದರೆ ಅಲ್ಲೂ ಹಣಕ್ಕಾಗಿ ಪೀಡನೆ…ಹಣ ಕೊಡದಿದ್ದರೆ ಬೇಕಾಬಿಟ್ಟಿ ಕತ್ತಿ ಎಳೆಯೋದು…ಬೇಕಾಬಿಟ್ಟಿ ತಲೆ ಬೋಳಿಸೋದು…ಟಿಕೇಟ್‌ಗಷ್ಟೇ ದುಡ್ಡು ಕೊಟ್ಟರೆ ಸಾಲದು ಅಲ್ಲಿ ಮುಡಿ ಮಾಡುವವನಿಗೆ 50 ರೂ 100 ರೂ ಕೊಡ್ಬೇಕು ಇಲ್ಲಾಂದ್ರೆ ನಿಮ್ಮ ತಲೆ ನಿಮ್ಮದಲ್ಲ ಅಷ್ಟೇ…
*ಪ್ರತಿ ವರ್ಷ ಸಾವಿರಾರು ಜನ ಭಕ್ತಾಧಿಗಳು ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೋಗ್ತಾರೆ,ಅದರಿಂದ ನೂರಾರು ಕೋಟಿ ಬಂದರೂ ಕೂಡಾ ಇದುವರೆಗೆ ದಾರಿ ಮಧ್ಯೆದಲ್ಲಿ ತಂಗಲು ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ.. ದಾರಿ ಮಧ್ಯೆದಲ್ಲಿರಲಿ ಪ್ರತಿಯೊಂದು ಪಾದಯಾತ್ರೆ ತಂಡವೂ ತಂಗುವ ತಾಳು ಬೆಟ್ಟದಲ್ಲಿ ಇದುವರೆಗೆ ಯಾತ್ರಿಗಳಿಗೊಂದು ಸುಸಜ್ಜಿತವಾದ ವಿಶ್ರಾಂತಿ ತಾಣ…ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗದಿರುವುದು ದುರಂತ…ಇನ್ನು ಮುಂದಾದರೂ ಕರುನಾಡ ಕಂದ ವರದಿಗೆ ಮಲೆ ಮಹದೇಶ್ವರ ಆಡಳಿತ ಮಂಡಳಿ ಎಚ್ಚೆತ್ತು ಭಕ್ತಾದಿಗಳಿಗೆ ಮೂಲಸೌಕರ್ಯ ಒದಗಿಸುತ್ತದೆಯೋ ಎಂದು ಕಾದು ನೋಡಬೇಕಿದೆ.
ವರದಿ:ಪ್ರದೀಪ್ ಕುಮಾರ್.ಕೆ.