ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ಳೇರಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಶ್ರೀ ಮಕ್ಕಳಮ್ಮನ ಜಾತ್ರಾ ಮಹೋತ್ಸವ ಇಂದು ಆರಂಭವಾಗಲಿದ್ದು ಏ.11ರ ಮಂಗಳವಾರ ಜಾಗಾರ ಸಮರ್ಪಣೆ. ಏ. 12 ರಂದು ತಂಪು ಜ್ಯೋತಿ ಮತ್ತು ಕೊಂಡೋತ್ಸವ. ಏ.13 ರಂದು ದೊಡ್ಡ ಬಾಯಿಬೀಗ ಹಾಗೂ ಏ. 14ರಂದು ಅಗ್ನಿಕುಂಡ ದರ್ಶನ ಹೀಗೆ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ಕಾರ್ಯಕ್ರಮವು ನಡೆಯಲಿದೆ ಎಂದು ಊರಿನ ಯಜಮಾನರು ತಿಳಿಸಿದ್ದಾರೆ ದೀಪಾಲಂಕಾರಗೊಂಡ ದೇವಾಲಯ:ವಿದ್ಯುತ್ ದೀಪ ಗಳಿಂದ ದೇವಾಲಯ ಹಾಗೂ ಊರಿನ ಪ್ರಮುಖ ಬೀದಿಗಳಲ್ಲಿ ಅಲಂಕಾರ ಮಾಡಲಾಗಿದೆ ಹಾಗೂ ಊರಿನ ಪ್ರಮುಖ ಅಂಗಡಿ ಬೀದಿಯಲ್ಲಿ ಶ್ರೀ ಮಕ್ಕಳ ಮಾರಮ್ಮ ಇರುವಂತ ವಿದ್ಯುತ್ ದೀಪ ಅಲಂಕಾರ ರಾರಾಜಿಸುತ್ತಿದೆ ನೋಡುಗರ ಕಣ್ಣನ್ನು ಸೆಳೆಯುತ್ತಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕೆಂದು ಊರಿನ ಗ್ರಾಮಸ್ಥರು ಯಜಮಾನರು ಅರ್ಚಕರು ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.