ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಪರ ನಟ ನಿರ್ದೇಶಕ ಎಸ್. ನಾರಾಯಣ್ ಪ್ರಚಾರ

ಚಾಮರಾಜನಗರ ಜಿಲ್ಲೆಯ ಹನೂರು: ವಿಧಾನಸಭಾಕ್ಷೇತ್ರದಲ್ಲಿ ಉತ್ತಮ ನಡತೆಯುಳ್ಳ ವ್ಯಕ್ತಿಗೆ ನಿಮ್ಮ ಮತ ನೀಡಿ ಕ್ಷೇತ್ರವನ್ನು ಅಭಿವೃದ್ದಿಯ ಕಡೆಗೆ ಕೊಂಡೊಯ್ಯಬೇಕು ಎಂದು ಚಲನಚಿತ್ರ ನಟ ಮತ್ತು ನಿರ್ದೆಶಕರಾದ ಎಸ್ ನಾರಾಯಣ್ ತಿಳಿಸಿದರು .
ಹನೂರು ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಶಾಸಕರಾದ ಆರ್ ನರೇಂದ್ರರ ಪರವಾಗಿ ಮತಯಾಚನೆ ಮಾಡಿ ಮಾತನಾಡುತ್ತಾ ಅವರು ಬಡವರಿಗೆ ಎಲ್ಲಿ ಕಷ್ಟವಿದೆಯೋ ಅಲ್ಲಿ ಕಣ್ಣೀರು ಒರೆಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ.
ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಂಡಾಗ ಕಾಂಗ್ರೆಸ್ ಗಿಂತ ಅತ್ಯುತ್ತಮ ಪಕ್ಷ ಬೆರೊಂದಿಲ್ಲ ಎಂಬುದು ತಿಳಿಯುತ್ತದೆ ಸ್ವತಂತ್ರ ಪೂರ್ವ ಹಾಗೂ ಸ್ವತಂತ್ರ ನಂತರ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ದೀನ ದಲಿತರು,ಹಿಂದುಳಿದ ವರ್ಗದವರು ಶೋಷಿತ ವರ್ಗದವರು ಸಮಾಜ,ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸುತ್ತಿದೆ ಕಾಂಗ್ರೆಸ್ ಪಕ್ಷ ಮರೆತು ಬದುಕುವುದೇ ಅಪರಾಧ,ಈ ಪಕ್ಷದ ಕೊಡುಗೆ ಅತ್ಯದ್ಭುತ,ಸ್ನೇಹಿತ ಹಾಗೂ ಶಾಸಕ ಆರ್.ನರೇಂದ್ರ ರವರ ಬಳಿ ಹಣವಿಲ್ಲ ಇವರ ಬಳಿ ಒಳ್ಳೆಯ ಗುಣವಿದೆ. ಇವರ ದೊಡ್ಡಪ್ಪ ಹಾಗೂ ಇವರ ತಂದೆ ರಾಜುಗೌಡರು ಸಹ ಕ್ಷೇತ್ರಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಕಳೆದ ಮೂರು ಅವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿರುವ ಇವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಾವು ಬೆಂಬಲಿಸಿ ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಇದೇ ಸಮಯದಲ್ಲಿ ಗುಂಡಾಪುರ ಗ್ರಾಮದಲ್ಲಿ ಮತಯಾಚನೆ ಮಾಡಿದ ನಂತರ
ಶಾಸಕ ಆರ್.

ನರೇಂದ್ರ ಮಾತನಾಡಿ ಮನಮೋಹನ್ ಸಿಂಗ್ ರವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗಲೆಂದು ರಸಗೊಬ್ಬರಗಳಿಗೆ ಸಬ್ಸಿಡಿ ನೀಡಿ ಕಡಿಮೆ ದರದಲ್ಲಿ ಪೂರೈಕೆ ಮಾಡಲಾಗುತ್ತಿತ್ತು.ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತಿತ್ತು. ಹಲವು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಸಹ ನೀಡಲಾಗುತ್ತಿತ್ತು ಆದರೆ ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರಿಗೆ ಯಾವುದೇ ಹೊಸ ಯೋಜನೆ ನೀಡಲು ಸಾಧ್ಯವಾಗಿಲ್ಲ ರಸಗೊಬ್ಬರಗಳ ಬೆಲೆ ಗಗನಕ್ಕೇರಿರುವುದರಿಂದ ಇಂದು ಸಣ್ಣಪುಟ್ಟ ರೈತರು ತಮ್ಮ ಜಮೀನುಗಳನ್ನು ಹಣವಂತರಿಗೆ ಮಾರಿಕೊಳ್ಳುತ್ತಿದ್ದಾರೆ. ಇಂದು ಪ್ರತಿಯೊಂದು ಆಹಾರ ಪದಾರ್ಥಗಳು ಸೇರಿದಂತೆ ದಿನನಿತ್ಯದ ಸಾಮಗ್ರಿಗಳಿಗೆ ತೆರಿಗೆ ಹಾಕುತ್ತಿರುವುದರಿಂದ ಸಾಮಾನ್ಯ ಜನರ ಕಷ್ಟ ಹೇಳುತೀರದಾಗಿದೆ. ಗ್ಯಾಸ್ ಬೆಲೆ ಹೆಚ್ಚಳವಾಗಿರುವುದರಿಂದ ಆದಿವಾಸಿ ಹಾಡಿಗಳಲ್ಲಿ ಸಿಲಿಂಡರ್ ಗಳು ಮೂಲೆ ಸೇರಿಕೊಂಡಿವೆ. ಕೆಲವು ಕಡೆ ಇವುಗಳನ್ನೇ ಟೇಬಲ್ ಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ವಿದೇಶಗಳಲ್ಲಿನ ಸ್ವಿಸ್ ಬ್ಯಾಂಕ್ ಗಳಲ್ಲಿನ ಕಪ್ಪು ಹಣವನ್ನು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಬ್ಯಾಂಕ್ ಖಾತೆ ತೆರೆಸಿದರು ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಹಣ ನೀಡಲು ಸಾಧ್ಯವಾಗಿಲ್ಲ, ಇದೀಗ ಪಾನ್ ಕಾರ್ಡ್ ಹಾಗೂ ಅದರ ಜೋಡಣೆ ಎಂಬ ನೆಪದಲ್ಲಿ ರೂ.1 ಸಾವಿರ ಸುಲಿಗೆ ಮಾಡುತ್ತಿದ್ದಾರೆ ಇಂತಹ ಭ್ರಷ್ಟ ಬಿಜೆಪಿ ಸರ್ಕಾರ ನಮಗೆ ಬೇಕೆ, ಸದಾ ಬಡವರ ಪರ ಚಿಂತಿಸುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಎಲ್ಲಾರಿಗೂ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ‌ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ