ಮೈಸೂರು:ಕರ್ನಾಟಕ ಪ್ರಜಾ ಪಾರ್ಟಿ
ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ನಾಗಲಿಂಗ ಸ್ವಾಮಿ ಅವರು
ಬಸಳ್ಳಿ ಹುಂಡಿ ಮಠದ ಬಸವಲಿಂಗ ಸ್ವಾಮೀಜಿ ಆಶಿರ್ವಾದ ಪಡೆದಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ಕೆ ಆರ್ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.
ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಮೈಸೂರು ಜಿಲ್ಲಾಧ್ಯಕ್ಷ ಕುಮಾರ ಸ್ವಾಮಿ ಮತ್ತು ಕಾರ್ಯಕರ್ತರು ಸೋಮವಾರ ಕ್ಷೇತ್ರಕ್ಕೆ ಆಗಮಿಸಿದ್ದ ಬಸಳ್ಳಿ ಹುಂಡಿಯ ಬಸವ ಲಿಂಗ ಸ್ವಾಮಿಜಿಯವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದರು.
ಕೆ ಆರ್ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮಾಜದ ಮತಗಳೆ ನಿರ್ಣಾಯಕವಾಗಿದೆ.
ಲಿಂಗಾಯತ ಸಮಾಜದ ಅಭ್ಯರ್ಥಿಯಾದ ನನಗೆ ಮಠಾಧಿಪತಿಗಳು ಈ ಚುನಾವಣೆಯಲ್ಲಿ ಆಶಿರ್ವಾದ ಮಾಡಿ ಗೆಲುವು ಸಾಧಿಸಲು ಅವಕಾಶ ಮಾಡಿಕೊಡಬೇಕೆಂದು ಬಸವಲಿಂಗ ಸ್ವಾಮಿಜೀಗಳಲ್ಲಿ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದರು.