ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರಳ ಸಜ್ಜನಿಯ ಆರ್ ನರೇಂದ್ರರನ್ನು ಬೆಂಬಲಿಸಿ:ಉದ್ಯಮಿ ರಂಗಸ್ವಾಮಿ ಸಲಹೆ

ಹನೂರು :ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಇಂದು ನಮ್ಮೆಲ್ಲರಿಗೂ ಮಕ್ಮಲ್ ಟೋಪಿಯಾಕುತ್ತಾರೆ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಸಾಮಾನ್ಯ ಜನರು ಬದುಕುವುದು ಬಹಳ ಕಷ್ಟವಾಗುತ್ತದೆ ಅಲ್ಲದೆ ಬಡವರ ಪರವಾಗಿ ಚಿಂತಿಸುವ ಕಾಂಗ್ರೇಸ್ ಪರವಾಗಿ ಹಾಗೂ
ಅಭಿವೃದ್ದಿ ಪರವಾಗಿ ಜನರ ಕೆಲಸ ಮಾಡುವವರನ್ನು ನೀವು ಆಯ್ಕೆ ಮಾಡಿ ಕೆಲಸಮಾಡದೆ ಇರುವವರನ್ನು ಆಯ್ಕೆಮಾಡಬೇಡಿ ಹಾಗೂ ನಮ್ಮ ಭಾಗದಲ್ಲಿ ವಿಶೇಷವಾಗಿ ಹೆಚ್ವಿನ ಅನುದಾನ ಅಭಿವೃದ್ದಿಯತ್ತ ಕೊಂಡೊಯ್ಯುವ ಶಾಸಕರನ್ನು ಎಲ್ಲರೂ ಅತ್ಯಧಿಕ ಹೆಚ್ಚು ಮತದಿಂದ ಆಯ್ಕೆ ಮಾಡಲು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ಮನವಿ ಮಾಡಿದರು .
ಹನೂರು ಕ್ಷೇತ್ರದ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರ್ ನರೇಂದ್ರ ಅವರು ಕುಡಿಯುವ ನೀರಿನಿಂದ ಪ್ರಾರಂಭಿಸಿ ,ಈ ಭಾಗಕ್ಕೆ ಶಾಲಾ ಕಾಲೇಜ್ ಮಂಜೂರು ಉತ್ತಮ ರಸ್ತೆ , ಚರಂಡಿ ಸೆರಿದಂತೆ ಹಲವಾರು ಕಾಮಗಾರಿಗಳನ್ನು ,ಸಿದ್ದರಾಮಯ್ಯನವರ ಅವಧಿಯಲ್ಲಿ ಮೂರು ಸಾವಿರ ಕೋಟಿ ಅನುದಾನದಲ್ಲಿ ಕ್ಷೇತ್ರ ಅಭಿವೃದ್ದಿ ಮಾಡಿದ್ದೆನೆ ಬಿ ಜೆ ಪಿ ಸರ್ಕಾರವು ಬಂದ ನಂತರ ಬಿಪಿ. ಸಕ್ಕರೆ ಕಾಯಲೆ ಮಾತ್ರೆಗೂ ಜಿಎಸ್ ಟಿ ಹಾಕಿದ ಸರ್ಕಾರ ಅವರದು ಶಾಲಾ ಮಕ್ಕಳಿಗೂ ನೀಡುವ ಬಿಸಿಯುಟ ನಿಲ್ಲಿಸಿದ್ದಿರ ,ಇಂತಹ ಅನೇಕ ಕಾರ್ಯಕ್ರಮವನ್ನು ಬಿ ಜೆ ಪಿ ಸರ್ಕಾರ ನಿಲ್ಲಿಸಿದೆ .ಇದಲ್ಲದೆ ಎದುರಾಳಿಬ್ಬರು ಸಹ ಕ್ಷೇತ್ರದ ಹೊರಗಿನವರು ನಿಮಗೆ ನಮ್ಮ ಅವಶ್ಯಕತೆಯನ್ನು ಮನಗಂಡು ಮತ ನೀಡಲು ಮನವಿ ಮಾಡಿದರು .
ಇದೇ ಸಮಯದಲ್ಲಿ ಅರಬಗೆರೆ ,ಭದ್ರಯನಹಳ್ಳಿ ,ದಂಟಳ್ಳಿ ,ಎಲ್ ಪಿ ಎಸ್ ಕ್ಯಾಂಪ್ ಸೇರಿದಂತೆ ವಿವಿದೆಡೆ ಪ್ರಚಾರ ಕಾರ್ಯ ಮಾಡಿದರು . ಇದೇ ವೇಳೆ ರಾಮಪುರ ಜಿಲ್ಲಾಪಂಚಾಯಿತಿ ಮಾಜಿ ಉಪಾದ್ಯಕ್ಷ ಬಸವರಾಜು ಹನೂರು ಪಟ್ಟಣ ಪಂಚಾಯಿತಿ ಉಪಾದ್ಯಕ್ಷ ಗಿರೀಶ್ ಕುಮಾರ್ , ಸದಸ್ಯ ಹರಿಶ್ ಕುಮಾರ್ ,ಗ್ರಾಪ ಸದಸ್ಯರುಗಳಾದ ಬಸವರಾಜು ,ಶಿವು ,ರಾಜಾರಾಮ್ , ವೆಂಕಟಚಲ,ಶಿವಕುಮಾರ್ ,ಅದ್ಯಕ್ಷರಾದ ಸ್ವಾಮಿ,ಮುಖಂಡರುಗಳಾದ ಸೋಮಶೆಖರ್ ,ಮೆಹಬೂಬ್ ,ಮಾದೇಶ್ ,ಬಸವರಾಜು ,ಶ್ರೀರಂಗಶೆಟ್ಟಿ , ರಾಜಪ್ಪ ,ಶಿವಣ್ಣ ,ಪುಟ್ಟುವಿರನಾಯಕ ,ಸಿದ್ದರಾಜು ,ಸೇರಿದಂತೆ ಇತರರು ಹಾಜರಿದ್ದರು .
ಪ್ರಚಾರದ ಸಮಯಲ್ಲಿ ಅನ್ಯ ಪಕ್ಷ ತೊರೆದು ಹಲವರು ಕಾಂಗ್ರೇಸ್ ಸೆರ್ಪಡೆಗೊಂಡರು ಅವರಲ್ಲಿ , ಸಿದ್ದಮಲ್ಲಪ್ಪ .ಪಚ್ಚೆಗೌಡ,ಗೊವಿಂದ ,ಚಿನ್ನವೆಂಕಟ ಬೊವಿ ,ತಂಬಡಿ ನಾಗಣ್ಣ, ಇತರರು ಹೊಸಳ್ಳಿ ವಿರಮಲ್ಲೆಗೌಡ ,ಮಾದುಗೌಂಡ ,ಚನ್ನಶೆಟ್ಟಿ,ಮಾಲಶೆಟ್ಟಿ ,ಬಸವ ,ಚಿನ್ನಸ್ವಾಮಿ ,ಶಂಬ, ಚಾಮುಂಡಿ ,ಗಣೆಶ ,ಚುಕ್ಕನಾಯಕ ,ರುದ್ರ ,ಮಾದೆವಸೆಟ್ಟಿ,
ಜಡೆಸ್ವಾಮಿ ಟಿ ವಿಲೆಜ್ ,ಕರ್ಪಾಚಿ ಅಮ್ಮ ,ಡಿ ವಿಲೆಜ್ ಜಡಿಯ , ಸೇರಿದಂತೆ ಇನ್ನು ಹಲವರಿದ್ದರು.

ವರದಿ-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ